/newsfirstlive-kannada/media/post_attachments/wp-content/uploads/2025/03/ravi-shastri10.jpg)
ಉಡುಪಿ: ಇಂದು ಕಾರ್ಕಳ ತಾಲೂಕಿನ ಎರ್ಲಪಾಡಿ ಕರ್ವಾಲು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರು ಭೇಟಿ ನೀಡಿದ್ದಾರೆ.
ಹೌದು, ಭಾರತ ತಂಡದ ಮಾಜಿ ಕ್ಯಾಪ್ಟನ್ ರವಿಶಾಸ್ತ್ರಿ ಹಿರಿಯರು ಕರ್ವಾಲು ಮೂಲದವರು.
50 ವರ್ಷಗಳ ಹಿಂದೆ ರವಿ ಶಾಸ್ತ್ರಿ ಹಿರಿಯರು ಎರ್ಲಪಾಡಿ ತೊರೆದಿದ್ದರು. ಸಂತಾನ ಇಲ್ಲದೆ ಕೊರಗಿದ್ದ ರವಿಶಾಸ್ತ್ರಿ ದಂಪತಿಗಳು ದಶಕಗಳ ಹಿಂದೆ ಎರ್ಲಪಾಡಿಗೆ ಭೇಟಿ ನೀಡಿದ್ದರು.
ಆಗ ನಾಗನ ಸೇವೆ ಮಾಡಿದ ನಂತರ ರವಿ ಶಾಸ್ತ್ರಿ ಹೆಣ್ಣು ಮಗುವಿನ ತಂದೆಯಾದರು.
ಆ ಬಳಿಕ ನಿರಂತರವಾಗಿ ಎರ್ಲಪಾಡಿಗೆ ಭೇಟಿ ನೀಡುತ್ತಿದ್ದಾರೆ ರವಿಶಾಸ್ತ್ರಿ.
ಇದನ್ನೂ ಓದಿ:ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುನಾಥ್ ಪದಗ್ರಹಣ.. ಶಿಷ್ಯನಿಗೆ ಅಧಿಕಾರ ನೀಡಿ ಬೀಗಿದ ಡಿಕೆಶಿ
2007ರಿಂದ ಸತತ 13 ಬಾರಿ ನಾಗ ದರ್ಶನಕ್ಕೆ ರವಿಶಾಸ್ತ್ರಿ ಅವರು ಬಂದಿದ್ದಾರೆ.
ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ಕಲ್ಪೋಕ್ತ ಪೂಜೆ, ನಾಗತಂಬಿಲ ಸೇವೆ ಮಾಡಿದ್ದಾರೆ.
14 ವರ್ಷಗಳ ಹಿಂದೆ ಪತ್ನಿ ಸಮೇತ ಕ್ಷೇತ್ರಕ್ಕೆ ಭೇಟಿ ನೀಡಿದ್ದ ರವಿಶಾಸ್ತ್ರಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಅಂದಿನಿಂದ ಇಂದಿನವರೆಗೆ ರವಿಶಾಸ್ತ್ರಿ ಪ್ರತಿವರ್ಷ ಒಂದೆರಡು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ