newsfirstkannada.com

ಬಿಜೆಪಿಗೆ ಸೆಡ್ಡು ಹೊಡೆಯುತ್ತಾರಾ ಸದಾನಂದಗೌಡ; ಒಕ್ಕಲಿಗ ನಾಯಕರ ಜೊತೆ ಭರ್ಜರಿ ಪ್ಲಾನ್!

Share :

Published March 19, 2024 at 5:50pm

Update March 19, 2024 at 6:00pm

  ಬಿಜೆಪಿಯಿಂದ ಲಿಂಗಾಯತರಿಗೆ 8 ಟಿಕೆಟ್​ ಕೊಟ್ಟು ಒಕ್ಕಲಿಗರಿಗೆ ಕೇವಲ 2 ಟಿಕೆಟ್

  ಡಿ.ವಿ ಸದಾನಂದಗೌಡರು ಏನೇ ನಿರ್ಧಾರ ತಗೊಂಡ್ರೂ ನಮ್ಮ ಬೆಂಬಲ ಇರುತ್ತೆ

  ಒಕ್ಕಲಿಗರ ಸಮುದಾಯಕ್ಕೆ ಅನ್ಯಾಯ ಆದರೆ ಹೋರಾಟ ಮಾಡಬೇಕಾಗುತ್ತದೆ

ಬೆಂಗಳೂರು: ಮಾಜಿ ಸಿಎಂ ಡಿ.ವಿ ಸದಾನಂದಗೌಡರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರ ಜೊತೆ ಡಿ.ವಿ ಸದಾನಂದಗೌಡರು ಮಹತ್ವದ ಸಭೆ ನಡೆಸಿದ್ದಾರೆ. ತಮ್ಮ ಮುಂದಿನ ನಿಲುವಿನ ಬಗ್ಗೆ ನಾಳೆ ಮಾಧ್ಯಮಗೋಷ್ಠಿಯಲ್ಲಿ ತಿಳಿಸುವುದಾಗಿ ಡಿವಿಎಸ್‌ ಹೇಳಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಡಿ.ವಿ ಸದಾನಂದಗೌಡರು ಬಿಜೆಪಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮುಂದಿನ ನಿಲುವಿನ ಬಗ್ಗೆ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ಜೊತೆ ಚರ್ಚೆ ಮಾಡಿದ್ದೇನೆ. ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷರು ನಾನು ಬರುತ್ತೇನೆ ಎಂದಿದ್ದರು. ಒಂದಷ್ಟು ವಿಚಾರಗಳನ್ನ ಅವರು ಪ್ರಸ್ತಾಪ ಮಾಡಿದರು. ಕೆಲವೊಂದು ವಿಚಾರಗಳನ್ನ ಚರ್ಚಿಸಿದ್ದೇವೆ. ಕಾಂಗ್ರೆಸ್​ನವರು ಹಾಗೂ ಬಿಜೆಪಿಯವರು ಕರೆದಿದ್ದಾರೆ. ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಎಲ್ಲವನ್ನು ವಿವರವಾಗಿ ನಾಳೆ ಹೇಳುತ್ತೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: RCB ಫ್ಯಾನ್ಸ್‌ಗೆ ಇವತ್ತು ಒಂದಲ್ಲ, ಎರಡು ಸರ್‌ಪ್ರೈಸ್‌.. ಅನ್‌ಬಾಕ್ಸ್‌ ಈವೆಂಟ್‌ಗೆ ಯಾರೆಲ್ಲಾ ಬರ್ತಾರೆ?

ಇದೇ ವೇಳೆ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಮಾತನಾಡಿ, ನಮ್ಮ ಒಕ್ಕಲಿಗರ ಸಮುದಾಯಕ್ಕೆ 3 ಪಕ್ಷಗಳಿಂದ ಟಿಕೆಟ್ ಕೊಡುವಲ್ಲಿ ಅನ್ಯಾಯವಾಗಿದೆ. ಬಿಜೆಪಿಯಿಂದ ಲಿಂಗಾಯತ ಸಮುದಾಯಕ್ಕೆ 8 ಟಿಕೆಟ್ ಕೊಟ್ಟರೇ ನಮಗೆ ಕೇವಲ 2 ಮಾತ್ರ ಕೊಟ್ಟಿದ್ದಾರೆ. ನಮಗೇಕೆ 8 ಟಿಕೆಟ್​ಗಳನ್ನು ಟಿಕೆಟ್​ ಕೊಟ್ಟಿಲ್ಲ ಎನ್ನುವುದು ನಮ್ಮ ಪ್ರಶ್ನೆ. ಈಗಾಗಲೇ ಮಾಜಿ ಸಚಿವ ಸಿಟಿ ರವಿ ಹಾಗೂ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ಸದಾನಂದಗೌಡರು ಏನೇ ನಿರ್ಧಾರ ತೆಗೆದುಕೊಂಡರು ನಮ್ಮ ಬೆಂಬಲ ಇರುತ್ತದೆ. ನಾಳೆ ಸದಾನಂದಗೌಡರು ಮಾಧ್ಯಮಗೋಷ್ಠಿ ಮಾಡಿ ಎಲ್ಲ ಹೇಳುತ್ತಾರೆ. ನಮ್ಮ ಸಮುದಾಯಕ್ಕೆ ಅನ್ಯಾಯವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಗೆ ಸೆಡ್ಡು ಹೊಡೆಯುತ್ತಾರಾ ಸದಾನಂದಗೌಡ; ಒಕ್ಕಲಿಗ ನಾಯಕರ ಜೊತೆ ಭರ್ಜರಿ ಪ್ಲಾನ್!

https://newsfirstlive.com/wp-content/uploads/2024/03/DV_SADANANDA_GOWDA.jpg

Load More