ಮಾಜಿ ಸಿಎಂ BS ಯಡಿಯೂರಪ್ಪ 82ನೇ ಹುಟ್ಟುಹಬ್ಬದ ಸೆಲೆಬ್ರೇಷನ್ ಹೇಗಿತ್ತು? ಟಾಪ್​ 10 ಫೋಟೋಗಳು ಇಲ್ಲಿವೆ!

author-image
Bheemappa
Updated On
ಮಾಜಿ ಸಿಎಂ BS ಯಡಿಯೂರಪ್ಪ 82ನೇ ಹುಟ್ಟುಹಬ್ಬದ ಸೆಲೆಬ್ರೇಷನ್ ಹೇಗಿತ್ತು? ಟಾಪ್​ 10 ಫೋಟೋಗಳು ಇಲ್ಲಿವೆ!
Advertisment
  • ಹುಟ್ಟೂರು ದೇವಾಲಯಕ್ಕೆ ಭೇಟಿ ನೀಡಲಿರುವ ಬಿ.ಎಸ್​ ಯಡಿಯೂರಪ್ಪ
  • BSY ಬರ್ತ್​ಡೇ ಹಿನ್ನೆಲೆ ಹೂಗಳಿಂದ ಸಿಂಗಾರಗೊಂಡ ದವಳಗಿರಿ ನಿವಾಸ
  • ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಜಯೇಂದ್ರ

ಬೆಂಗಳೂರು: ಹಿರಿಯ ರಾಜಕಾರಣಿ ಹಾಗೂ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರು ಇಂದು 82ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ಮನೆಯಲ್ಲಿ ಸಂಭ್ರಮ ಕಳೆಗಟ್ಟಿದೆ. publive-image

ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ತಮ್ಮ ಕುಟುಂಬ ಸಮೇತ ಬಿ.ಎಸ್​ ಯಡಿಯೂರಪ್ಪ ಅವರು ಮಧ್ಯಾಹ್ನ 2 ಗಂಟೆಗೆ ಯಡಿಯೂರಿನಲ್ಲಿನ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

publive-image

ತಮ್ಮ ಕುಟುಂಬ ಸಮೇತ ಬಿ.ಎಸ್​ ಯಡಿಯೂರಪ್ಪ ದೇವಾಲಯಕ್ಕೆ ತೆರಳುತ್ತಿದ್ದರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಇರಲಿದ್ದಾರೆ. ಈ ಸಮಯದಲ್ಲಿ ಮಾತ್ರ ಪಕ್ಷದ ಮುಖಂಡರು, ಆಪ್ತರು, ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.

publive-image

ತಂದೆಯ ಹುಟ್ಟು ಹಬ್ಬ ನಿಮಿತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಸದ ಬಿ.ವೈ ರಾಘವೇಂದ್ರ ಅವರು ಕುಟುಂಬ ಸಮೇತರಾಗಿ ಡಾಲರ್ಸ್ ಕಾಲೋನಿ ನಿವಾಸಕ್ಕೆ ಆಗಮಿಸಿದ್ದಾರೆ. ತಂದೆಗೆ ಸಿಹಿ ತಿನಿಸಿ, ಶುಭ ಕೋರಿದ್ದಾರೆ.

publive-image

ಇದಾದ ಮೇಲೆ ಬಿ.ವೈ ವಿಜಯೇಂದ್ರ ಹಾಗೂ ಪತ್ನಿ ಇಬ್ಬರು ಆಶೀರ್ವಾದ ಪಡೆದುಕೊಂಡಿದ್ದಾರೆ. ಪತ್ನಿ ಸಮೇತ ವಿಜಯೇಂದ್ರ ಅವರು ತಂದೆ ಯಡಿಯೂರಪ್ಪ ಅವರ ಕಾಲಿಗೆ ನಮಸ್ಕಾರ ಮಾಡಿದ್ದಾರೆ.

publive-image

ಮಾಜಿ ಸಿಎಂ ಯಡಿಯೂರಪ್ಪ ಬರ್ತ್​ಡೇ ಹಿನ್ನೆಲೆಯಲ್ಲಿ ದವಳಗಿರಿಯ ನಿವಾಸ ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಇದರ ಜೊತೆಗೆ ಹುಟ್ಟುಹಬ್ಬಕ್ಕೆ ಶುಭ ಕೋರುವ ಬ್ಯಾನರ್, ಫ್ಲೆಕ್ಸ್​ಗಳ ಅಳವಡಿಕೆ ಜೋರಾಗಿದೆ.

publive-image

ಇನ್ನು ಪಕ್ಷದ ಮುಖಂಡರು, ಆಪ್ತರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಿವಾಸಕ್ಕೆ ಆಗಮಿಸಿ ಶುಭಶಯಗಳನ್ನು ತಿಳಿಸುತ್ತಿದ್ದಾರೆ. ಹುಟ್ಟು ಹಬ್ಬ ಇರುವುದರಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ಇಡೀ ಕುಡುಂಬದೊಂದಿಗೆ ದವಳಗಿರಿ ನಿವಾಸದಲ್ಲಿ ಫೋಟೋ ತೆಗೆಸಿಕೊಂಡರು.

publive-image

ಅಲ್ಲದೇ 82ನೇ ವರ್ಷದ ಜನ್ಮದಿನ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅಭಿಮಾನಿಗಳು 82 ಕೆ.ಜಿ ತೂಕದ ಕೇಕ್ ತಯಾರಿಸಿದ್ದು ವಿಶೇಷವಾಗಿತ್ತು.

publive-image

ಹೀಗಾಗಿ ಯಡಿಯೂರಪ್ಪ ಅವರು 82ಕೆ.ಜಿ ತೂಕದ ಕೇಕ್ ಕತ್ತರಿಸೋ ಮೂಲಕ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

publive-image

ಈ ವೇಳೆ ಕುಟುಂಬದವರೂ ಸಹ ಭಾಗಿಯಾಗಿ ಖುಷಿ ಪಟ್ಟಿದ್ದಾರೆ.

publive-image

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment