newsfirstkannada.com

ಬಳ್ಳಾರಿ ಮಾಜಿ ಮೇಯರ್ ಪುತ್ರನಿಂದ ಹಲ್ಲೆಗೊಳಗಾಗಿದ್ದ ರಘು ಚಿಕಿತ್ಸೆ ಫಲಿಸದೇ ಸಾವು

Share :

Published March 21, 2024 at 12:18pm

Update March 21, 2024 at 12:19pm

    ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು

    ಮಾರ್ಚ್​ 5 ರಂದು ರಘು ಅಂಡ್ ಗ್ಯಾಂಗ್​ನಿಂದ ಹಲ್ಲೆ

    ‘ದಾರಿ ಬಿಡಿ ಅಣ್ಣ’ ಎಂದು ಕೇಳಿದ್ದಕ್ಕೆ ಹಲ್ಲೆ ನಡೆಸಿದ ಆರೋಪ

ಬಳ್ಳಾರಿ: ಮಾರ್ಚ್ 5 ರಂದು ಬಳ್ಳಾರಿಯಲ್ಲಿ ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಾದ ತಿಪ್ಪೇಸ್ವಾಮಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾನೆ.

ಬಳ್ಳಾರಿ ಮಾಜಿ ಮೇಯರ್ ಪುತ್ರ ರಘು ತನ್ನ ಹುಟ್ಟುಹಬ್ಬದ ದಿನದಂದು ತಪ್ಪಿಸ್ವಾಮಿ ಮೇಲೆ ಮಾರಣಾಂತಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ತಲೆ ಭಾಗಕ್ಕೆ ಬಡಿಗೆಯಿಂದ ಬಲವಾದ ಏಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಬಳ್ಳಾರಿಯ ಹುಸೇನ್ ನಗರದಲ್ಲಿ ಆರೋಪಿ ರಘು ಮತ್ತವರ ಗ್ಯಾಂಗ್ ರಸ್ತೆಯಲ್ಲಿ ಡಿಜೆ ಹಾಕಿ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡುತ್ತಿತ್ತು. ಈ ವೇಳೆ ರಸ್ತೆ ಬಿಡಿ ಎಂದು ಪ್ರಶ್ನೆ ಎಂದು ತಿಪ್ಪೆಸ್ವಾಮಿ ಪ್ರಶ್ನೆ ಮಾಡಿದ್ದರು. ಆಗ ರಘು ಹಾಗೂ ಅವನ ಸ್ನೇಹಿತರು ತಿಪ್ಪೇಸ್ವಾಮಿ ಮೇಲೆ ಮನಸೋ ಇಚ್ಛೆ ದಾಳಿ ಮಾಡಿದ್ದರು ಎನ್ನಲಾಗಿದೆ. ‌

ಬಡಿಗೆಯಿಂದ ಹಲ್ಲೆ ಮಾಡಿದ ಪರಿಣಾಮ ತಿಪ್ಪೆಸ್ವಾಮಿಯ ತಲೆ ಹಾಗೂ ದೇಹದ ಇತರೆ ಭಾಗಗಕ್ಕೆ ತೀವ್ರ ಗಾಯವಾಗಿತ್ತು. ಈ ಸಂಬಂಧ ಬಳ್ಳಾರಿ ಗಾಂಧಿನಗರ ಠಾಣೆಯಲ್ಲಿ ರಘು ಸೇರಿ ಒಟ್ಟು ಎಂಟು ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಪ್ರಮುಖ ಆರೋಪಿ ರಘು ಸೇರಿ ಏಳು ಜನರನ್ನ ಪೊಲೀಸರು ಬಂಧಿಸಿದ್ದರು. ಆರೋಪಿಗಳಾದ ರಘು, ಅನಿಲ್ ಮುತ್ತು ಬಾಸ್ಕರ್ ಸೇರಿ ಏಳು ಜನರ ಬಂಧನವಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿ ಮಾಜಿ ಮೇಯರ್ ಪುತ್ರನಿಂದ ಹಲ್ಲೆಗೊಳಗಾಗಿದ್ದ ರಘು ಚಿಕಿತ್ಸೆ ಫಲಿಸದೇ ಸಾವು

https://newsfirstlive.com/wp-content/uploads/2024/03/BLY-RAGHU.jpg

Load More