Advertisment

Breaking: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ನಿಧನ

author-image
Veena Gangani
Updated On
Breaking: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ನಿಧನ
Advertisment
  • ಓಂ ಪ್ರಕಾಶ್ ಚೌಟಾಲಾ ನಿಧನಕ್ಕೆ ಗಣ್ಯರಿಂದ ಸಂತಾಪ ಸೂಚನೆ
  • 7 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದ ಹರಿಯಾಣದ ಮಾಜಿ ಮುಖ್ಯಮಂತ್ರಿ
  • 4 ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಚೌಟಾಲಾ

ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ನಾಯಕ ಓಂ ಪ್ರಕಾಶ್ ಚೌಟಾಲಾ (89) ಅವರು ನಿಧನರಾಗಿದ್ದಾರೆ. ಗುರುಗ್ರಾಮ್‌ನಲ್ಲಿರುವ ತಮ್ಮ ನಿವಾಸದಲ್ಲಿ ಚೌಟಾಲಾ ಕಾರ್ಡಿಯಾಕ್ ಅರೆಸ್ಟ್​ನಿಂದ ಮೃತಪಟ್ಟಿದ್ದಾರೆ.

Advertisment

ಇದನ್ನೂ ಓದಿ:ನನ್ನ ತಲೆಗೆ ಪೊಲೀಸರು ಹೊಡೆದ್ರು- ಕೋರ್ಟ್​ನಲ್ಲಿ ಆಘಾತಕಾರಿ ವಿಚಾರ ತಿಳಿಸಿದ ಸಿಟಿ ರವಿ

publive-image

ಕಾರ್ಡಿಯಾಕ್ ಅರೆಸ್ಟ್​ಗೆ ಒಳಗಾದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಓಂ ಪ್ರಕಾಶ್ ಚೌಟಾಲಾ ನಿಧನರಾಗಿದ್ದಾರೆ. ಚೌಟಾಲಾ ಅವರು ಭಾರತೀಯ ರಾಜಕೀಯದ ಧೀಮಂತ ನಾಯಕರಲ್ಲಿ ಒಬ್ಬರಾಗಿದ್ದರು. 7 ಬಾರಿ ಶಾಸಕರಾಗಿದ್ದ ಓಂ ಪ್ರಕಾಶ್ ಚೌಟಾಲಾ, ನಾಲ್ಕು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಭಾರತ ಕಂಡ 6ನೇ ಉಪಪ್ರಧಾನಿ ಚೌಧರಿ ದೇವಿ ಲಾಲ್ ಅವರ ಪುತ್ರರಾಗಿದ್ದರು.

publive-image

ಚೌಟಾಲಾ ಅವರ ವೃತ್ತಿಜೀವನವು ವಿವಾದಗಳಿಂದ ಗುರುತಿಸಲ್ಪಟ್ಟಿತ್ತು. ನೇಮಕಾತಿ ಹಗರಣ ಸೇರಿದಂತೆ ಜೈಲುವಾಸಕ್ಕೆ ಕಾರಣವಾಯಿತು. 1999-2000 ಅವಧಿಯಲ್ಲಿ ಹರಿಯಾಣದಲ್ಲಿ ಶಿಕ್ಷಕರ ನೇಮಕಾತಿಯನ್ನು ಒಳಗೊಂಡ ಹಗರಣಕ್ಕೆ 2013 ರಲ್ಲಿ 10 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಜುಲೈ 2021 ರಲ್ಲಿ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು. ಚೌಟಾಲಾ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜಕೀಯ ಗಣ್ಯರು, ಸ್ನೇಹಿತರು ಹಾಗೂ ಸಂಬಂಧಿಕರು ಸಂತಾಪ ಸೂಚಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment