newsfirstkannada.com

‘ನನ್ನ ತಂದೆ, ತಾಯಿಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ’.. -ಕಾಂಗ್ರೆಸ್​ ವಿರುದ್ಧ HD ಕುಮಾರಸ್ವಾಮಿ ಗರಂ

Share :

Published May 7, 2024 at 2:58pm

Update May 7, 2024 at 3:00pm

  ಸಿದ್ದರಾಮಯ್ಯಗೆ ತಂದೆ, ತಾಯಿಯ ಆತ್ಮೀಯತೆ, ಬಾಂಧವ್ಯ ಇಲ್ಲ?

  ಸಿಎಂ ಸಿದ್ದರಾಮಯ್ಯ ಕೊಟ್ಟ ಹೇಳಿಕೆಗೆ ಆಕ್ರೋಶಗೊಂಡ HDK

  ಹೆಚ್​ಡಿಕೆ, HD ರೇವಣ್ಣ ಕುಟುಂಬದ ಸಂಘಟಿತ ಪಾಪದ ಕೃತ್ಯನಾ?

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಹೆಚ್‌.ಡಿ ಕುಮಾರಸ್ವಾಮಿ ಅವರು, ತಂದೆ ದೇವೇಗೌಡರಿಗೆ 92 ವರ್ಷ, ತಾಯಿಗೆ 89 ವರ್ಷ ಅವರು ಯಾವ ರೀತಿ ಬದುಕಿದ್ದಾರೆ ಎನ್ನುವುದು ಕಣ್ಣಾರೆ ಕಂಡಿದ್ದೇನೆ. ಅವರ ಆರೋಗ್ಯದಲ್ಲಿ ಏನಾದ್ರೂ ಏರುಪೇರಾದರೆ, ತಂದೆ, ತಾಯಿಯನ್ನ ಕಳೆದುಕೊಳ್ಳುತ್ತೇವೆ ಎನ್ನುವ ನೋವಿನಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬಲು 2 ದಿನ ಮನೆಗೆ ಹೋಗಿದ್ದೆ. ಇದಕ್ಕೆ ಹೆಚ್​ಡಿಕೆ, ರೇವಣ್ಣ ಕುಟುಂಬದ ಸಂಘಟಿತ ಪಾಪದ ಕೃತ್ಯ ಎಂದು ಹೇಳಿಕೆ ಕೊಟ್ಟ ಮುಖ್ಯಮಂತ್ರಿ ಯಾವ ಎಸ್​ಐಟಿ ತನಿಖೆ ನಡೆಸುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಗಂಡ ಸಾವು.. ಸುದ್ದಿ ಗೊತ್ತಾದ್ರೂ ವೋಟ್ ಮಾಡಿದ ಮಹಿಳೆ; ಕಾರಣ ಇದೆ

ಇದನ್ನೂ ಓದಿ: ಗಂಡನ ಕೈ, ಕಾಲು ಕಟ್ಟಿ ಎದೆ ಮೇಲೆ ಕೂರುತ್ತಿದ್ದ ಹೆಂಡತಿ.. ಸಿಗರೇಟ್​ನಿಂದ ಸುಟ್ಟು ಹೇಗೆಲ್ಲ ಟಾರ್ಚರ್ ಕೊಡ್ತಿದ್ದಳು?

ಸಿದ್ದರಾಮಯ್ಯರಿಗೆ ತಂದೆ, ತಾಯಿಯ ಸಂಬಂಧದ ಆತ್ಮೀಯತೆ, ಬಾಂಧವ್ಯ ಇಲ್ಲದೇ ಇರಬಹುದು. ನಾವು ಆ ತರ ಬದುಕಿಲ್ಲ. ನಮಗೆ ನಮ್ಮ ತಂದೆ, ತಾಯಿಯ ಆರೋಗ್ಯ ಮುಖ್ಯ. ನಾನು ಹೊರಗಡೆ ಎಷ್ಟೇ ಪ್ರಚಾರ, ರಾಜಕೀಯ ಸಭೆ, ಸಮಾರಂಭ ಮಾಡಿದರೂ ರಾತ್ರಿ ಹೋಗಿ ತಂದೆ, ತಾಯಿಗೆ ಧೈರ್ಯ ಹೇಳಿ ಮನೆಗೆ ಹೋಗುತ್ತಿದ್ದೆ. ದೇವೇಗೌಡರ ಮನೆ ಎಂದು ಹೇಳುತ್ತೀರಿ. ಆದರೆ ದೇವೇಗೌಡರಿಗೆ ಸ್ವಂತ ಮನೆ ಅನ್ನೋದು ಇಲ್ಲ. ಅವರ ಮಗಳ ಮನೆಯಲ್ಲಿರುತ್ತಾರೆ. ಸಿದ್ದರಾಮಯ್ಯನವರೇ ದೇವೇಗೌಡರಿಂದ ನೀವು ಬೆಳೆದಿದ್ದೀರಿ. ಅವರು ಏನಂತ ನನಗಿಂತ ಚೆನ್ನಾಗಿ ನೀವು ತಿಳಿದುಕೊಂಡಿದ್ದೀರಿ. ಅವರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಹೇಳಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ ಮಹಾನುಭಾವ ಇಟ್ಟುಕೊಂಡು ಯಾವ ಆಧಾರದಲ್ಲಿ ಎಸ್​ಐಟಿ ಮೂಲಕ ತನಿಖೆ ಮಾಡಿಸುತ್ತೀರಿ. ನಿಮಗೆ ಧೈರ್ಯ ಇದ್ರೆ, ಅನ್ಯಾಯ ಆದ ಮಹಿಳೆಯರಿಗೆ ನ್ಯಾಯ ಸಿಗಬೇಕು ಅಂದರೆ ಪ್ರಕರಣವನ್ನು ಸಿಬಿಐಗೆ ಕೊಡಿ. ಎಲ್ಲ ವಿಷ್ಯಗಳು, ಹಣಕಾಸಿನ ವಿಷ್ಯಗಳು ಹೊರಗೆ ಬರಲಿ. ಕಿಡ್ನಾಪ್ ರೇವಣ್ಣ ಮಾಡಿಸಿದ್ದಾರಾ?. ಪಾಪಾ ಅವರನ್ನು ತಗೊಂಡು ಹೋಗಿ ಕೂರಿಸಿದ್ದೀರಿ ಅಲ್ವಾ?. ಇಷ್ಟೇಲ್ಲ ಆದ್ರೂ ಸಿಎಂ ಪೆನ್​ಡ್ರೈವ್, ವಿಡಿಯೋದಲ್ಲಿರುವ ಬಗ್ಗೆ ಏನನ್ನು ಹೇಳುತ್ತಿಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ತಂದೆ, ತಾಯಿಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ’.. -ಕಾಂಗ್ರೆಸ್​ ವಿರುದ್ಧ HD ಕುಮಾರಸ್ವಾಮಿ ಗರಂ

https://newsfirstlive.com/wp-content/uploads/2024/05/HDK.jpg

Load More