newsfirstkannada.com

Big Breaking: ರಾಷ್ಟ್ರ ರಾಜಕೀಯಕ್ಕೆ ಹೆಚ್‌ಡಿಕೆ; ಮೋದಿ ಸರ್ಕಾರದಲ್ಲಿ ದೊಡ್ಡ ಜವಾಬ್ದಾರಿ?

Share :

Published January 12, 2024 at 8:18pm

  ಕೃಷಿ ಖಾತೆ ನೀಡೋದಾಗಿ ಬಿಜೆಪಿ ಹೈಕಮಾಂಡ್ ಭರವಸೆ

  ಜ.17 ರಂದು ಕೇಂದ್ರ ಸಚಿವರಾಗಿ ಹೆಚ್‌ಡಿಕೆ ಪದಗ್ರಹಣ?

  ಜ.15 ಅಥವಾ 16 ರಂದು ದೆಹಲಿಗೆ ‘ದಳಪತಿ’ ಪ್ರಯಾಣ

ಬೆಂಗಳೂರು: ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ? ಮಹತ್ವದ ರಾಜಕೀಯ ಬೆಳವಣಿಗೆಯ ಸುದ್ದಿಯೊಂದು ಹೊರ ಬಿದ್ದಿದೆ. ನ್ಯೂಸ್‌ ಫಸ್ಟ್‌ಗೆ ಸಿಕ್ಕಿರೋ ಎಕ್ಸ್‌ಕ್ಲೂಸಿವ್ ಮಾಹಿತಿಯ ಪ್ರಕಾರ ಮಾಜಿ ಸಿಎಂ ಹೆಚ್‌ಡಿಕೆ ಕೇಂದ್ರ ಸಚಿವರಾಗಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಇದೇ ಜನವರಿ 17ರಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಆಹ್ವಾನದ ಮೇರೆಗೆ ಜನವರಿ 15 ಅಥವಾ 16ರಂದು ದೆಹಲಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಕುತೂಹಲ ಮೂಡಿಸಿದ ದಳಪತಿಗಳ ದೆಹಲಿ ಭೇಟಿ.. ಮೋದಿ ಜೊತೆ ‘ಲೋಕ’ ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡ್ತಾರಾ ದೇವೇಗೌಡರು?

ಜನವರಿ 17ರಂದು ಕುಮಾರಸ್ವಾಮಿ ಅವರ ಇಡೀ ಕುಟುಂಬವೇ ದೆಹಲಿಗೆ ತೆರಳಲು ಸಿದ್ಧತೆ ನಡೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಹೈಕಮಾಂಡ್ ಕೃಷಿ ಖಾತೆ ನೀಡುವುದಾಗಿ ಭರವಸೆ ನೀಡಿದ್ದು, ಹೆಚ್‌ಡಿಕೆ ಅವರು ಜಲ ಸಂಪನ್ಮೂಲಗಳ ಖಾತೆಯ ನಿರೀಕ್ಷೆಯಲ್ಲಿ ಇದ್ದಾರೆ. ಜನವರಿ 15 ರಂದು ಬಿಜೆಪಿ ಹೈಕಮಾಂಡ್ ಹೆಚ್‌ಡಿಕೆ ಪ್ರಮಾಣವಚನ ಸ್ವೀಕಾರ ಬಗ್ಗೆ ಅಂತಿಮ ನಿರ್ಧಾರ ತಿಳಿಸಲಿವೆ ಎಂದು ಜೆಡಿಎಸ್ ಮೂಲಗಳು ನ್ಯೂಸ್‌ ಫಸ್ಟ್‌ಗೆ ತಿಳಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Big Breaking: ರಾಷ್ಟ್ರ ರಾಜಕೀಯಕ್ಕೆ ಹೆಚ್‌ಡಿಕೆ; ಮೋದಿ ಸರ್ಕಾರದಲ್ಲಿ ದೊಡ್ಡ ಜವಾಬ್ದಾರಿ?

https://newsfirstlive.com/wp-content/uploads/2024/01/Modi-Hdk.jpg

Load More