ಓಂ ಪ್ರಕಾಶ್​ ಬರ್ಬರ ಹತ್ಯೆ; ಪೊಲೀಸರಿಗೆ ಮೂಡಿದ ಅನುಮಾನಗಳು ಏನು..?

author-image
Ganesh
Updated On
ಓಂ ಪ್ರಕಾಶ್​ ಬರ್ಬರ ಹತ್ಯೆ; ಪೊಲೀಸರಿಗೆ ಮೂಡಿದ ಅನುಮಾನಗಳು ಏನು..?
Advertisment
  • ನಿವೃತ್ತ ಡಿಜಿ & ಐಜಿಪಿ ಓಂ ಪ್ರಕಾಶ್​ ಬರ್ಬರ ಹತ್ಯೆ!
  • ಎಂಟರಿಂದ ಹತ್ತು ಬಾರಿ ಓಂ ಪ್ರಕಾಶ್​ಗೆ ಇರಿದು ಕೊಲೆ
  • ಓಂ ಪ್ರಕಾಶ್ ಎದೆ, ಹೊಟ್ಟೆ, ಕೈ ಭಾಗಕ್ಕೆ ಇರಿದ ಗುರುತು

ನಿವೃತ್ತ ಐಪಿಎಸ್ ಓಂ ಪ್ರಕಾಶ್‌ ಬರ್ಬರ ಕೊಲೆಯಾಗಿದ್ದಾರೆ. ತಮ್ಮದೇ ಪತ್ನಿಯಿಂದ ಹತ್ಯೆಯಾದ ಶಂಕೆ ಮೂಡಿದೆ.. ಮಾನಸಿಕ ಸ್ಥಿಮಿತ ಕಳೆದುಕೊಂಡಿರೋ ಪಲ್ಲವಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೆಣ್ಣು-ಹೊನ್ನು-ಮಣ್ಣಿನ ವಿಚಾರಕ್ಕೆ ಮರ್ಡರ್​​​​ ಶಂಕೆ!

ಓಂ ಪ್ರಕಾಶ್.. ಖಡಕ್​​​ ಐಪಿಎಸ್​​ ಅಧಿಕಾರಿ.. ರಾಜ್ಯದ 38ನೇ ಡಿಜಿ ಐಜಿಪಿ ಆಗಿ ನಿವೃತ್ತ ಜೀವನ ಕಳೀತಿದ್ರು. ನಿವೃತ್ತ ಜೀವನ ಅಂದ್ರೆ, ಬದುಕಿನ ಬಂಗಾರದ ಕಾಲ.. ಆದ್ರೆ, ಓಂ ಪ್ರಕಾಶ್​ ಅವರ ಕೊನೆ ದಿನಗಳು ಬದುಕಿನ ಬಾಣಗಳ ಮರಣ ಶಯ್ಯದಲ್ಲಿ ಹೊರಳಾಡ್ತಿತ್ತು.. ಜೀವನ ಪೂರ್ತಿ ಅದೆಷ್ಟು ಮರ್ಡರ್​​​ಗಳ ರಹಸ್ಯ ಬೇಧಿಸಿದ್ದ ಓಂ ಪ್ರಕಾಶ್​​, ತಾವೇ ರಹಸ್ಯವಾಗಿ ತಮ್ಮದೇ ನಿವಾಸದಲ್ಲಿ ಬರ್ಬರ ರೀತಿಯಲ್ಲಿ ಹತ್ಯೆಯಾಗಿದ್ದಾರೆ..

ಇದನ್ನೂ ಓದಿ: ಹೊಸ ಬಣ್ಣ ಕಂಡು ಹಿಡಿದ ವಿಜ್ಞಾನಿಗಳು; ಜಗತ್ತಿನಲ್ಲೇ ಇದನ್ನ ನೋಡಿರೋದೋ 5 ಮಂದಿ ಮಾತ್ರ!

ಪಲ್ಲವಿಯನ್ನ ವಶಕ್ಕೆ ಪಡೆದು ಮನೆಯಲ್ಲೇ ಪೊಲೀಸರ ವಿಚಾರಣೆ!

ಅನುರಾಗ ಅರಳಿದ ಸಮಯದಲ್ಲಿ ಓಂ ಪ್ರಕಾಶ್​​ರಿಗೆ ಸಿಕ್ಕಿದ್ದೆ ಪಲ್ಲವಿ.. ಆದ್ರೆ, ಜೀವನ ಸಂಗಾತಿ, ಜೀವಕ್ಕೆ ಎರವಾಗ್ತಾಳೆ ಅನ್ನೋ ಸಂಗತಿ, ಕ್ರೈಂ ಜಗತ್ತಿನ ದಿ ಬೆಸ್ಟ್​​​ ಆಫೀಸರ್​​​ ಓಂ ಪ್ರಕಾಶ್​ರಿಗೆ ಹೊಳೆಯದೇ ಹೋಗಿದ್ದು ಕಾಲಗರ್ಭದ ದುರಂತ.. ಅದ್ಯಾವುದೋ ಹೆಣ್ಣಿನ ಮಾಯೆ.. ಒಡಹುಟ್ಟಿದವರಿಗೆ ಮಣ್ಣು ಹಂಚಿದ್ರು ಅನ್ನೋ ಕಾರಣಕ್ಕೆ ಓಂ ಪ್ರಕಾಶ್​​ ಕೊನೆ ದಿನಗಳನ್ನ ಎಣಿಸಿದ್ರಾ ಅನ್ನೋ ಸಂಶಯಗಳು ಹೊರಳಾಡ್ತಿವೆ.. ಅಜಾನುಬಾಹು ದೇಹದ 8 ರಿಂದ 10 ಭಾಗದಲ್ಲಿ ಹರಿದ ಹರಿತ ಚಾಕು, ಉಸಿರು ನಿಲ್ಸಿದೆ..

ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್ ಹತ್ಯೆ

ಎಂಟರಿಂದ ಹತ್ತು ಬಾರಿ ಓಂ ಪ್ರಕಾಶ್​ಗೆ ಇರಿದು ಕೊಲೆ ಮಾಡಿದ್ದು ಗೊತ್ತಾಗಿದೆ. ಓಂ ಪ್ರಕಾಶ್ ಎದೆ, ಹೊಟ್ಟೆ, ಕೈ ಭಾಗಕ್ಕೆ ಇರಿದ ಗುರುತುಗಳಿವೆ.. ಮನೆಯಲ್ಲಿದ್ದ ಚಾಕುವನ್ನು ಪೊಲೀಸರು ಸಹ ವಶಕ್ಕೆ ಪಡೆದಿದ್ದಾರೆ.. ಮೋಸ್ಟ್​ಲೀ ಚಾಕುವಿನಿಂದ ಪಲ್ಲವಿಯೇ ಇರಿದು ಕೊಲೆ ಮಾಡಿದ ಶಂಕೆ ಇದೆ.. ಓಂ ಪ್ರಕಾಶ್ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಎಫ್ಎಸ್ಎಲ್ ತಂಡ, ಕ್ರೈಂ ಸೀನ್​ನಲ್ಲಿ ಸಾಕ್ಷಿ ಸಂಗ್ರಹಿಸಿ ತೆರಳಿದೆ.. ಕೊಲೆ ಸ್ಥಳದಲ್ಲಿ ಸಿಕ್ಕಿ ಎಲ್ಲಾ ವಸ್ತುಗಳನ್ನ ಶೇಖರಿಸಿದೆ.. ಕ್ರೈಂ ಸೀನ್​ನಲ್ಲಿ ಸಿಕ್ಕಿರುವ ರಕ್ತದ ಸ್ಯಾಂಪಲ್, ಕೂದಲು ಸೇರಿ ಪ್ರತಿಯೊಂದನ್ನ ಸಂಗ್ರಹಿಸಲಾಗಿದೆ.. ಸಂಗ್ರಹಿಸಿರುವ ಎಲ್ಲಾ ಸ್ಯಾಂಪಲ್ ವರದಿಯನ್ನ ಪೊಲೀಸರಿಗೆ ನೀಡಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಮಳೆ.. ರಾಜ್ಯದ ಹಲವೆಡೆ ವರುಣನ ಅಬ್ಬರ; ಹವಾಮಾನ ಇಲಾಖೆ ಎಚ್ಚರಿಕೆ ಏನು?

ಮಧ್ಯಾಹ್ನ ಸುಮಾರು 4:30ಕ್ಕೆ 112ಗೆ ಕರೆ ಬಂದಿದೆ.. ಆಗ ಕೊಲೆ ಆಗಿರೋದು ಗೊತ್ತಾಗಿದೆ.. ಈ ವೇಳೆ ಮನೆಯಲ್ಲಿ ಮೂವರು ಇದ್ರು.. ಮಗನಿಂದಲೂ ಮಾಹಿತಿ ಪಡೆಯಲಾಗಿದೆ.. ಕೊಲೆಗೆ ಶಾರ್ಪ್ ವೆಪನ್ ಬಳಕೆ ಆಗಿದೆ.. ಯಾವ ಕಾರಣಕ್ಕೆ ಕೊಲೆ ಅನ್ನೋದು ತನಿಖೆ ಬಳಿಕ ಗೊತ್ತಾಗಲಿದೆ ಅಂತ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಹೇಳಿದ್ದಾರೆ.

ಮೊದಲ ಫ್ಲೋರ್​ನಲ್ಲಿ ಓಂ ಪ್ರಕಾಶ್ ಮಗ ಮತ್ತು ಸೊಸೆ ಇದ್ದಾರೆ. ಹತ್ಯೆ ನಡೆದ ಮನೆಯ ಗ್ರೌಂಡ್​ಫ್ಲೋರ್​ನಲ್ಲಿನ ಸಾಕ್ಷಿಗಳನ್ನ ರಕ್ಷಿಸುವ ನಿಟ್ಟಿನಲ್ಲಿ ಪೊಲೀಸರು ಸೀಜ್ ಮಾಡಿದ್ದಾರೆ.. ಒಟ್ಟಾರೆ, ಓಂ ಪ್ರಕಾಶ್​​ ಅವರ ಬರ್ಬರ ಹತ್ಯೆ ಇಡೀ ಪೊಲೀಸ್​​ ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: ಪತ್ನಿಯಿಂದಲೇ ನಿವೃತ್ತ DG-IGP ಓಂ ಪ್ರಕಾಶ್ ಜೀವ ತೆಗೆದ ಭಯಾನಕ ಕೃತ್ಯ; ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment