newsfirstkannada.com

ತಡರಾತ್ರಿ ದಿಢೀರ್ ದೊಡ್ಡಗೌಡರನ್ನ ಭೇಟಿ ಮಾಡಿದ ಸಿಪಿವೈ.. 2 ಗಂಟೆಗೂ ಹೆಚ್ಚು ಕಾಲ ‘ರಹಸ್ಯ ಮಾತುಕತೆ’

Share :

Published February 12, 2024 at 10:43am

Update February 12, 2024 at 11:13am

    2 ಗಂಟೆ ಕಾಲ ದೇವೇಗೌಡರ ಬಳಿ ಯೋಗೇಶ್ವರ್‌ ಮಾತನಾಡಿದ್ದೇನು?

    2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇವೇಗೌಡರ ಭೇಟಿ

    ತಡರಾತ್ರಿ ಏಕಾಏಕಿ ದೇವೇಗೌಡರನ್ನ ಮೀಟ್ ಮಾಡಿದ ಯೋಗೇಶ್ವರ್‌

ರಾಮನಗರ: 2024ರ ಲೋಕಸಭೆ ಎಲೆಕ್ಷನ್​ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರನ್ನು ಮಾಜಿ ಸಚಿವ ಸಿಪಿ ಯೋಗೇಶ್ವರ್‌ ಅವರು ತಡರಾತ್ರಿ ಭೇಟಿ ಮಾಡಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ಕೊಟ್ಟಿದ್ದ ಸಿಪಿ ಯೋಗೇಶ್ವರ್‌ ಅವರು ಲೋಕಸಭಾ ಚುನಾವಣೆ ಕುರಿತು ಚರ್ಚೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆ ಮಾತನಾಡಿದ್ದು ದೇವೇಗೌಡರ ಜೊತೆ ರಾಜಕೀಯ ಸಂಬಂಧ ಸುಮಾರು 2 ಗಂಟೆಗಳ ಕಾಲ ಯೋಗೇಶ್ವರ್‌ ಅವರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ನಿನ್ನ ಬೆಂಬಲಕ್ಕೆ ನಾವಿದ್ದೇವೆ ಎಂದು ಯೋಗೇಶ್ವರ್​​ವರಿಗೆ ದೊಡ್ಡಗೌಡರು ಅಭಯ ನೀಡಿದ್ದಾರೆ.

ದೇವೇಗೌಡರನ್ನು ಮೀಟ್ ಆದ ಬಗ್ಗೆ ತಮ್ಮ ಫೇಸ್​​ಬುಕ್ ಅಕೌಂಟ್​ನಲ್ಲಿ ಪೋಸ್ಟ್ ಶೇರ್ ಮಾಡಿರುವ ಯೋಗೇಶ್ವರ್ ಅವರು, ನಾಡಿನ ರೈತರು, ಕೃಷಿ ಕಾರ್ಮಿಕರ ಬಗ್ಗೆ ಈ ಇಳಿ ವಯಸ್ಸಿನಲ್ಲೂ ದೇವೇಗೌಡರಿಗೆ ಇರುವ ಕಳಕಳಿ ಅನುಕರಣೀಯ. 6 ದಶಕಗಳ ಸುದೀರ್ಘ ಸಾರ್ವಜನಿಕ ಜೀವನ ಪೂರೈಸಿದ ದೇವೇಗೌಡರ ಜ್ಞಾನ, ಅನುಭವ ನಮ್ಮೆಲ್ಲರಿಗೂ ಪ್ರೇರಣೆ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಡರಾತ್ರಿ ದಿಢೀರ್ ದೊಡ್ಡಗೌಡರನ್ನ ಭೇಟಿ ಮಾಡಿದ ಸಿಪಿವೈ.. 2 ಗಂಟೆಗೂ ಹೆಚ್ಚು ಕಾಲ ‘ರಹಸ್ಯ ಮಾತುಕತೆ’

https://newsfirstlive.com/wp-content/uploads/2024/02/HDD_CP_YOGISHWARA.jpg

Load More