ಕ್ರಿಕೆಟ್ ಸ್ಟಾರ್​ ರಾಬಿನ್ ಉತ್ತಪ್ಪಗೆ ಸಂಕಷ್ಟ.. ಬಂಧನದ ಭೀತಿಯಲ್ಲಿ ಮಾಜಿ ಕ್ರಿಕೆಟರ್..!

author-image
Bheemappa
Updated On
ಕ್ರಿಕೆಟ್ ಸ್ಟಾರ್​ ರಾಬಿನ್ ಉತ್ತಪ್ಪಗೆ ಸಂಕಷ್ಟ.. ಬಂಧನದ ಭೀತಿಯಲ್ಲಿ ಮಾಜಿ ಕ್ರಿಕೆಟರ್..!
Advertisment
  • ಲಕ್ಷ ಲಕ್ಷ ಹಣ ವಂಚನೆ ಮಾಡಿದ್ದಾರಾ ಮಾಜಿ ಕ್ರಿಕೆಟರ್​ ರಾಬಿನ್ ಉತ್ತಪ್ಪ?
  • ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಮಾಲೀಕ
  • ರಾಬಿನ್ ಉತ್ತಪ್ಪರನ್ನ ಹುಡುಕಿಕೊಂಡು ಹೋಗಿದ್ದ ಪೊಲೀಸ್ರು ವಾಪಸ್

ಬೆಂಗಳೂರು: ಸರ್ಕಾರಕ್ಕೆ ಹಾಗೂ ಉದ್ಯೋಗಿಗಳಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟರ್​, ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು ಬಂಧಿಸುವಂತೆ ಪುಲಕೇಶಿನಗರ ಪೊಲೀಸರಿಗೆ ಪತ್ರ ಬರೆಯಲಾಗಿದೆ.

ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯನ್ನು ಕ್ರಿಕೆಟರ್ ರಾಬಿನ್ ಉತ್ತಪ್ಪ ಅವರು ನಡೆಸುತ್ತಿದ್ದರು. ಈ ಕಂಪನಿಯಲ್ಲಿ ಉದ್ಯೋಗಿಗಳ ಸಂಬಳದಿಂದ ಪಿಎಫ್​ ಹಣವನ್ನು ತಿಂಗಳು ತಿಂಗಳು ಕಡಿತ ಮಾಡಲಾಗುತ್ತಿತ್ತು. ಆದರೆ ಈ ಹಣವನ್ನು ಉದ್ಯೋಗಿಗಳ ಖಾತೆಗೆ ಹಾಕುತ್ತಿರಲಿಲ್ಲ. ಹೀಗೆ ಸುಮಾರು 23 ಲಕ್ಷ ಹಣವನ್ನು ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ದೇವಾಲಯದ ಹುಂಡಿಗೆ ಬಿದ್ದ iPhone.. ಆಡಳಿತ ಮಂಡಳಿ ಹೇಳಿದ ಮಾತಿಗೆ ಭಕ್ತ ಶಾಕ್

publive-image

ಈ ಸಂಬಂಧ ರಾಬಿನ್ ಉತ್ತಪ್ಪ ಅವರನ್ನು ಬಂಧಿಸುವಂತೆ ಪುಲಕೇಶಿನಗರದ ಪೊಲೀಸರಿಗೆ ಪಿಎಫ್ಓ ಅಧಿಕಾರಿ ಷಡಾಕ್ಷರಿ ಗೋಪಾಲ ರೆಡ್ಡಿ ಅವರು ಪತ್ರ ಬರೆದಿದ್ದಾರೆ. ಹೀಗಾಗಿ ಪೊಲೀಸರು ರಾಬಿನ್​ ಉತ್ತಪ್ಪರ ವಿಳಾಸ ಹುಡುಕಿಕೊಂಡು ಹೋಗಿದ್ದರು. ಆದರೆ ಆ ವಿಳಾಸದಲ್ಲಿ ಉತ್ತಪ್ಪ ವಾಸವಿಲ್ಲದಿರುವುದು ಗೊತ್ತಾಗಿ ಪೊಲೀಸರು ವಾಪಸ್ ಆಗಿದ್ದಾರೆ. ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment