ಬಡವಾದ ವಿಜ್ಞಾನಲೋಕ.. ಬಾಹ್ಯಾಕಾಶ ಕ್ಷೇತ್ರಕ್ಕೆ ಡಾ.ಕಸ್ತೂರಿರಂಗನ್ ಮರೆಯಲಾಗದ ಕೊಡುಗೆ

author-image
Ganesh
Updated On
ಬಡವಾದ ವಿಜ್ಞಾನಲೋಕ.. ಬಾಹ್ಯಾಕಾಶ ಕ್ಷೇತ್ರಕ್ಕೆ ಡಾ.ಕಸ್ತೂರಿರಂಗನ್ ಮರೆಯಲಾಗದ ಕೊಡುಗೆ
Advertisment
  • ಪಶ್ಚಿಮಘಟ್ಟ, ಪರಿಸರ ಉಳಿವಿಗೂ ಡಾ.ಕಸ್ತೂರಿರಂಗನ್ ಕೊಡುಗೆ
  • ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದ ವಿಜ್ಞಾನಿ
  • ಕಸ್ತೂರಿರಂಗನ್ ಅಗಲಿಕೆಗೆ ಪ್ರಧಾನಿ ಮೋದಿ, ಗಣ್ಯರಿಂದ ಕಂಬನಿ

ಭಾರತ ಕಂಡ ಹಿರಿಯ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ (Krishnaswamy Kasturirangan) ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವರ್ಷಗಳಾಗಿತ್ತು.

ಬಾಹ್ಯಾಕಾಶ ವಿಜ್ಞಾನಿಯಾಗಿದ್ದ ಅವರು, ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಲ್ಲಿ ಬರೋಬ್ಬರಿ 9 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1994 ರಿಂದ ಆಗಸ್ಟ್ 27, 2003ವರೆಗೆ ಇಸ್ರೋದ ಅಧ್ಯಕ್ಷರಾಗಿದ್ದರು. ರಾಜ್ಯಸಭೆ ಸದಸ್ಯ, ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಇವರ ಸಾಧನೆಗೆ ಭಾರತ ಸರ್ಕಾರ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (1982), ಪದ್ಮಭೂಷಣ (1992) ಮತ್ತು ಪದ್ಮ ವಿಭೂಷಣ (2000) ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.

ಇದನ್ನೂ ಓದಿ: 2 ಗಂಟೆಗಳ ಕಾಲ ಸರ್ವಪಕ್ಷ ಸಭೆ; ಗಂಭೀರ ಚರ್ಚೆಯಲ್ಲಿ ರಾಹುಲ್ ಗಾಂಧಿ ಏನಂದ್ರು..?

publive-image

ಶಿಕ್ಷಣ ಮತ್ತು ಸಂಶೋಧನೆ

ಕಸ್ತೂರಿರಂಗನ್ ಅವರು ಅಕ್ಟೋಬರ್ 24, 1940 ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದ್ದರು. ಸಿಎಂ ಕೃಷ್ಣಸ್ವಾಮಿ ಅಯ್ಯರ್, ವಿಶಲಾಕ್ಷಿಯ ದಂಪತಿಯ ಮಗನಾಗಿ ಜನಿಸಿದ್ದರು. ಡಾ.ಕಸ್ತೂರಿರಂಗನ್ ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಪದವಿ ಪಡೆದು, ಬಾಂಬೆ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿ ಪಡೆದುಕೊಂಡಿದ್ದರು. ಆರಂಭದ ದಿನಗಳಲ್ಲಿ ಅಹ್ಮದಾಬಾದ್​ನ ಫಿಸಿಕಲ್ ರಿಸರ್ಜ್ ಲ್ಯಾಬೋರೇಟರಿ ಕೆಲಸ ಮಾಡುತ್ತ, 1971ರಲ್ಲಿ ‘ಎಕ್ಸ್‌ಪರಿಮೆಂಟಲ್ ಹೈ ಎನರ್ಜಿ’ಯಲ್ಲಿ (high energy astronomy ) ಡಾಕ್ಟರೇಟ್ ಪದವಿ ಪಡೆದಿದ್ದರು. ಖಗೋಳ ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ 224ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದರು.

publive-image

ಡಾ. ಕಸ್ತೂರಿ ರಂಗನ್ ಕೊಡುಗೆಗಳು

9 ವರ್ಷಗಳ ಕಾಲ ಇಸ್ರೋ ಅಧ್ಯಕ್ಷರಾಗಿ ಸೇವೆ, ಬ್ಯಾಹ್ಯಾಕಾಶ ಕ್ಷೇತ್ರಕ್ಕೆ ಪ್ರಮುಖ ಕೊಡುಗೆ ನೀಡಿದ್ದರು. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ನಿರ್ದೇಶಕರಾಗಿ ಸೇವೆ, ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಬಾಹ್ಯಾಕಾಶ ನೌಕೆ, INSAT-2, ಮತ್ತು ಭಾರತೀಯ ದೂರ ಗ್ರಾಹಿಉಪಗ್ರಹಗಳು (IRS-1A ಮತ್ತು 1B), ವೈಜ್ಞಾನಿಕ ಉಪಗ್ರಹಗಳ ಅಭಿವೃದ್ದಿ ಇವರ ನೇತೃತ್ವದಲ್ಲಿ ನಡೆದವು. ಭಾರತದ ಮೊದಲ ಎರಡು ಪ್ರಾಯೋಗಿಕ ಭೂವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ-I ಮತ್ತು II ಪ್ರಾಜೆಕ್ಟ್​​ಗೆ ಕಸ್ತೂರಿ ರಂಗನ್ ಡೈರೆಕ್ಟರ್ ಆಗಿದ್ದರು. ಕಸ್ತೂರಿ ರಂಗನ್ ನೇತೃತ್ವದಲ್ಲಿ ಹೆಸರಾಂತ ಉಡಾವಣಾ ವಾಹಕ PSLV ಮತ್ತು ಜಿಯೋಸಿಂಕ್ರೋನಸ್ ಉಡಾವಣಾ ವಾಹನ (Geosynchronous Satellite Launch Vehicle) ಮತ್ತು ಕಾರ್ಯನಿರ್ವಹಣೆ ಸೇರಿದಂತೆ ಅನೇಕ ಪ್ರಮುಖ ಸಾಧನೆಗಳಾಗಿವೆ.

ಇದನ್ನೂ ಓದಿ: 22 ರನ್​ ನೀಡಿದ ಭುವಿ.. ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಹೇಜಲ್​ವುಡ್ ತಿರುವು ಕೊಟ್ಟ ರೋಚಕತೆ ಹೇಗಿತ್ತು..?

publive-image

ಜೊತೆಗೆ ಎಕ್ಸ್-ರೇ ಮತ್ತು ಗಾಮಾ ಕಿರಣಗಳ ಮೇಲೆ ಸಂಶೋಧನೆ ನಡೆಸಿದ್ದ ಅವರು, ಖಗೋಳ ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಕಾಸ್ಮಿಕ್ ಎಕ್ಸ್-ರೇ ಮತ್ತು ಗಾಮಾ ಕಿರಣದ ಮೂಲಗಳು ಮತ್ತು ಕಾಸ್ಮಿಕ್ ಎಕ್ಸ್-ರೇಗಳ ಪರಿಣಾಮಗಳ ಅಧ್ಯಯನಗಳ ಮೂಲಕ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ.

ಪಶ್ಚಿಮಘಟ್ಟ ಉಳಿಸಿಕೊಳ್ಳಲು ವರದಿ

ಮಾದವ ಗಾಡ್ಗಿಲ್‍ ಸಮಿತಿ ವರದಿಯ ಲೋಪದೋಷಗಳನ್ನು ಸರಿಪಡಿಸಲು ಸರ್ಕಾರ ಕಸ್ತೂರಿರಂಗನ್ ಸಮಿತಿ ರಚಿಸಿತ್ತು. ಕಸ್ತೂರಿರಂಗನ್ ನೇತೃತ್ವದ ಸಮಿತಿಯು 2013 ರ ಏಪ್ರಿಲ್ 15 ರಂದು ಸಲ್ಲಿಸಿದೆ. ಪಶ್ಚಿಮ ಘಟ್ಟಗಳ ಉಳಿವಿಗೆ ಸಿದ್ಧಪಡಿಸಿರುವ ವರದಿ ಸರ್ಕಾರದ ಬಳಿ ಇದೆ.

ಡಾ.ಕಸ್ತೂರಿರಂಗನ್ ನಿಧನವು ಭಾರತೀಯ ವಿಜ್ಞಾನ ಲೋಕಕ್ಕೆ ದೊಡ್ಡ ಆಘಾತ ಆಗಿದೆ. ಹಿರಿಯ ವಿಜ್ಞಾನಿಯ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: BREAKING: ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ವಿಧಿವಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment