/newsfirstlive-kannada/media/post_attachments/wp-content/uploads/2024/12/SM_KRISHAN_CM_DR_RAJ.jpg)
ಬೆಂಗಳೂರು: ಸೌಮ್ಯ ಸ್ವಭಾವದ ವ್ಯಕ್ತಿತ್ವಕ್ಕೆ ಹೆಸರಾಗಿದ್ದ, ಮಾಜಿ ಕೇಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ (92) ಅವರು ವಿಧಿವಶರಾಗಿದ್ದಾರೆ. ಇವರ ಅಧಿಕಾರದಲ್ಲಿ ಡಾ.ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ್ದೇ ದೊಡ್ಡ ಘಟನೆಯಾಗಿತ್ತು. ಆದ್ರೆ ಅದನ್ನೆಲ್ಲ ಎಸ್.ಎಂ ಕೃಷ್ಣ ಅವರು ನಿಭಾಯಿಸಿದ್ದು ಎಲ್ಲರನ್ನೂ ಸೆಳೆದಿತ್ತು.
ವರನಟ ಡಾ.ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದಾಗ ಎಸ್.ಎಂ ಕೃಷ್ಣ ಅವರು ರಾಜ್ಯ ಮುಖ್ಯಮಂತ್ರಿಗಳು ಆಗಿದ್ದರು. ಡಾ.ರಾಜ್ಕುಮಾರನ್ನ ಕಿಡ್ನಾಪ್ ಮಾಡಿದ ಮೇಲೆ ಎಸ್.ಎಂ ಕೃಷ್ಣ ಅವರು ಬಹಳಷ್ಟು ನೊಂದುಕೊಂಡಿದ್ದರು. ಹೇಗದರೂ ಮಾಡಿ ಅವರನ್ನು ಬಿಡಿಸಿಕೊಂಡು ಬರಬೇಕು ಎಂದು ಸಾಕಷ್ಟು ಶ್ರಮ ವಹಿಸಿದ್ದರು. ಈ ಸಂಬಂಧ ತಮಿಳುನಾಡಿನ ರಾಜಕಾರಣಿಗನ್ನು ಭೇಟಿ ಮಾಡಿ ಚರ್ಚೆ ಕೂಡ ಮಾಡಿದ್ದರು.
ಡಾ.ರಾಜ್ಕುಮಾರ್ ಅವರನ್ನು ಕಿಡ್ನಾಪ್ ಮಾಡಿದ್ದ ವೀರಪ್ಪನ್ ಅವರನ್ನು ಕಾಡಿಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ರಾಜ್ಕುಮಾರ್ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದರು. ಅಲ್ಲದೇ ಅವರ ಜೊತೆ ಕುಳಿತುಕೊಂಡಿರುವುದು ಇಲ್ಲಿ ಕಾಣಬಹುದು. ವೀರಪ್ಪನ್, ರಾಜ್ಕುಮಾರ್ರನ್ನ ಕಿಡ್ನಾಪ್ ಮಾಡಿದ ಮೇಲೆ ಎಸ್.ಎಂ ಕೃಷ್ಣ ಅವರ ಸರ್ಕಾರಕ್ಕೆ ಒತ್ತಡವಾಗಿತ್ತು. ಅವರನ್ನು ಮತ್ತೆ ರಾಜ್ಯಕ್ಕೆ ಕರೆದುಕೊಂಡು ಬರುವುದೇ ಸಿಎಂಗೆ ದೊಡ್ಡ ಜವಾಬ್ದಾರಿ ಆಗಿತ್ತು.
ಇದನ್ನೂ ಓದಿ:ಕನ್ನಡಕ್ಕಾಗಿ ವಾರದ ಹಿಂದಷ್ಟೇ ಪತ್ರ ಬರೆದಿದ್ದ SM ಕೃಷ್ಣ; ಹಿರಿಯ ಮುತ್ಸದ್ದಿಯ ಕೊನೆಯ ಪತ್ರ
ಎಸ್.ಎಂ ಕೃಷ್ಣರ ನಿರಂತರ ಪ್ರಯತ್ನದ ಫಲವಾಗಿ 108 ದಿನಗಳ ಬಳಿಕ ಡಾ.ರಾಜ್ಕುಮಾರ್ ಅವರು ಆರೋಗ್ಯವಾಗಿ, ಸುರಕ್ಷಿತವಾಗಿ ವಾಪಸ್ ರಾಜ್ಯಕ್ಕೆ ಬಂದರು. ಈ ವೇಳೆ ಇಡೀ ಕರ್ನಾಟಕವೆಲ್ಲಾ ದೊಡ್ಡ ಸಂಭ್ರಮಾಚರಣೆ ಮಾಡಿತು. ಡಾ.ರಾಜ್ಕುಮಾರನ್ನ ಕರೆದುಕೊಂಡು ಬಂದ ಮೇಲೆ ಎಸ್.ಎಂ ಕೃಷ್ಣ ಅವರು ಸಂತಸ ಪಟ್ಟಿದ್ದರು.
ಕಾಡುಗಳ್ಳ ವೀರಪ್ಪನ್ನಿಂದ ಡಾ.ರಾಜ್ಕುಮಾರ್ ಅವರು ಸೇಫ್ ಆಗಿ ಮರಳಿದ ಮೇಲೆ ಎಸ್.ಎಂ ಕೃಷ್ಣ ಅವರು ಬೆಟ್ಟದಷ್ಟು ಖುಷಿ ಪಟ್ಟಿದ್ದರು. ಸರ್ಕಾರದ ಮೇಲೆ ಇದ್ದ ಎಲ್ಲ ಒತ್ತಡ ಕಡಿಮೆ ಆಯಿತು. ಅವರೊಂದಿಗೆ ಕುಳಿತು ಎಸ್.ಎಂ ಕೃಷ್ಣ ಮಾಧ್ಯಮ ನಡೆಸಿಕೊಟ್ಟರು. ರಾಜ್ಯದ ಜನರಿಗೆ ಸಂತಸ ವಿಷಯ ತಿಳಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ