/newsfirstlive-kannada/media/post_attachments/wp-content/uploads/2024/08/Star-Cricketer.jpg)
ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರೋ ಮೀಸಲಾತಿ ವಿರೋಧಿ ಹೋರಾಟ ತೀವ್ರಗೊಂಡಿದೆ. ಈ ಮೀಸಲಾತಿ ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಹಿಂಸಾತ್ಮಕ ಪ್ರತಿಭಟನೆಯಲ್ಲಿ ನೂರಾರು ಮಂದಿ ಹತರಾಗಿದ್ದಾರೆ. ಇದರ ಮಧ್ಯೆ ಎಚ್ಚೆತ್ತ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಪತ್ರ ಎಸೆದು ದೇಶದಿಂದ ಕಾಲ್ಕಿತ್ತಿದ್ದಾರೆ. ಹಾಗಾಗಿ ಬಾಂಗ್ಲಾದೇಶದಲ್ಲಿ ಸೇನೆ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ ಆಗಲಿದೆ ಎಂದು ಆರ್ಮಿ ಚೀಫ್ ಜನರಲ್ ವಕಾರ್ ಉಜ್ ಜಮಾನ್ ಬಹಿರಂಗ ಘೋಷಣೆ ಮಾಡಿದ್ದಾರೆ.
ಆರಂಭದಿಂದಲೂ ಬಾಂಗ್ಲಾದೇಶ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ್ದ ನಿವೃತ್ತ ಯೋಧರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 30ರಷ್ಟು ಮೀಸಲಾತಿ ನೀಡುವ ಕಾನೂನು ರದ್ದಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಎರಡು ತಿಂಗಳ ಹಿಂದೆ ನಡೆದ ಹೋರಾಟದಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ನೂರಾರು ಮಂದಿ ಜನ ಸಾವನ್ನಪ್ಪಿದ್ದರು. ಈಗ ಮತ್ತೆ ಪ್ರತಿಭಟನಾಕಾರರು ಬೀದಿಗಿಳಿದಿದ್ದು, ಇದು ಹಿಂಸಾಚಾರದ ರೂಪ ಪಡೆದುಕೊಂಡಿದೆ. ಶ್ರೀಮಂತರ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಐಷರಾಮಿ ಜೀವನ ನಡೆಸುತ್ತಿರೋರ ಮೇಲೆ ಕಲ್ಲು ತೂರಾಟವು ನಡೆದಿದೆ.
ಸ್ಟಾರ್ ಕ್ರಿಕೆಟರ್ ಮನೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು
ಇದರ ಮಧ್ಯೆ ಕೆಲವು ಕಿಡಿಗೇಡಿಗಳು ಸ್ಟಾರ್ ಕ್ರಿಕೆಟರ್ ಮಶ್ರಫೆ ಮೊರ್ತಜಾ ಅವರ ಮನೆಗೆ ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ. ಮಶ್ರಫೆ ಮೊರ್ತಜಾ ಅವರು ಪ್ರಧಾನಿ ಶೇಖ್ ಹಸೀನಾ ಬೆಂಬಲಿಗರು ಆಗಿದ್ದು, ಹಾಗಾಗಿ ಇವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಯಾರು ಈ ಕ್ರಿಕೆಟರ್..?
ಮಶ್ರಫೆ ಮೊರ್ತಜಾ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟರ್. ತನ್ನ ಶ್ರೇಷ್ಠ ನಾಯಕತ್ವ ಮತ್ತು ಕ್ರಿಕೆಟ್ ಕೌಶಲ್ಯದಿಂದ ಗಮನ ಸೆಳೆದವರು. ಮೊರ್ತಜಾ 2001ರಲ್ಲಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಜೀವನವನ್ನು ಆರಂಭಿಸಿದರು. ತಮ್ಮ ವೇಗದ ಬೌಲಿಂಗ್‌ನಿಂದಲೇ ಅಲ್ಲದೆ ಧೈರ್ಯಶಾಲಿ ಬ್ಯಾಟಿಂಗ್ ಕೌಶಲ್ಯದಿಂದಲೂ ಗಮನ ಸೆಳೆದರು. 2009ರಲ್ಲಿ ಮೊರ್ತಜಾ ಬಾಂಗ್ಲಾದೇಶದ ಏಕದಿನ ಕ್ರಿಕೆಟ್ ತಂಡದ ನಾಯಕತ್ವವನ್ನು ಸ್ವೀಕರಿಸಿದರು. ಮೊರ್ತಜಾ ನಾಯಕತ್ವದಲ್ಲಿ, ಬಾಂಗ್ಲಾದೇಶದ ತಂಡ ಹಲವು ಮಹತ್ವದ ಪಂದ್ಯಗಳನ್ನು ಗೆದ್ದಿದೆ. 2015ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಕ್ವಾರ್ಟರ್ ಫೈನಲ್‌ಗೆ ತಲುಪಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಇವರು 2020ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ರು. ಕ್ರೀಡಾ ಜಗತ್ತಿಗೆ ಅವರು ಕೊಟ್ಟ ಕೊಡುಗೆ ಅವಿಸ್ಮರಣೀಯ.
ಇದನ್ನೂ ಓದಿ:ಬಾಂಗ್ಲಾದೇಶದಲ್ಲಿ ಮಿತಿ ಮೀರಿದ ಅರಾಜಕತೆ; ಶೇಖ್ ಹಸೀನಾ ಒಳ ಉಡುಪು ಬಿಡದ ಕಾಮುಕರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ