/newsfirstlive-kannada/media/post_attachments/wp-content/uploads/2024/10/Shikar-Dhawan-Laddu-muthya-Reels.jpg)
ತಿರುಗೋ ಫ್ಯಾನ್ ನಿಲ್ಲಿಸಿ ಧೂಳಿನ ತಿಲಕ ಇಡುವುದು. ವಿಶೇಷ ಚೇತನ ವ್ಯಕ್ತಿಯ ಈ ಪವಾಡ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಲಡ್ಡು ಮುತ್ಯಾ ಅವರ ರೀಲ್ಸ್ ಅಂತು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಲಡ್ಡು ಮುತ್ಯಾನ ಅವತಾರ ಬಾಳ ಐತಿ ಕತೆ ಮಾಡಿ ಹೇಳಿದರಾ.. ಲಡ್ಡು ಮುತ್ಯಾನ ಅವತಾರ ಬಾಳ ಐತಿ ಕತೆ ಮಾಡಿ ಹೇಳಿದರಾ.. ಬಾಗಲಕೋಟೆ ಸೀಮಿಕೇರಿಯ ಸೀಮೆಯಲ್ಲಿ ನೆಲೆಸಿದ ದೇವರು ಅವರೇ ಲಡ್ಡು ಮುತ್ಯಾರ. ಭಕ್ತರ ಮನೆಯ ಬೆಳಗಾರಾ. ಈ ಕನ್ನಡದ ರೀಲ್ಸ್ ಕರ್ನಾಟಕದ ಮೂಲೆ, ಮೂಲೆಯನ್ನು ತಲುಪಿದೆ.
/newsfirstlive-kannada/media/post_attachments/wp-content/uploads/2024/10/LADDU-MUTTYA.jpg)
ಲಡ್ಡು ಮುತ್ಯಾರ ವಿಡಿಯೋಗಳನ್ನ ಬಹಳ ಮಂದಿ ಭಕ್ತಿ, ಭಾವದಿಂದ ನೋಡಿದ್ದಾರೆ. ಆದರೆ ಕೆಲವರು ಇದೇ ವಿಡಿಯೋ ಮಾಡಿ ವಿಕೃತಿಯನ್ನು ಮೆರೆದಿದ್ದಾರೆ. ವಿಶೇಷ ಚೇತನ ವ್ಯಕ್ತಿಯನ್ನ ಅಣಕಿಸುವುದು ಸರಿಯಲ್ಲ ಅಂತ ಬುದ್ಧಿವಾದ ಹೇಳಿದ್ರು ಕಿಡಿಗೇಡಿಗಳ ಒಳಗಣ್ಣು ತೆರೆದಿಲ್ಲ. ಈ ವಿಕೃತ ಆನಂದದ ಸಾಲಿಗೆ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅವರು ಸೇರಿಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಶೂಟ್ ಮಾಡುವ ಶಿಖರ್ ಧವನ್ ಹೊಸ, ಹೊಸ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ನಿಜವಾದ ಲಡ್ಡು ಮುತ್ಯಾ ಬಾಳಿ ಬದುಕಿದ್ದು ಹೇಗೆ? ಗೋಣಿ ಚೀಲದ ಗುರುವಿನ ಬಗ್ಗೆ ಭಕ್ತರು ಹೇಳೋದೇನು?
ಶಿಖರ್ ಧವನ್ ಅವರ ಈ ಸೋಷಿಯಲ್ ಮೀಡಿಯಾ ಗೀಳಿನಲ್ಲಿ ಸದ್ಯ ಲಡ್ಡು ಮುತ್ಯಾ ಅವರ ರೀಲ್ಸ್ ಕಣ್ಣಿಗೆ ಬಿದ್ದಿದೆ. ಕನ್ನಡದ ಹಾಡಿಗೆ ರೀಲ್ಸ್‌ಗೆ ಮಾಡಿರುವ ಶಿಖರ್ ಧವನ್ ಅವರು ಫ್ಯಾನ್ ಬಾಬಾಕಿ ಜೈ ಅನ್ನೋ ವಿಡಿಯೋ ಮಾಡಿದ್ದಾರೆ. ನಾಲ್ಕು ಜನ ಬಾಡಿಗಾರ್ಡ್ಸ್‌ಗಳ ಮುಂದೆ ಲಡ್ಡು ಮುತ್ಯಾ ಅವರ ರೀತಿ ಬಿಲ್ಡ್ ಅಪ್ ಕೊಟ್ಟಿದ್ದಾರೆ. ಶಿಖರ್ ಧವನ್ ಅವರು ಲಡ್ಡು ಮುತ್ಯಾರ ಈ ರೀಲ್ಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋದು ವ್ಯಾಪಕ ಟೀಕೆಗೆ ಗುರಿಯಾಗಿದೆ.
View this post on Instagram
ಶಿಖರ್ ಧವನ್ ಅವರ ರೀಲ್ಸ್ ವಿಡಿಯೋ ನೋಡಿದ ಕನ್ನಡಿಗರು ನೀವು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ದೇವರನ್ನು ಅವಮಾನಿಸಿದ್ದೀರಿ. ಇದು ಅಸಭ್ಯವಾದ ವರ್ತನೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಕ್ರಿಕೆಟ್ ಬಿಟ್ಟ ಮೇಲೆ ಬಾಬಾ ಆಗಿದ್ದೀರಾ ಲಡ್ಡು ಅಣ್ಣ ಎಂದು ಕಾಲೆಳೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us