newsfirstkannada.com

ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ ಗೈರು; ಮಾಜಿ ಸಿಎಂ ಬಿಎಸ್‌ವೈ, ಹೆಚ್‌ಡಿಕೆ ಫುಲ್ ಗರಂ; ಏನಂದ್ರು?

Share :

Published January 11, 2024 at 1:33pm

    ಕಾಂಗ್ರೆಸ್ಸಿಗರು ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ

    ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಯಾಕೆ ಹೋಗ್ತಿಲ್ಲ?

    ರಾಮ ರಾಜ್ಯ ಆಗಬೇಕು ಎಂಬ ಉತ್ಸಾಹ ದೇಶದ ಜನರಲ್ಲಿ ಇದೆ

ಬೆಂಗಳೂರು: ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಉದ್ಘಾಟನೆ ಆಗುತ್ತಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಗೈರಾಗಲು ತೀರ್ಮಾನಿಸಿದ್ದು ರಾಷ್ಟ್ರ, ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗುರಿಯಾಗಿದೆ. ಕಾಂಗ್ರೆಸ್ ನಾಯಕರ ನಿರ್ಧಾರವನ್ನ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಜನವರಿ 22ರ ವಿಶೇಷ ಸಂದರ್ಭದಲ್ಲಿ ರಾಮ ಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗ್ತಿದೆ. ಅಯೋಧ್ಯೆಗೆ ಬರಲು ಕಾಂಗ್ರೆಸ್‌ನವರಿಗೆ ಆಮಂತ್ರಣ ಇದ್ದರೂ ಅವರು ಹೋಗದೇ ಇರೋದು ಬಹಳ ದುರ್ದೈವದ ಸಂಗತಿ. ಅವರ ನಿಲುವನ್ನು ನಾನು ಖಂಡಿಸುತ್ತೇನೆ. ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿರೋದು ಅಕ್ಷಮ್ಯ ಅಪರಾಧ ಎಂದರು.

ಇದನ್ನೂ ಓದಿ: ರಾಮಮಂದಿರದ ಲೋಕಾರ್ಪಣೆಗೆ ಕಾಂಗ್ರೆಸ್ ಗೈರು; ಅಯೋಧ್ಯೆ ಟ್ರಸ್ಟ್ ಆಹ್ವಾನ ತಿರಸ್ಕಾರ; ಹೇಳಿದ್ದೇನು?

ಇನ್ನು, ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕುವ ಅವರು ಮುಂದೆ ಪಶ್ಚಾತ್ತಾಪ ಪಡುವ ಕಾಲ ಬರುತ್ತದೆ. ಇವಾಗ್ಲಾದ್ರು ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ. ಎಲ್ಲರ ಇಚ್ಛೆ ಇರೋದು ರಾಮ ರಾಜ್ಯ ಆಗಬೇಕು ಅಂತ. ರಾಮನ ಕನಸು ನನಸಾಗಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕ್ತಿದ್ದಾರೆ. ಅಯೋಧ್ಯೆ ಯಾಕೆ ಹೋಗುತ್ತಿಲ್ಲ ಅನ್ನೋದನ್ನ ಅವರೇ ಸ್ಪಷ್ಟ ಪಡಿಸಲಿ ಎಂದು ಬಿಎಸ್‌ವೈ ಹೇಳಿದ್ದಾರೆ.

ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಕೂಡ ರಾಮಮಂದಿರ ಉದ್ಘಾಟನೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದಕ್ಕೆ ಕಿಡಿಕಾರಿದ್ದಾರೆ. ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಾಡಹಬ್ಬ, ಇಡೀ ದೇಶದ ಹಬ್ಬವಾಗಿದೆ. ರಾಮ ರಾಜ್ಯ ಆಗಬೇಕು ಎಂಬ ಉತ್ಸಾಹ ದೇಶದ ಜನರಲ್ಲಿ ಇದೆ. ಯಾವ ಕಾರಣಕ್ಕೆ ಹೋಗ್ತಿಲ್ಲ ಸಾರ್ವಜನಿಕರಿಗೆ ಅವರೇ ಹೇಳ್ತಾರೆ. ಈ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಜನರ ಅಭಿಪ್ರಾಯಕ್ಕೆ ನಾನೂ ಕೈ ಜೋಡಿಸುತ್ತೇನೆ ಎಂದ ಹೆಚ್​ಡಿಕೆ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ ಗೈರು; ಮಾಜಿ ಸಿಎಂ ಬಿಎಸ್‌ವೈ, ಹೆಚ್‌ಡಿಕೆ ಫುಲ್ ಗರಂ; ಏನಂದ್ರು?

https://newsfirstlive.com/wp-content/uploads/2024/01/BSY-HDK.jpg

Load More