newsfirstkannada.com

ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಶಿವರಾಮ್​ ಅಂತಿಮ ದರ್ಶನ.. ಅವರ ಬದುಕಿನ ಕೆಲ ಇಂಟ್ರೆಸ್ಟಿಂಗ್​ ಫೋಟೋಸ್..

Share :

Published March 1, 2024 at 9:26am

  ಐಎಎಸ್​​ ಹುದ್ದೆಯಿಂದ ನಿವೃತ್ತಿ ಪಡೆದುಕೊಂಡಿದ್ದ ಕೆ.ಶಿವರಾಮ್

  ಅನಾರೋಗ್ಯದಿಂದ ಬಳತ್ತಿದ್ದ ಕೆ.ಶಿವರಾಮ್ ಆಸ್ಪತ್ರೆಯಲ್ಲಿ ವಿಧಿವಶ

  ಸಿನಿಮಾ, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕೆ ಶಿವರಾಮ್

ನಟ, ರಾಜಕಾರಣಿ, ಮಾಜಿ ಐಎಎಸ್​ ಅಧಿಕಾರಿ ಕೆ.ಶಿವರಾಮ್ ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶಿವರಾಮ್​, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದು ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.

ಇಂದು ಬೆಳಗ್ಗೆ 7 ಗಂಟೆಗೆ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥಿವ ಶರೀರವನ್ನ ರವಾನಿಸಲಾಗಿದ್ದು ಮಧ್ಯಾಹ್ನ 3 ಗಂಟೆವರೆಗೆ ರವೀಂದ್ರ ಕಲಾಕ್ಷೇತ್ರದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸಂಜೆ ವೇಳೆಗೆ ಅಂತಿಮ ವಿಧಿವಿಧಾನಗಳ ಮೂಲಕ ಕೆ.ಶಿವರಾಮ್ ಅವರ ಅಂತ್ಯಕ್ರಿಯೆ ನಡೆಯಲಿದೆ.

ಸಿನಿಮಾದಲ್ಲಿ ಅಭಿನಯಿಸುವುದಕ್ಕೂ ಮೊದಲು ಶಿವರಾಮ್ ಐಎಎಸ್​ ಅಧಿಕಾರಿಯಾಗಿದ್ದರು. ಆದರೆ 2013ರಲ್ಲಿ ಸ್ವಯಂ ನಿವೃತ್ತಿ ಪಡೆದು ರಾಜಕೀಯದಲ್ಲಿ ಸಕ್ರೀಯರಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ವಿಜಯಪುರದಿಂದ ಸ್ಪರ್ಧಿಸಿ ಸೋಲುಕಂಡಿದ್ದರು. ಬಳಿಕ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ನಟ, ರಾಜಕಾರಣಿ, ಐಎಎಸ್ ಅಧಿಕಾರಿಯೂ ಆಗಿದ್ದ ಕೆ.ಶಿವರಾಮ್​ ಇನ್ನೂ ನೆನಪು ಮಾತ್ರ.

IAS ಅಧಿಕಾರಿಯಾಗಿದ್ದ ವೇಳೆ ಕಚೇರಿಯಲ್ಲಿ ಕುಳಿತು ವಿಷಯದ ಬಗ್ಗೆ ಕೆ.ಶಿವರಾಮ್ ಅವರು ಮಾತನಾಡುತ್ತಿರುವುದು. ಹಾಗೂ ಇನ್ನೊಂದು ಫೋಟೋದಲ್ಲಿ ಅಧಿಕಾರಿಗಳೊಂದಿಗೆ ಸ್ಥಳವೊಂದಕ್ಕೆ ಭೇಟಿ ನೀಡಿರುವುದು.

ಸರ್ಕಾರಿ ಕೆಲಸ, ಸಿನಿಮಾ ಹಾಗೂ ರಾಜಕಾರಣದಲ್ಲಿ ಹೆಸರು ಪಡೆದಿರುವ ಶಿವರಾಮ್ ಅವರು ಒಮ್ಮೆ ಕುದುರೆಯನ್ನು ರೈಡ್ ಮಾಡಿದ್ದರು. ಮಧ್ಯದ ಫೋಟೋದಲ್ಲಿ ಕಾರ್ಯಕ್ರಮವೊಂದರಲ್ಲಿ ಹೂಮಾಲೆ ಹಾಕಿಸಿಕೊಳ್ಳುತ್ತಿದ್ದಾರೆ. ಕೊನೆಯ ಫೋಟೋದಲ್ಲಿ ಪೊಲೀಸ್ ಆಫೀಸರ್ ಆಗಿರುವುದನ್ನು ಕಾಣಬಹುದು.

ಕರ್ನಾಟಕ ಪೊಲೀಸ್​ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಶಿವರಾಮ್​ ಅವರು ನಾಗರಿಕ ಸೇವಾ ಪರೀಕ್ಷೆ ಪಾಸ್​ ಆಗುತ್ತಾರೆ. ಕನ್ನಡದಲ್ಲಿ ಐಎಎಸ್​ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಶಿವರಾಮ್​ ಅಂತಿಮ ದರ್ಶನ.. ಅವರ ಬದುಕಿನ ಕೆಲ ಇಂಟ್ರೆಸ್ಟಿಂಗ್​ ಫೋಟೋಸ್..

https://newsfirstlive.com/wp-content/uploads/2024/03/K_SHIVARAM_.jpg

Load More