ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಲಾಸ್ಯ ನಾಗರಾಜ್‌ ತಾಯಿ ಮೇಲೆ ಮಾರಣಾಂತಿಕ ಹಲ್ಲೆ; ಆಗಿದ್ದೇನು?

author-image
admin
Updated On
ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಲಾಸ್ಯ ನಾಗರಾಜ್‌ ತಾಯಿ ಮೇಲೆ ಮಾರಣಾಂತಿಕ ಹಲ್ಲೆ; ಆಗಿದ್ದೇನು?
Advertisment
  • ದಿಢೀರ್ ಅಂತ ಬೆಂಗಳೂರಿಗೆ ವಾಪಸ್ ಆಗುತ್ತಿರುವ ನಟಿ ಲಾಸ್ಯ
  • ಏಕಾಏಕಿ ಕೈ ಮಾಡಿದ್ದು ನನ್ನ ಬೆನ್ನಿಗೆ, ಕಣ್ಣಿನ ಕೆಳಗೆ ಪೆಟ್ಟು ಬಿದ್ದಿದೆ
  • ಬಸವೇಶ್ವರ ನಗರದಲ್ಲಿರೋ ಅವರ ನಿವಾಸದಲ್ಲೇ ದೈಹಿಕವಾದ ಹಲ್ಲೆ

ಕನ್ನಡದ ಬಿಗ್‌ ಬಾಸ್ ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ನಟಿ ಲಾಸ್ಯ ನಾಗರಾಜ್‌ ತನ್ನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೆನಡಾದಲ್ಲಿ ನೆಲೆಸಿರುವ ನಟಿ ಲಾಸ್ಯ ದಿಢೀರ್ ಅಂತ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.

ನಟಿ ಲಾಸ್ಯ ನಾಗರಾಜ್ ಅವರ ತಾಯಿ ಡಾ.ಸುಧಾ ನಾಗರಾಜ್ ಅವರ ಮೇಲೆ ದೈಹಿಕವಾದ ಹಲ್ಲೆ ನಡೆದಿದೆ. ಬಸವೇಶ್ವರ ನಗರದಲ್ಲಿರೋ ಅವರ ನಿವಾಸದಲ್ಲೇ ಸುಧಾ ನಾಗರಾಜ್ ಅವರ ತಂಗಿಯ ಮಧ್ಯೆ ಗಲಾಟೆಯಾಗಿದೆ. ಚಿಕ್ಕಮ್ಮನೇ ತನ್ನ ತಾಯಿ ವಿರುದ್ಧ ಹಲ್ಲೆ ಮಾಡಿರೋದು ಲಾಸ್ಯ ನಾಗರಾಜ್‌ ಅವರಿಗೆ ತಲೆ ನೋವಾಗಿದೆ.

ಹಲ್ಲೆಗೆ ಕಾರಣವೇನು?
ಸ್ವಂತ ತಂಗಿಯಿಂದಲೇ ಹಲ್ಲೆಗೊಳಗಾದ ನಟಿ ಲಾಸ್ಯ ತಾಯಿ ಸುಧಾ ನಾಗರಾಜ್ ಅವರು ನ್ಯೂಸ್‌ ಫಸ್ಟ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನು ತುಂಬಾ ವರ್ಷಗಳಿಂದ ಮನೆಯ ಕೆಳಗೆ ಡ್ಯಾನ್ಸ್ ಕ್ಲಾಸ್ ನಡೆಸುತ್ತಾ ಇದ್ದೀನಿ. ಇಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸ್ತಿರೋದಕ್ಕೆ ನನ್ನ ಸಹೋದರಿಯ ವಿರೋಧವಿದೆ.

ಇದನ್ನೂ ಓದಿ: ಲಾಸ್ಯ ನಾಗರಾಜ್ ಕುಟುಂಬದಲ್ಲಿ ಕಲಹ.. ಅಮ್ಮನ ಮೇಲೆ ಚಿಕ್ಕಮ್ಮನಿಂದ ಮಾರಣಾಂತಿಕ ಹಲ್ಲೆ ಎಂದ ನಟಿ..! 

ನನ್ನ ಪತಿ ಕೊರೊನಾ ಟೈಂನಲ್ಲಿ ತೀರಿಕೊಂಡರು. ಅಲ್ಲಿಂದ ಈ ರೀತಿಯ ಸಮಸ್ಯೆ ಕೊಡುತ್ತಿದ್ದಾರೆ. ಇಲ್ಲಿ ತನಕ ಮನಸ್ತಾಪ, ಗಲಾಟೆ ಇರ್ತಿತ್ತು. ಆದ್ರೆ ನಿನ್ನೆ ಏಕಾಏಕಿ ಕೈ ಮಾಡಿದ್ದಾರೆ. ನನ್ನ ಬೆನ್ನಿಗೆ, ಕಣ್ಣಿನ ಕೆಳಗೆ ಪೆಟ್ಟು ಬಿದ್ದಿದೆ ಎಂದು ಸುಧಾ ನಾಗರಾಜ್ ತಿಳಿಸಿದ್ದಾರೆ.

ಇದು ನಮ್ಮ ತಂದೆಯಿಂದ ಬಂದಂತಹ ಜಾಗ. ಹೀಗಾಗಿ ತುಂಬಾ ವರ್ಷಗಳಿಂದ ಇಬ್ಬರೂ ಇಲ್ಲೇ ಇದ್ದೇವೆ. ಮುಂದೆ ಇದೇ ರೀತಿ ಆದಲ್ಲಿ, ಕಾನೂನು ಕ್ರಮ ತೆಗೆದುಕೊಳ್ತೀನಿ. ಸದ್ಯಕ್ಕೆ ಈಗ ಸಂಬಂಧಿಕರು ಬಂದು ರಾಜಿ ಮಾಡುತ್ತಿದ್ದಾರೆ. ನನ್ನ ಮಗಳು ಲಾಸ್ಯ ನಾಳೆ ಕೆನಡಾದಿಂದ ಬೆಂಗಳೂರಿಗೆ ಬರುತ್ತಿದ್ದಾಳೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment