ಬರೋಬ್ಬರಿ 2 ಗಂಟೆ ಡಿಜಿಟಲ್ ಅರೆಸ್ಟ್.. ಖ್ಯಾತ ಮಾಡೆಲ್​ನಿಂದ ಭಾರೀ ಹಣ ದೋಚಿದ ಕಳ್ಳರು..!

author-image
Ganesh
Updated On
ಬರೋಬ್ಬರಿ 2 ಗಂಟೆ ಡಿಜಿಟಲ್ ಅರೆಸ್ಟ್.. ಖ್ಯಾತ ಮಾಡೆಲ್​ನಿಂದ ಭಾರೀ ಹಣ ದೋಚಿದ ಕಳ್ಳರು..!
Advertisment
  • ರೂಪದರ್ಶಿಗೂ ಸೈಬರ್ ವಂಚಕರಿಂದ ಮೋಸ
  • ಆರೋಪಿಗಳು ಇಲ್ಲಿ ಮೋಸದ ಜಾಲಕ್ಕೆ ಬೀಳಿಸಿದ್ದು ಹೇಗೆ? ​​
  • ಪೊಲೀಸ್ ಠಾಣೆಯಲ್ಲಿ ಪ್ರಕರಣ, ತನಿಖೆ ಆರಂಭ

ಸೈಬರ್ ವಂಚಕರು ಅಷ್ಟು ಸುಲಭವಾಗಿ ಯಾರನ್ನೂ ಬಿಡುವಂತೆ ಕಾಣುತ್ತಿಲ್ಲ. ಇದೀಗ ಉತ್ತರ ಪ್ರದೇಶದ ಮಾಡೆಲ್ ಒಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ ಹಣ ಕಿತ್ತಿದ್ದಾರೆ. ಬರೋಬ್ಬರಿ 2 ಗಂಟೆಗಳ ಕಾಲ ಟ್ರ್ಯಾಪ್ ಮಾಡಿದ್ದ ಆರೋಪಿಗಳು 90 ಸಾವಿರ ರೂಪಾಯಿ ಹಣವನ್ನು ದೋಚಿದ್ದಾರೆ.

‘ಡಿಜಿಟಲ್ ಅರೆಸ್ಟ್’ ಇಂದು ಸೈಬರ್​​ ಕೈಂ ಅಪರಾಧಿಗಳ ಹೊಸ ದಾರಿ ಆಗಿದೆ. ತಮ್ಮನ್ನು ತಾವು ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ವಿಡಿಯೋ ಕಾಲ್ ಮಾಡ್ತಾರೆ. ಕಾಲ್ ಮಾಡಿದ ವ್ಯಕ್ತಿಯ ಜೊತೆಗೆ ವಿಡಿಯೋ ಕಾಲ್ ಮೂಲಕವೇ ತನಿಖೆಯ ನಾಟಕವಾಡುತ್ತಾರೆ. ಈ ವೇಳೆ ಅವರನ್ನು ಹೆದರಿಸಿ ವೈಯಕ್ತಿಕ ಮಾಹಿತಿಗಳನ್ನು ಕೆದಕಿ ಖಾತೆಯಲ್ಲಿರುವ ಹಣವನ್ನು ಲಪಟಾಯಿಸ್ತಾರೆ.

ಇದನ್ನೂ ಓದಿ:ಡಿಜಿಟಲ್​ ವಂಚನೆಗೆ ಮರ್ಮಾಘಾತ ಕೊಟ್ಟ ಕೇಂದ್ರ ಗೃಹ ಇಲಾಖೆ..59 ಸಾವಿರ ವಾಟ್ಸಾಪ್​ ಖಾತೆಗಳು ಬ್ಲಾಕ್​!

publive-image

ಅಂತೆಯೇ ಮಾಜಿ ಫಿಮಿನಾ ಮಿಸ್ ಇಂಡಿಯಾ-2017 ಶಿವಂಕಿತಾ ದಿಕ್ಷಿತ್​​ ಅವರು ವಂಚನೆಗೆ ಒಳಗಾಗಿದ್ದಾರೆ. ಶಿವಂಕಿತಾ ಅವರು ಮೋಸಕ್ಕೆ ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ವಾಟ್ಸ್​ಆ್ಯಪ್ ಮೂಲಕ ವಿಡಿಯೋ ಕಾಲ್ ಬಂದಿತ್ತು. ಈ ವೇಳೆ ನನ್ನ ವಿರುದ್ಧ ಮಾನವ ಕಳ್ಳಸಾಗಣಿಕೆ, ಮಾದಕ ವಸ್ತುಗಳ ಕಳ್ಳಸಾಗಣಿಕೆ ಆರೋಪದ ಮೇಲೆ ಅಕ್ರಮವಾಗಿ ಹಣ ಪಡೆದ ಆರೋಪ ಮಾಡಿ ಯಾಮಾರಿಸಿದ್ದಾರೆ ಅಂತಾ ದೂರು ಕೊಟ್ಟಿದ್ದಾರೆ ಎಂದು ಲೊಹಮಂಡಿ ಸಹಾಯಕ ಪೊಲೀಸ್ ಆಯುಕ್ತ ಮಯಾಂಕ್ ತಿವಾರಿ ಹೇಳಿದ್ದಾರೆ.

ಇನ್ನು ಆರೋಪಿಗಳು ಸಿಬಿಐ ಅಧಿಕಾರಿ ಎಂದು ಪೋಸ್ ನೀಡಿದ್ದಾರೆ. ನೀವು ಬಂಧನದಿಂದ ಪಾರಾಗಬೇಕು ಎಂದರೆ 99 ಸಾವಿರ ರೂಪಾಯಿ ಹಣ ನೀಡಬೇಕಾಗುತ್ತದೆ ಎಂದು ಬೆದರಿಸಿ ಹಣ ಕಿತ್ತುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಐಫೋನ್ ಪ್ರಿಯರಿಗೆ ಗುಡ್​ನ್ಯೂಸ್​.. iPhone15 Plus ಮೇಲೆ ಭಾರೀ ಆಫರ್; ಇಷ್ಟು ಕಡಿಮೆಗೆ ಸಿಗುತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment