ನಿವೃತ್ತ DG-IGP ಓಂ ಪ್ರಕಾಶ್​ಗೆ ಎಷ್ಟು ಬಾರಿ ಇರಿದರು.. ಜೀವ ಹೋಗುವರೆಗೂ ಪತ್ನಿ ನಿಂತು ನೋಡಿದ್ರಾ?

author-image
Bheemappa
Updated On
ನಿವೃತ್ತ DG-IGP ಓಂ ಪ್ರಕಾಶ್​ಗೆ ಎಷ್ಟು ಬಾರಿ ಇರಿದರು.. ಜೀವ ಹೋಗುವರೆಗೂ ಪತ್ನಿ ನಿಂತು ನೋಡಿದ್ರಾ?
Advertisment
  • ಕೃತ್ಯಕ್ಕೆ ಬಳಸಿರುವ ಚಾಕುವನ್ನ ಸೀಜ್ ಮಾಡಿರುವ ಪೊಲೀಸರು
  • ದೇಹದ ಯಾವ ಯಾವ ಭಾಗಕ್ಕೆ ಇರಿದು ಉಸಿರು ನಿಲ್ಲಿಸಲಾಗಿದೆ?
  • ಓಂ ಪ್ರಕಾಶ್​ ಪತ್ನಿ ಅದೊಂದು ಸಮಸ್ಯೆಯಿಂದ ಬಳಲುತ್ತಿದ್ದಾರಾ?

ಬೆಂಗಳೂರು: ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್​ ಜೀವವನ್ನು ಅವರ ಧರ್ಮಪತ್ನಿ ಪಲ್ಲವಿ ಅವರೇ ತೆಗೆದಿದ್ದಾರೆ ಎಂಬ ವಿಚಾರ ಬಯಲಾಗಿದೆ. ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್​ನ ಅವರ ನಿವಾಸದಲ್ಲಿ ಪತ್ನಿ ಚಾಕುವಿನಿಂದ ಇರಿದು ಗಂಡನ ಪ್ರಾಣ ತೆಗೆದಿದ್ದಾರೆ.

ಓಂ ಪ್ರಕಾಶ್​ ಅವರ ಎದೆ ಹಾಗೂ ಕೈ, ಹೊಟ್ಟೆ ಭಾಗಕ್ಕೆ ಎಂಟರಿಂದ ಹತ್ತು ಬಾರಿ ಹರಿತವಾದ ವಸ್ತುವಿನಿಂದ ಇರಿದು ಉಸಿರು ನಿಲ್ಲಿಸಲಾಗಿದೆ. ಹೊಟ್ಟೆ ಭಾಗಕ್ಕೆ ಸುಮಾರು ನಾಲ್ಕರಿಂದ ಐದು ಬಾರಿ ಚಾಕು ಇರಿಯಲಾಗಿದೆ. ಇದರಿಂದ ಕೆಳಗಿನ‌ ಮಹಡಿಯ ಹಾಲ್ ತುಂಬಾ ರಕ್ತ ಹರಿದಿದೆ. ಈ ವೇಳೆ ಓಂ ಪ್ರಕಾಶ್ ಸುಮಾರು 15 ರಿಂದ 20 ನಿಮಿಷಗಳ ಕಾಲ ಒದ್ದಾಡಿದ್ದಾರೆ.

publive-image

ತೀವ್ರ ನೋವಿನಿಂದ ಗಂಡ ಒದ್ದಾಡುತ್ತಿದ್ರೆ ಪತ್ನಿ ಪಲ್ಲವಿ ಅವರು ನೋಡುತ್ತಲೇ ನಿಂತುಕೊಂಡಿದ್ದರು. ಯಾವಾಗ ಜೀವ ಹೋಯಿತೋ ಆವಾಗ ಹೆಚ್​​ಎಸ್​ಆರ್​ ಠಾಣೆಯ ಪೊಲೀಸರಿಗೆ ಫೋನ್ ಕಾಲ್ ಮಾಡಿ ಗಂಡನ ಜೀವ ತೆಗೆದಿರುವ ಕುರಿತು ಮಾಹಿತಿ ನೀಡುತ್ತಾರೆ. ಆಗ ಪೊಲೀಸರಿಗೆ ಕೊಲೆ ಆಗಿರುವ ಬಗ್ಗೆ ಮಾಹಿತಿ ತಿಳಿಯುತ್ತದೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿ ಬರುತ್ತಾರೆ. ಕೃತ್ಯಕ್ಕೆ ಬಳಸಿರುವ ಚಾಕುವನ್ನ ಪೊಲೀಸರು ಸೀಜ್ ಮಾಡಿದ್ದಾರೆ.

ಈ ಘಟನೆಯ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರು ಮಾತನಾಡಿ, ಇವತ್ತು ಮಧ್ಯಾಹ್ನ ಸುಮಾರು 4:30ಕ್ಕೆ ಸುದ್ದಿ ಬಂದಿದೆ. 112 ನಂಬರ್​ಗೆ ಕರೆ ಮಾಡಿದ್ದರಿಂದ ಸಿಬ್ಬಂದಿ ಕಾಲ್ ರಿಸೀವ್ ಮಾಡಿ ಮಾತನಾಡಿದಾಗ ವಿಷಯ ಗೊತ್ತಾಗಿದೆ. ಕೃತ್ಯ ನಡೆಯುವಾಗ ಮನೆಯಲ್ಲಿ ಮೂವರು ಇದ್ದರು. ಹೆಂಡತಿ, ಮಗಳ ಜೊತೆ ಅವರು ಇದ್ದರು. ಮಗನಿಂದಲೂ ಮಾಹಿತಿ ಪಡೆಯಲಾಗಿದೆ. ಶಾರ್ಪ್ ಆದ ವೆಪನ್​ನಿಂದ ಇರಿದು ಈ ಕೃತ್ಯ ಮಾಡಲಾಗಿದೆ ಎಂದು ಹೇಳಿದ್ದಾರೆ.

publive-image

ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಈಗಾಗಲೇ ರವಾನೆ ಮಾಡಲಾಗಿದೆ. ಪ್ರಕರಣ ಸಂಬಂಧ ಇದುವರೆಗೂ ಯಾರನ್ನು ಬಂಧನ‌ ಮಾಡಿಲ್ಲ. ಆದರೆ ಅವರ ಹೆಂಡತಿ ಹಾಗೂ‌ ಮಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಯಾವ ಕಾರಣಕ್ಕೆ ಇದನ್ನು ಮಾಡಲಾಗಿದೆ ಅನ್ನೋದು ಇನ್ನೂ ತನಿಖೆಯಿಂದ ತಿಳಿದು ಬರಬೇಕಿದೆ. ಈ ಹಂತದಲ್ಲಿ ಈಗ ಏನೂ ಹೇಳಲೂ ಆಗಲ್ಲ. ಮರಣೋತ್ತರ ಪರೀಕ್ಷೆ ಆಗಬೇಕು. ಅದರ ವರದಿ ಬರಬೇಕು. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪತ್ನಿಯಿಂದಲೇ ನಿವೃತ್ತ DG-IGP ಓಂ ಪ್ರಕಾಶ್ ಜೀವ ತೆಗೆದ ಭಯಾನಕ ಕೃತ್ಯ; ಅಸಲಿಗೆ ಆಗಿದ್ದೇನು?

publive-image

ಪಲ್ಲವಿ ಸ್ಕಿಜೋಫ್ರೇನಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ

ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್​ ಅವರ ಧರ್ಮಪತ್ನಿ ಪಲ್ಲವಿ ಅವರು ಸ್ಕಿಜೋಫ್ರೇನಿಯಾ (Schizophrenia) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಕಳೆದ 12 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಮಸ್ಯೆಯಿಂದ ಬಳಲುವವರು ಸದಾ ಭ್ರಮೆಯಲ್ಲಿ ಇರುತ್ತಾರೆ. ಮನದಲ್ಲಿ ಯಾವುದೋ ವಿಚಾರ ಕಲ್ಪಿಸಿಕೊಂಡು ಆತಂಕ ಪಡುತ್ತಿರುತ್ತಾರೆ. ಇದೆ ಖಾಯಿಲೆಯಿಂದ ಗಂಡನ ಮೇಲೆ ಪತ್ನಿ ಇಲ್ಲದ ಸಲ್ಲದ ಊಹೆ ಮಾಡಿಕೊಂಡಿರುವ ಶಂಕೆ ಇದೆ.

ಈ ಮೊದಲು ಪಲ್ಲವಿ ಅವರು ಗಂಡ ಓಂ ಪ್ರಕಾಶ್ ಗನ್ ಹಿಡಿದುಕೊಂಡು ನಮ್ಮನ್ನೆಲ್ಲಾ ಭಯ ಪಡಿಸುತ್ತಿದ್ದಾರೆ ಎಂದು ತಮ್ಮ ಸಂಬಂಧಿಕರಿಗೆ ಹಲವಾರು ಬಾರಿ ಹೇಳಿದ್ದರು. ಈ ಕುರಿತು ತನ್ನ ಫ್ಯಾಮಿಲಿ ಗ್ರೂಪ್​ನಲ್ಲಿಯೂ ಮಸೇಜ್ ಮಾಡಿದ್ದರು. ಇಷ್ಟೇ ಅಲ್ಲದೇ ಐಪಿಎಸ್ ಅಧಿಕಾರಿಗಳ ಗ್ರೂಪ್​​ನಲ್ಲಿಯೂ ಮೆಸೇಜ್ ಮಾಡುತ್ತಿದ್ದರು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment