ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲಿ ಇಂದು ಮಹತ್ವದ ಸಭೆ.. ಹೈಕಮಾಂಡ್​ಗೆ ಸ್ಪಷ್ಟ​ ಸಂದೇಶ ರವಾನಿಸಲು ಸಿದ್ಧತೆ

author-image
Bheemappa
Updated On
ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲಿ ಇಂದು ಮಹತ್ವದ ಸಭೆ.. ಹೈಕಮಾಂಡ್​ಗೆ ಸ್ಪಷ್ಟ​ ಸಂದೇಶ ರವಾನಿಸಲು ಸಿದ್ಧತೆ
Advertisment
  • ಬೆಂಗಳೂರಿನ ದವಳಗಿರಿ ನಿವಾಸಕ್ಕೆ ಬಿಜೆಪಿಯ ನಿಷ್ಠರ ಭೇಟಿ, ಸಭೆ
  • ಶಾಸಕ ಯತ್ನಾಳ್ ಬಣದ ವಿರುದ್ಧ ವಿಜಯೇಂದ್ರ ಪ್ರಸ್ತಾಪ ಮಾಡಿದ್ರಾ?
  • ರಾಜ್ಯಾಧ್ಯಕ್ಷ ವಿಜಯೇಂದ್ರ ದೆಹಲಿ ಭೇಟಿ ಬಗ್ಗೆ ಜಾರಕಿಹೊಳಿ ಪ್ರತಿಕ್ರಿಯೆ

ಉಪ ಚುನಾವಣೆಯ ಮುಖಭಂಗದ ಬಳಿಕ ರಾಜ್ಯ ಬಿಜೆಪಿ ಪಾಳಯದಲ್ಲಿ ಬಿರುಗಾಳಿಯೇ ಎದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ದನಿ ಎತ್ತಿರುವ ಭಿನ್ನರ ವಿರುದ್ಧ ಬಿಜೆಪಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಒಳ ಬೇಗುದಿ ಹೀಗೆ ಮುಂದುವರೆದ್ರೆ, ರಾಜ್ಯದಲ್ಲಿ ಪಕ್ಷಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇರೋದ್ರಿಂದ ಎಲ್ಲದಕ್ಕೂ ಬ್ರೇಕ್​ ಹಾಕಲು ಬಿ.ಎಸ್ ಯಡಿಯೂರಪ್ಪ ಬಣ ಅಖಾಡಕ್ಕಿಳಿದಿದೆ.

ಇಂದು ಬಿಎಸ್​ವೈ ನಿವಾಸದಲ್ಲಿ ಬಿಜೆಪಿ ನಿಷ್ಠರ ಸಭೆ

ಶಾಸಕ ಬಸನಗೌಡ ಯತ್ನಾಳ್ ತಂಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಕೊನೆಗೂ ತೊಡೆ ತಟ್ಟಿದ್ದಾರೆ. ಉಪಚುನಾವಣೆ ಸೋಲಿನ ಬಳಿಕ ದೆಹಲಿ ಯಾತ್ರೆ ಕೈಗೊಂಡಿದ್ದ ವಿಜಯೇಂದ್ರ, ಹೈಕಮಾಂಡ್​ಗೆ ವರದಿ ಒಪ್ಪಿಸಿ ಬಂದಿದ್ದಾರೆ. ಹೈಕಮಾಂಡ್ ನಾಯಕರ ಮುಂದೆ ಯತ್ನಾಳ್ ಟೀಂನ ಬಗ್ಗೆ ವಿಜಯೇಂದ್ರ ಪ್ರಸ್ತಾಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯ ನಿಷ್ಠರ ಪಡೆ ಯತ್ನಾಳ್​ ಬಣದ ವಿರುದ್ಧ ಮತ್ತಷ್ಟು ಗರಂ ಆಗಿದೆ. ಇವತ್ತು ಬಿಎಸ್​ ಯಡಿಯೂರಪ್ಪನವರ ಬೆಂಗಳೂರಿನ ದವಳಗಿರಿ ನಿವಾಸಕ್ಕೆ ಬಿಜೆಪಿ ನಿಷ್ಠರ ಭೇಟಿ ನೀಡಿ ಮಹತ್ವದ ಸಭೆ ನಡೆಸಲಿದೆ.

publive-image

ಇದನ್ನೂ ಓದಿ:ನ್ಯೂಸ್​ಫಸ್ಟ್​ ಸಾರಥ್ಯದ ಆರೋಗ್ಯ ಹಬ್ಬ ಮೊದಲ ದಿನ ಯಶಸ್ವಿ.. 2ನೇ ದಿನ ಏನೆಲ್ಲಾ ಕಾರ್ಯಕ್ರಮ ಇರಲಿವೆ?

ಬೆಳಗ್ಗೆ 9 ಗಂಟೆಗೆ ದವಳಗಿರಿ ನಿವಾಸಕ್ಕೆ ಆಗಮಿಸಲಿರುವ ಎಂ.ಪಿ.ರೇಣುಕಾಚಾರ್ಯ ಟೀಂ, ಬಿಎಸ್ ಯಡಿಯೂರಪ್ಪರನ್ನು ಭೇಟಿಯಾಗಿ, ಬಸನಗೌಡ ಯತ್ನಾಳ್​ ಬಣದ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ದೂರು ನೀಡಲು ಪ್ಲಾನ್​ ಮಾಡಿದ್ದಾರೆ. ಯತ್ನಾಳ್​ ವಿಚಾರದಲ್ಲಿ ಸ್ಪಷ್ಟ ಸೂಚನೆ ನೀಡದ ಹೈಕಮಾಂಡ್​ಗೆ ಖಡಕ್​ ಸಂದೇಶ ರವಾನೆ ಮಾಡಲು ಬಿಜೆಪಿಯ ನಿಷ್ಠರ ಬಣ ಮುಂದಾಗಿದೆ. ಇದೇ ವೇಳೆ ಎರಡು ದಿನಗಳ ಪ್ರವಾಸದ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಅತೃಪ್ತರ ಕಮಿಟಿಗೆ ಲೀಡರ್​ ಆದ್ರಾ ಅರವಿಂದ್​ ಲಿಂಬಾವಳಿ?

ಇನ್ನು ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿರುವ ರಮೇಶ್​ ಜಾರಕಿಹೊಳಿ ಹೇಳಿಕೆ ಅಚ್ಚರಿ ಮೂಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ್ದ ಜಾರಕಿಹೊಳಿ, ನಾನೇನು ಮಾತನಾಡಲ್ಲ. ನಮ್ಮ ಟೀಮ್​ ಲೀಡರ್​ ಅರವಿಂದ್​ ಲಿಂಬಾವಳಿ, ಅವರೇ ಮಾತನಾಡ್ತಾರೆ ಎಂದು ಗೋಕಾಕ್​ ಸಾಹುಕಾರ್​ ಹೊಸ ದಾಳ ಉರುಳಿಸಿದ್ದಾರೆ.

ನಮ್ಮ ಟೀಮ್ ಲೀಡರ್ ಆಗಿ ಅರವಿಂದ್​ ಲಿಂಬಾವಳಿ ಒಬ್ಬರೇ ಮಾತನಾಡುತ್ತಾರೆ. ಈಗ ಒಂದು ನಿರ್ಧಾರ ತೆಗೆದುಕೊಂಡಿದ್ದೇವೆ. ಆ ಬಗ್ಗೆ ನಾವು ಮಾತನಾಡಲ್ಲ. ಉಳಿದಿದ್ದೆಲ್ಲಾ ಅವರೇ ಮಾತನಾಡುತ್ತಾರೆ. ನಮ್ಮ ಕಮಿಟಿ ನಿರ್ಣಯ ಮಾಡಿದೆ. ಅರವಿಂದ್​ ಲಿಂಬಾವಳಿ ಒಬ್ಬರೇ ಮಾತನಾಡುತ್ತಾರೆ ಅಷ್ಟೇ. ವಿಜಯೇಂದ್ರ ಅವರು ದೆಹಲಿಗೆ ಹೋಗಿದ್ದಕ್ಕೆ ಸ್ವಾಗತ.

ರಮೇಶ್​ ಜಾರಕಿಹೊಳಿ, ಗೋಕಾಕ್​ ಶಾಸಕ

ಬಿಜೆಪಿ ಮನೆಯೊಳಗಿನ ಆತಂರಿಕ ಕಿತ್ತಾಟದಿಂದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ. ಈ ರೀತಿ ಜಗಳದಿಂದ ಕಾರ್ಯಕರ್ತರ ಮನಸ್ಸಿಗೆ ನೋವಾಗುತ್ತಿದ್ದು, ಆದಷ್ಟು ಬೇಗ ಎಲ್ಲದಕ್ಕೂ ಬ್ರೇಕ್​ ಹಾಕುವಂತೆ ಶಾಸಕ ಅರವಿಂದ್ ಬೆಲ್ಲದ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

publive-image

ಈ ರೀತಿ ಜಗಳದಿಂದ ನಮ್ಮೆಲ್ಲಾ ಕಾರ್ಯಕರ್ತರ ಮನಸಿಗೆ ನೋವಾಗುತ್ತದೆ. ನಮ್ಮ ಪಕ್ಷದ ನಾಯಕರು, ಮುಖಂಡರು ಎಲ್ಲರನ್ನು ಕರೆಯಿಸಿ ಜಗಳವನ್ನು ಪರಿಹರಿಸಬೇಕು.

ಅರವಿಂದ್​ ಬೆಲ್ಲದ್, ಶಾಸಕ

ಮಿನಿ ಸಮರದ ಸೋಲಿನಿಂದ ಇನ್ನೂ ಹೊರಬಾರದ ಬಿಜೆಪಿಗೆ ರೆಬೆಲ್‌ ಟೀಂ ಕಂಟಕವಾಗಿ ಕಾಡುತ್ತಿದೆ. ಇದರ ಮಧ್ಯೆ ಬಿಜೆಪಿ ಹೈಕಮಾಂಡ್ ಸೈಲೆಂಟ್ ಆಗಿರೋದು ನಾನಾ ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಇದು ಮುಂದುವರೆದ್ರೆ, ರಾಜ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಅನ್ನೋದನ್ನ ಹರಿತ ಬಿಜೆಪಿ ನಿಷ್ಠರ ಪಡೆ, ಹೈಕಮಾಂಡ್​ಗೆ ಸ್ಪಷ್ಟ ಸಂದೇಶ ರವಾನಿಸಲು ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment