/newsfirstlive-kannada/media/post_attachments/wp-content/uploads/2025/04/shahid-afridi-On-Pahalgam-India.jpg)
ಪಹಲ್ಗಾಮ್ ಉಗ್ರರ ಭಯಾನಕ ದಾಳಿ ಕೋಟಿ, ಕೋಟಿ ಭಾರತೀಯರನ್ನ ಕೆರಳುವಂತೆ ಮಾಡಿದೆ. ಭಾರತೀಯ ವೀರಯೋಧರು ಯಾವ ರೀತಿ ಉಗ್ರರಿಗೆ, ಉಗ್ರರ ಸ್ವರ್ಗ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುತ್ತೆ ಅನ್ನೋದನ್ನೇ ಎದುರು ನೋಡುತ್ತಿದ್ದಾರೆ. ಗಡಿಯಲ್ಲಿ ಯುದ್ಧದ ಭೀತಿ ಪಾಕಿಸ್ತಾನದ ಸೇನೆ ಭಯ ಬೀಳುವಂತೆ ಮಾಡಿದೆ.
ಭಾರತದ ಆಕ್ರಮಣಕಾರಿ ನಿರ್ಧಾರಗಳು ಪಾಕ್ ಸೇನೆಗೆ ಸಿಂಹಸ್ವಪ್ನವಾಗಿದ್ದು, ಸೇನಾಧಿಕಾರಿಗಳು ಹೆದರಿ ರಾಜೀನಾಮೆ ನೀಡುತ್ತಿದ್ದಾರೆ. ಇಷ್ಟಾದರೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕೊಂಕು ಮಾತನಾಡಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ಕುರಿತಂತೆ ಮಾತನಾಡಿದ ಶಾಹಿದ್ ಅಫ್ರಿದಿ, ಭಾರತವೇ ತನ್ನ ದೇಶದ ನಾಗರಿಕರನ್ನು ಹತ್ಯೆಗೈದು ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ. ಪಹಲ್ಗಾಮ್ ದಾಳಿಗೆ ಭಾರತವೇ ಕಾರಣ ಎಂದು ಗೂಬೆ ಕೂರಿಸಿದ್ದಾರೆ.
ಇದನ್ನೂ ಓದಿ: ಶೋಯೆಬ್ ಅಖ್ತರ್ಗೆ ಬಿಗ್ ಶಾಕ್ ಕೊಟ್ಟ ಭಾರತ ಸರ್ಕಾರ; ಪಾಕ್ಗೆ ಮತ್ತೊಂದು ಮಾಸ್ಟರ್ ಸ್ಟ್ರೋಕ್..!
ಮಾಜಿ ಕ್ರಿಕೆಟರ್ ಲೂಸ್ ಟಾಕ್!
ಭಾರತ ಮಾಡಿದ ತಪ್ಪುಗಳಿಂದಲೇ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಆದರೆ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತದೆ. ಭಾರತವೇ ಭಾರತೀಯರನ್ನು ಕೊಲ್ಲುವಂತೆ ಮಾಡಿಕೊಂಡಿದೆ.
Shahid Afridi said “India made blunders in #Pahalgam and then swiftly blamed Pakistan for it. Islam teaches us peace only and Pakistan never supports such kinds of acts. Indians should blame themselves for this” 🇵🇰🇮🇳🤯
— Farid Khan (@_FaridKhan) April 28, 2025
ಇಸ್ಲಾಂ ಧರ್ಮ ನಮಗೆ ಶಾಂತಿಯನ್ನು ಮಾತ್ರ ಬೋಧಿಸುತ್ತದೆ. ಪಾಕಿಸ್ತಾನ ಎಂದಿಗೂ ಇಂತಹ ಭಯೋತ್ಪಾದನಾ ದಾಳಿಗೆ ಬೆಂಬಲ ನೀಡುವುದಿಲ್ಲ. ಭಾರತೀಯರು ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕು. ನಾವು ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಲು ಸದಾ ಪ್ರಯತ್ನ ಪಡುತ್ತೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ