newsfirstkannada.com

ಮಂಡ್ಯ ಮಹಾಯುದ್ಧ.. ಸುಮಲತಾ ಸಭೆ ಬೆನ್ನಲ್ಲೇ ಜೆಡಿಎಸ್ ನಾಯಕರಿಗೆ HDK ಖಡಕ್ ಎಚ್ಚರಿಕೆ; ಹೇಳಿದ್ದೇನು?

Share :

Published February 26, 2024 at 11:47am

  ತಡರಾತ್ರಿ 3 ಗಂಟೆಯವರೆಗೆ ಸಭೆ ಮಾಡಿದ ಹೆಚ್‌.ಡಿ ಕುಮಾರಸ್ವಾಮಿ

  ಮಂಡ್ಯ ಜೆಡಿಎಸ್ ಮುಖಂಡರಿಗೆ ಕುಮಾರಸ್ವಾಮಿ ಎಚ್ಚರಿಕೆಯ ಪಾಠ

  ಮಂಡ್ಯ ಟಿಕೆಟ್ ಕುರಿತು ಮಹತ್ವದ ಸುಳಿವು ಬಿಟ್ಟು ಕೊಟ್ಟ ದಳಪತಿ

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಪಡೆಯುವ ವಿಶ್ವಾಸದಲ್ಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಂಬಲಿಗರ ಜೊತೆ ಸಾಲು, ಸಾಲು ಸಭೆಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಕೂಡ ಅಲರ್ಟ್ ಆಗಿದ್ದು, ನಿನ್ನೆ ತಡರಾತ್ರಿ ಮಂಡ್ಯ ಹಾಲಿ, ಮಾಜಿ ಶಾಸಕರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.

ಮಂಡ್ಯ ಜೆಡಿಎಸ್ ನಾಯಕರ ಜೊತೆ ಹೆಚ್‌ಡಿಕೆ ತಡರಾತ್ರಿ 3 ಗಂಟೆಯವರೆಗೆ ಸಭೆ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿ ಮಂಡ್ಯ ಜೆಡಿಎಸ್ ಮುಖಂಡರಿಗೆ ಕುಮಾರಸ್ವಾಮಿ ಅವರು ಎಚ್ಚರಿಕೆಯ ಪಾಠ ಮಾಡಿದ್ದಾರೆ.

ಇದನ್ನೂ ಓದಿ: ‘ಲೋಕ’ ಗೆಲ್ಲಲು ಸುಮಲತಾ ಪರ‌ ದರ್ಶನ್ ಪ್ರಚಾರ ಫಿಕ್ಸ್! ರಾಕಿ ಭಾಯ್​ ಬರಲ್ವಾ?

ಪ್ರಮುಖವಾಗಿ ಮಂಡ್ಯ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್, ವರಿಷ್ಠರು ತೀರ್ಮಾನ ಮಾಡ್ತಾರೆ. ಆದ್ದರಿಂದ ಮಂಡ್ಯ ಸಂಸದರ ನಡೆ ಬಗ್ಗೆ ಯಾರು ಗಮನ ಕೊಡಬೇಡಿ. ಸಂಸದರ ಮಾತುಗಳಿಗೆ ಯಾರು ಅನಗತ್ಯ ಪ್ರತಿಕ್ರಿಯೆ ಕೊಡಬೇಡಿ. ಸುಮಲತಾ ಅವರ ಬಗ್ಗೆ ಯಾವ ಟೀಕೆಯೂ ಮಾಡದಂತೆ ಮಂಡ್ಯ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಇನ್ನು, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧೆ ಮಾಡುತ್ತಾರೆ. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟು ಕೊಡುವ ಮಾತುಕತೆ ಆಗಿದೆ. ಮಂಡ್ಯದಲ್ಲಿ ಈ ಬಾರಿ ಸ್ಥಳೀಯ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ. ಆದಷ್ಟು ಬೇಗ ಕ್ಷೇತ್ರ ಹಂಚಿಕೆ ಘೋಷಣೆ ಆಗುತ್ತದೆ ಎಂದು ಹೆಚ್.ಡಿ ಕುಮಾರಸ್ವಾಮಿ ಜೆಡಿಎಸ್‌ ನಾಯಕರಿಗೆ ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ಮಹಾಯುದ್ಧ.. ಸುಮಲತಾ ಸಭೆ ಬೆನ್ನಲ್ಲೇ ಜೆಡಿಎಸ್ ನಾಯಕರಿಗೆ HDK ಖಡಕ್ ಎಚ್ಚರಿಕೆ; ಹೇಳಿದ್ದೇನು?

https://newsfirstlive.com/wp-content/uploads/2024/01/HDK_Sumalatha.jpg

Load More