/newsfirstlive-kannada/media/post_attachments/wp-content/uploads/2025/04/GAIKWAD.jpg)
ಸೋಲಿನ ಮೇಲೆ ಸೋಲು ಕಾಣುತ್ತಿರುವ ಸಿಎಸ್ಕೆಗೆ ಸ್ಫೋಟಕ ಬ್ಯಾಟರ್ ಎಂಟ್ರಿ ಸಾಧ್ಯತೆ ದಟ್ಟವಾಗಿದೆ. ಋತುರಾಜ್ ಗಾಯಕ್ವಾಡ್ ಗಾಯಗೊಂಡು ಐಪಿಎಲ್-2025 ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಹಾಗಾಗಿ ಸಿಎಸ್ಕೆ ಫ್ರಾಂಚೈಸಿಯು ಗಾಯಕ್ವಾಡ್ ಬದಲಿಗೆ ಹೊಸ ಆಟಗಾರನ ಹುಡುಕಾಟದಲ್ಲಿದೆ.
ಮಾಹಿತಿ ಪ್ರಕಾರ, ಟೀಂ ಇಂಡಿಯಾದ ಒಂದು ಕಾಲದ ಸ್ಫೋಟಕ ಬ್ಯಾಟ್ಸಮನ್ ಪೃಥ್ವಿ ಶಾ ಅವರನ್ನು ಕರೆದುಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸಿಎಸ್ಕೆಯಲ್ಲಿ ರಚಿನ್ ರವೀಂದ್ರ ಹಾಗೂ ಕಾನ್ವೆ ಆರಂಭಿಕ ಬ್ಯಾಟರ್ ಆಗಿದ್ದಾರೆ. ಇಬ್ಬರೂ ಪವರ್ ಪ್ಲೇನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಪವರ್ ಪ್ಲೇ ಸ್ಪೆಷಲಿಸ್ಟ್ ಆಗಿರುವ ಪೃಥ್ವಿ ಶಾರನ್ನು ತಂಡಕ್ಕೆ ಸೇರಿಸಿಕೊಂಡು, ಸ್ಟ್ರಾಂಗ್ ಕಂಬ್ಯಾಕ್ ಮಾಡಲು ಚೆನ್ನೈ ಸೂಪರ್ ಕಿಂಕ್ಸ್ ಪ್ಲಾನ್ ಮಾಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು.. ಕೊನೆಗೂ ಕಾರಣ ರಿವೀಲ್..!
ಪೃಥ್ವಿ ಶಾ ಈ ಬಾರಿಯ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ 7 ಸೀಸನ್ ಆಡಿವ ಪೃಥ್ವಿ ಶಾ, 79 ಇನ್ನಿಂಗ್ಸ್ ಆಡಿದ್ದಾರೆ. 23.94 ಸರಾಸರಿಯಲ್ಲಿ 1892 ರನ್ಗಳಿಸಿದ್ದಾರೆ. 14 ಅರ್ಧ ಶತಕ ಇದರಲ್ಲಿ ಸೇರಿದೆ. ಇವರು ಅಗ್ರೆಸಿವ್ ಪವರ್ಪ್ಲೇ ಸ್ಪೆಷಲಿಸ್ಟ್ ಆಗಿದ್ದಾರೆ. ಐಪಿಎಲ್ ಕರಿಯರ್ನಲ್ಲಿ 147.46 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. 2021ರ ಐಪಿಎಲ್ನಲ್ಲಿ ಅವರು ಸ್ಫೋಟಕ ಬ್ಯಾಟಿಂಗ್ ಆಡಿದರು. 15 ಇನ್ನಿಂಗ್ಸ್ನಲ್ಲಿ 31.93 ಸರಾಸರಿಯಲ್ಲಿ 479 ರನ್ಗಳಿಸಿದ್ದರು. ಮಾತ್ರವಲ್ಲ, ನಾಲ್ಕು ಅರ್ಧಶತಕ ಕೂಡ ಬಾರಿಸಿದ್ದರು.
ಇನ್ನು, ಗಾಯಕ್ವಾಡ್ ಅನುಪಸ್ಥಿತಿಯಲ್ಲಿ ಎಂಎಸ್ ಧೋನಿ ಸಿಎಸ್ಕೆ ತಂಡವನ್ನು ಮುನ್ನಡೆಸ್ತಿದ್ದಾರೆ. ಧೋನಿ ನೇತೃತ್ವದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಕೆಕೆಆರ್ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಸಿಎಸ್ಕೆ ಸತತ ಐದನೇ ಪಂದ್ಯ ಸೋತಿದೆ.
ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಕಾರ್ತಿಕ್ ಆಕ್ರೋಶ.. RCB ಕೋಚ್ನಿಂದ ಬ್ಲೇಮ್ ಗೇಮ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್