Advertisment

ಭಾರತದ ಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಾಡ್ ನಿಧನ; ಪಾಕ್‌ ವಿರುದ್ಧ ದಾಖಲೆ ಬರೆದ ಸರದಾರ ಇನ್ನಿಲ್ಲ

author-image
Gopal Kulkarni
Updated On
ಭಾರತದ ಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಾಡ್ ನಿಧನ; ಪಾಕ್‌ ವಿರುದ್ಧ ದಾಖಲೆ ಬರೆದ ಸರದಾರ ಇನ್ನಿಲ್ಲ
Advertisment
  • ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಂಶುಮನ್ ಗಾಯಕ್ವಾಡ ನಿಧನ
  • ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್​ನೊಂದಿಗೆ ಹೋರಾಡುತ್ತಿದ್ದ ಗಾಯಕ್ವಾಡ್
  • ಗಾಯಕ್ವಾಡ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

ಭಾರತದ ಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಾಡ್ ತಮ್ಮ 71ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗಾಯಕ್ವಾಡ್ ಬ್ಲಡ್​ ಕ್ಯಾನ್ಸರ್​​ನಿಂದ ಬಳಲುತ್ತಿದ್ದರು. ಮಾಜಿ ಕ್ರಿಕೆಟ್​ ಆಟಗಾರ ಲಂಡನ್​ನ ಕಿಂಗ್ಸ್​ ಕಾಲೇಜ್​ ಹಾಸ್ಪಿಟಲ್​ನಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಭಾರತಕ್ಕೆ ಮರಳಿದ್ದರು. ಜುಲೈ 31 ರಂದು ಕ್ಯಾನ್ಸರ್​​ನೊಂದಿಗಿನ ನಿರಂತರ ಹೋರಾಟ ಅಂತ್ಯಗೊಳಿಸಿದ ಗಾಯಕ್ವಾಡ್​​ ಅವರು ನಿಧನರಾಗಿದ್ದಾರೆ.

Advertisment

ಗಣ್ಯರಿಂದ ಗಾಯಕ್ವಾಡ್​ಗೆ ಸಂತಾಪ
ಅಂಶುಮನ್ ಗಾಯಕ್ವಾಡ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಗಾಯಕ್ವಾಡ್ ಸಾಧನೆಯನ್ನು ನೆನಪಿಸಿರುವ ಮೋದಿ, ಭಾರತ ಕ್ರಿಕೆಟ್ ತಂಡಕ್ಕೆ ಗಾಯಕ್ವಾಡ್​ ನೀಡಿದ ಕೊಡುಗೆ ಸದಾ ನೆನಪಿನಲ್ಲಿರುತ್ತೆ. ಅವರೊಬ್ಬ ಅದ್ಭುತ ಆಟಗಾರ ಹಾಗೂ ಅದ್ಭುತ ಕೋಚ್, ಅವರ ಅಗಲಿಕೆಯಿಂದ ತುಂಬಾ ನೋವಾಗಿದೆ. ಅವರ ಕುಟುಂಬಕ್ಕೆ ನೋವು ಹೊರುವ ಶಕ್ತಿ ದೇವರು ನೀಡಲಿ ಓಂ ಶಾಂತಿ ಎಂದು ಮೋದಿ ಹೇಳಿದ್ದಾರೆ.


">July 31, 2024

ಇದನ್ನೂ:ಇಂಟರ್’ನೆಟ್’ನಲ್ಲಿ ಅತಿಹೆಚ್ಚು ಸರ್ಚ್‌ಗೆ ಒಳಗಾದ ಮನು ಭಾಕರ್​​ ಜಾತಿ; ಇದೆಂಥಾ ಮನಸ್ಥಿತಿ!

Advertisment

ಇನ್ನು ಗಾಯಕ್ವಾಡ್ ಅಗಲಿಕೆಗೆ ಸಂತಾಪ ಸೂಚಿಸಿರುವ ಬಿಸಿಸಿಐನ ಗೌರವ ಕಾರ್ಯದರ್ಶಿ ಜಯ್ ಶಾ ಕೂಡ ಸಂತಾಪ ಸೂಚಿಸಿದ್ದಾರೆ. ಇದು ಇಡೀ ಕ್ರಿಕೆಟ್ ಜಗತ್ತಿಗೆ ಆಘಾತಕಾರ ಸುದ್ದಿ, ಅವರ ಕುಟುಂಬಕ್ಕೆ ಹಾಗೂ ಸ್ನೇಹಿತರಿಗೆ ನಾನು ಸಂತಾಪ ಸೂಚಿಸುತ್ತೆ. ಗಾಯಕ್ವಾಡ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಯ್ ಶಾ ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.


">July 31, 2024

publive-image

ಅಂಶುಮನ್ ಗಾಯಕ್ವಾಡ್ ಕ್ರಿಕೆಟ್ ಸಾಧನೆಯನ್ನು ನೋಡ್ತಾ ಹೋದ್ರೆ ಅವರು  ಒಟ್ಟು 55 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದು, ಒಟ್ಟು 250 ಡೊಮೆಸ್ಟಿಕ್ ಪಂದ್ಯಗಳನ್ನ ಬರೋಡಾದ ಪರವಾಗಿ ಆಡಿದ್ದಾರೆ. ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್​ ಗಾಯಕ್ವಾಡ್​ ಅವರ ಚಿಕಿತ್ಸೆಗೆ ಬಿಸಿಸಿಐ ಆರ್ಥಿಕ ಸಹಾಯ ಮಾಡಬೇಕು ಎಂದು ವಿನಂತಿ ಮಾಡಿಕೊಂಡಿದ್ದರು. ಒಟ್ಟು 70 ಟೆಸ್ಟ್ ಇನ್ನಿಂಗ್ಸ್​ನಲ್ಲಿ 1985 ರನ್​ ಕಲೆ ಹಾಕಿದ್ರು. 30.07 ಸರಾಸರಿಯಲ್ಲಿ 2 ಶತಕ ಹಾಗೂ 10 ಅರ್ಧ ಶತಕಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. 1982-83ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್​ ಮ್ಯಾಚ್​ನಲ್ಲಿ ಗಾಯಕ್ವಾಡ್​ 201ರನ್ ಗಳಿಸಿದ್ದರು. ಇದು ಟೆಸ್ಟ್ ಇತಿಹಾಸದಲ್ಲಿಯೇ ಅತ್ಯಂತ ನಿಧಾನಗತಿಯಲ್ಲಿ ಬಾರಿಸಿದ ದ್ವಿಶತಕ ಎಂದೇ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ.

Advertisment

ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಹೇಳಿದ ಬಳಿಕ ಗಾಯಕ್ವಾಡ್​ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. 1997 ರಿಂದ 2000ದವರೆಗೂ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ಗಾಯಕ್ವಾಡ್ ಸೇವೆ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment