newsfirstkannada.com

BREAKING: ತೀವ್ರ ಹೃದಯಾಘಾತ.. ಜೆಡಿಎಸ್ ಮಾಜಿ MLA ನಾಗನಗೌಡ ಕಂದಕೂರು ವಿಧಿವಶ

Share :

Published January 28, 2024 at 12:54pm

Update January 28, 2024 at 12:59pm

  ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದಕ್ಕೆ ಖಾಸಗಿ ಆಸ್ಪತ್ರೆಗೆ ದಾಖಲು

  ಜೆಡಿಎಸ್‌ ಮಾಜಿ ಶಾಸಕ ನಾಗನಗೌಡ ಕಂದಕೂರ್ ವಿಧಿವಶ

  2018ರಲ್ಲಿ ಯಾದಗಿರಿಯ ಗುರುಮಠಕಲ್‌ ಕ್ಷೇತ್ರದಲ್ಲಿ ಜಯಭೇರಿ

ಯಾದಗಿರಿ: ಎದೆನೋವು ಕಾಣಿಸಿಕೊಂಡಿದ್ದಕ್ಕೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಜೆಡಿಎಸ್‌ ಮಾಜಿ ಶಾಸಕ ನಾಗನಗೌಡ ಕಂದಕೂರ್ ಅವರು ವಿಧಿವಶರಾಗಿದ್ದಾರೆ. ಮೃತರಿಗೆ 79 ವರ್ಷ ವಯಸ್ಸಾಗಿತ್ತು.

ಮೃತ ನಾಗನಗೌಡ ಕಂದಕೂರ್ ಅವರು 2018ರಲ್ಲಿ ಯಾದಗಿರಿ ಜಿಲ್ಲೆ ಗುರುಮಠಕಲ್‌ ಶಾಸಕರಾಗಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ ಮೊದಲ ಬಾರಿಗೆ ನಾಗನಗೌಡ ಕಂದಕೂರ್ ಅವರು MLA ಆಗಿ ಆಯ್ಕೆಯಾಗಿದ್ದರು. ಗುರುಮಠಕಲ್‌ನ ಜೆಡಿಎಸ್ ಹಾಲಿ ಶಾಸಕ ಶರಣಗೌಡ ಕಂದಕೂರ್ ಅವರ ತಂದೆ ನಾಗನಗೌಡ ಕುಂದಕೂರ್ ಅವರು.

ಇಂದು ಬೆಳಗ್ಗೆ ನಾಗನಗೌಡ ಕಂದಕೂರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ 11 ಗಂಟೆೆಗೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಯಾದಗಿರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಾಗನಗೌಡ ಕಂದಕೂರ್ ಅವರು ಕೊನೆಯುಸಿರೆಳೆದಿದ್ದು, ಸಂಬಂಧಿಕರು ಹಾಗೂ ಜೆಡಿಎಸ್ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.

ಯಾದಗಿರಿ ನಗರದ ಖಾಸಗಿ ಆಸ್ಪತ್ರೆಯಿಂದ ಮಾಜಿ ಶಾಸಕ ನಾಗನಗೌಡ ಕಂದಕೂರು ಅವರ ಪಾರ್ಥಿವ ಶರೀರವನ್ನು ಮನೆಗೆ ತರಲಾಗಿದೆ. ಯಾದಗಿರಿ ನಗರದ ಮನೆಗೆ ಆ್ಯಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರ ತರಲಾಗಿದ್ದು, ತಂದೆಯನ್ನು ಕಳೆದುಕೊಂಡ ಶಾಸಕ ಶರಣಗೌಡ ಕಂದಕೂರು ಅವರು ತಾಯಿಯನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ.

ತಾಯಿಯ ಸ್ಥಿತಿ ಕಂಡು ಶಾಸಕ ಶರಣಗೌಡ ಕಂದಕೂರು ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಾಗನಗೌಡ ಕಂದಕೂರ್ ಅವರ ಪಾರ್ಥಿವ ಶರೀರ ಮನೆಗೆ ಬರ್ತಿದ್ದಂತೆ ಕುಟುಂಬಸ್ಥರು, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ತೀವ್ರ ಹೃದಯಾಘಾತ.. ಜೆಡಿಎಸ್ ಮಾಜಿ MLA ನಾಗನಗೌಡ ಕಂದಕೂರು ವಿಧಿವಶ

https://newsfirstlive.com/wp-content/uploads/2024/01/Yadgiri-JDS-EX-MLA-Death.jpg

Load More