/newsfirstlive-kannada/media/post_attachments/wp-content/uploads/2024/01/rakshak-bulet.jpg)
ಬಿಗ್‌ಬಾಸ್ ಸೀಸನ್ 10 ಸ್ಪರ್ಧಿ ರಕ್ಷಕ್ ಬುಲೆಟ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ರಕ್ಷಕ್ ಆಡಿರೋ ಒಂದು ಡೈಲಾಗ್ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ.
ಪಕ್ಕದಲ್ಲಿದ್ದ ಹುಡುಗಿಯನ್ನು ಹೊಗಳುವ ಭರದಲ್ಲಿ ರಕ್ಷಕ್ ಬುಲೆಟ್ ಅವರು ನಾಡದೇವಿ ಚಾಮುಂಡೇಶ್ವರಿಗೆ ಅಪಮಾನ ಮಾಡಿದ ಆರೋಪಕ್ಕೆ ತುತ್ತಾಗಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ ಸ್ಟೇಜ್ ಮೇಲೆ ರಕ್ಷಕ್ ಬುಲೆಟ್ ಅವರು ನಿಮ್ಮನ್ನು ನೋಡ್ತಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು ಪ್ಯಾಂಟು ಶರ್ಟು ಹಾಕೊಂಡು ಸ್ವಿಟ್ಜರ್ಲೆಂಡ್‌ನಲ್ಲಿ ಟ್ರಿಪ್ ಹೊಡಿತಿದ್ದಾಳೆ ಅನ್ನಿಸ್ತಿದೆ ಎಂದು ಡೈಲಾಗ್ ಹೊಡೆದಿದ್ದಾರೆ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ಹೀಗಾಗಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಹಾಗೂ ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ರಕ್ಷಕ್ ಬುಲೆಟ್ ವಿರುದ್ಧ ಇಂದು ಹಿಂದೂ ಕಾರ್ಯಕರ್ತ ಮಹೇಶ್ ಎಂಬುವವರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ದೂರು ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಮತ್ತೊಬ್ಬ ಬಿಗ್‌ಬಾಸ್ ಸ್ಪರ್ಧಿಯ ಯಡವಟ್ಟು.. ಇಂದು ರಕ್ಷಕ್ ಬುಲೆಟ್ ವಿರುದ್ಧ ದೂರು ದಾಖಲು; ಆಗಿದ್ದೇನು?
ಹಿಂದೂ ದೂರಿನಲ್ಲಿ ಏನಿದೆ?
ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ಮತ್ತು ಹಿಂದೂ ಪವಿತ್ರ ದೇವತೆಯಾದ ಚಾಮುಂಡೇಶ್ವರಿ ತಾಯಿಯ ಅವಹೇಳನದ ಕುರಿತು.
ಹೊಸ ಕಲಾವಿದ ಎಂದು ಗುರುತಿಸಲ್ಪಡುವ ರಕ್ಷಕ್ ಬುಲೆಟ್ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಅವಹೇಳನ ಮಾತನಾಡಿದ್ದಾರೆ. ಹಿಂದೂ ಧರ್ಮದ ಅತ್ಯುನ್ನತ ಮಾತೃಸ್ವರೂಪಿ ದೇವರಾದ ತಾಯಿ ಚಾಮುಂಡೇಶ್ವರಿಯ ಅವಹೇಳವನ್ನು ಕಾರ್ಯಕ್ರಮ ಒಂದರಲ್ಲಿ ಸಾರ್ವಜನಿಕವಾಗಿ ಮಾಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುತ್ತದೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ವಿಷಯವು ಇದೀಗ ತಾನೇ ಸಾರ್ವಜನಿಕವಾಗಿ ಬೆಳೆಯುತ್ತಾ, ತಾನು ಎಲ್ಲರಿಗಿಂತ ಮೇಲೆ ಎಂದುಕೊಂಡಿರುವ ಯುವಕನಿಗೆ ಅರಿವು ಮೂಡಿಸುವಂತಾಗಬೇಕು. ಸಮಸ್ತ ಹಿಂದೂ ಸಮಾಜದ ಪರವಾಗಿ ನಾವು ಇದನ್ನು ಖಂಡಿಸುತ್ತಾ, ರಕ್ಷಕ್ ಬುಲೆಟ್, ಜೀ ನ್ಯೂಸ್ "ಭರ್ಜರಿ ಬ್ಯಾಚುಲರ್-2' ಕಾರ್ಯಕ್ರಮದ ರೂವಾರಿಗಳು, ನಿರ್ದೇಶಕರು, ಬರಹಗಾರರು ಎಲ್ಲರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಕಳಕಳಿಯ ಮನವಿಯನ್ನು ಮಾಡುತ್ತೇವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ