ಬಿಜೆಪಿ ಸೇರಿದ ಮಾಜಿ ಸ್ಟಾರ್​ ಕ್ರಿಕೆಟರ್.. ಇವರು ಆರ್​ಸಿಬಿಯಲ್ಲೂ ಆಡಿದ್ದರು..!

author-image
Ganesh
Updated On
ಬಿಜೆಪಿ ಸೇರಿದ ಮಾಜಿ ಸ್ಟಾರ್​ ಕ್ರಿಕೆಟರ್.. ಇವರು ಆರ್​ಸಿಬಿಯಲ್ಲೂ ಆಡಿದ್ದರು..!
Advertisment
  • ಬಿಜೆಪಿ ಅಧ್ಯಕ್ಷ ಬವಾಂಕುಲೆ ನೇತೃತ್ವದಲ್ಲಿ ಸೇರ್ಪಡೆ
  • 2020ರಲ್ಲಿ ಭಾರತ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ
  • ಒಂದು ಕೋಟಿ ನೀಡಿ ಖರೀದಿಸಿದ್ದ ಆರ್​ಸಿಬಿ ತಂಡ

ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಕೇದಾರ್ ಜಾಧವ್ ಹೊಸ ಇನ್ನಿಂಗ್ಸ್​ ಆರಂಭಿಸಿದ್ದಾರೆ. ನಿನ್ನೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಹಾಗೂ ಹಿರಿಯ ನಾಯಕರ ಸಮ್ಮುಖದಲ್ಲಿ ಜಾಧವ್ ಬಿಜೆಪಿ ಸೇರಿದ್ದಾರೆ.

ಜೂನ್, 2024 ರಲ್ಲಿ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ದಾರೆ. 2020ರಲ್ಲಿ ಭಾರತದ ಪರ ಕೊನೆಯ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದರು. 2014 ರಿಂದ 2024ರವರೆಗೆ ಟೀಂ ಇಂಡಿಯಾದ ಭಾಗವಾಗಿದ್ದರು.

ಜಾಧವ್ ಆಸ್ತಿ ಎಷ್ಟು..?

ಮಾಧ್ಯಮ ವರದಿಗಳ ಪ್ರಕಾರ, ಜಾಧವ್ ಒಟ್ಟು ಆಸ್ತಿ 50 ಕೋಟಿ ರೂಪಾಯಿಗಿಂತ ಹೆಚ್ಚು. ಕ್ರಿಕೆಟ್, ವ್ಯಾಪಾರ ಹೂಡಿಕೆ ಹಾಗೂ ಪ್ರಾಯೋಜಕತ್ವಗಳ ಮೂಲಕ ಆದಾಯ ಗಳಿಸಿದ್ದಾರೆ. ಐಪಿಎಲ್​ನಲ್ಲಿ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿಎಸ್‌ಕೆಯಿಂದ ಮೂರು ಋತುಗಳಲ್ಲಿ 7.8 ಕೋಟಿ ರೂಪಾಯಿ ಪಡೆದಿದ್ದಾರೆ. ಬಿಎಂಡಬ್ಲ್ಯೂ ಕಾರಿನಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಅವರ ಬಳಿ BMW X4 ಮಾಡೆಲ್ ಕಾರಿದ್ದು, ಭಾರತದಲ್ಲಿ ಅದರ ಬೆಲೆ 84 ಲಕ್ಷ ರೂಪಾಯಿ ಆಗಿದೆ.

ಇದನ್ನೂ ಓದಿ: 9 ಸಿಕ್ಸರ್​, 7 ಬೌಂಡರಿ.. ಕೇವಲ 39 ಎಸೆತದಲ್ಲಿ ಸ್ಫೋಟಕ ಶತಕ.. ಐಪಿಎಲ್​​ನಲ್ಲಿ ಹೊಸ ದಾಖಲೆ..!

publive-image

ಕ್ರಿಕೆಟ್​ನಲ್ಲಿ ಸಾಧನೆ

ಭಾರತಕ್ಕಾಗಿ ಒಟ್ಟು 73 ಏಕದಿನ ಕ್ರಿಕೆಟ್ ಆಡಿರುವ ಕೇದಾರ್ ಜಾಧವ್ 1389 ರನ್​ಗಳನ್ನು ಬಾರಿಸಿ, ಬೌಲಿಂಗ್​ನಲ್ಲಿ 27 ವಿಕೆಟ್​ ಗಳಿಸಿದ್ದಾರೆ. ಟಿ-20 ಕ್ರಿಕೆಟ್​ನಲ್ಲಿ ಕೇವಲ 9 ಪಂದ್ಯಗಳನ್ನ ಆಡಿ 122 ರನ್​ಗಳಿಸಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 5 ತಂಡಗಳ ಪರವಾಗಿ ಆಡಿರುವ ಜಾಧವ್ ಒಟ್ಟು, 95 ಮ್ಯಾಚ್​​ಗಳನ್ನಾಡಿದ್ದಾರೆ. 123.13 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿರುವ ಜಾಧವ್, 1208 ರನ್​ಗಳನ್ನ ಬಾರಿಸಿದ್ದಾರೆ. ಯಾವುದೇ ವಿಕೆಟ್ ಪಡೆದಿಲ್ಲ. ಬಲಗೈ ಬ್ಯಾಟ್ಸಮನ್ ಆಗಿರುವ ಜಾಧವ್ ಅವರು 2010 ರಿಂದ ಐಪಿಎಲ್ ಆಡಿಕೊಂಡು ಬಂದಿದ್ದರು. 2016-2017 ಆರ್​ಸಿಬಿ ಪರ 17 ಪಂದ್ಯಗಳನ್ನು ಆಡಿದ್ದರು. ನಂತರ 2023ರಲ್ಲಿ ಮತ್ತೆ ಆರ್​ಸಿಬಿಗೆ ಕಂಬ್ಯಾಕ್ ಮಾಡಿದ್ದರು. ಬರೋಬ್ಬರಿ ಒಂದು ಕೋಟಿ ನೀಡಿ, ಆರ್​ಸಿಬಿ ಫ್ರಾಂಚೈಸಿ ಅವರನ್ನು ಖರೀದಿ ಮಾಡಿತ್ತು.

ಇದನ್ನೂ ಓದಿ: ಮ್ಯಾಜಿಕ್ ಮಾಡಲು ಹೊರಟ ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್..! ಏನದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment