newsfirstkannada.com

ಬಿಜೆಪಿಯಲ್ಲಿ ಭಿನ್ನಮತದ ಬೆಂಕಿ; BSY ಪುತ್ರನ ವಿರುದ್ಧ ಈಶ್ವರಪ್ಪ ಅಖಾಡಕ್ಕೆ.. ಎರಡು ಬಣಗಳ ನಡುವೆ ಕಿತ್ತಾಟ

Share :

Published March 16, 2024 at 7:29am

    ಬಂಡಾಯದ ಬಾವುಟ ಹಾರಿಸಿದ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಸ್ಪರ್ಧೆ

    ಹಾವೇರಿಯ ಜಿಲ್ಲಾ ಬಿಜೆಪಿ ಕಚೇರಿ ರಣರಂಗ, ಹೀಗಾಗೋದಕ್ಕೆ ಕಾರಣ?

    ಗದ್ದಲ ಮಾಡಿದ ಬಣದ ವಿರುದ್ಧ ತಾಕತ್ ಇದ್ರೆ, ಬರ್ರೊ ಅಂತ ಅವಾಜ್

ಲೋಕಸಭೆ ಹಣಾಹಣಿಗೆ ಟಿಕೆಟ್ ಘೋಷಣೆ ಆಗ್ತಿದ್ದಂತೆ ಕೇಸರಿ ಪಾಳಯದಲ್ಲಿ ಬಂಡಾಯದ ಕಿಚ್ಚು ಜ್ವಾಲಾಮುಖಿಯಾಗಿ ಸ್ಫೋಟಿಸಿದೆ. ಹಾವೇರಿಯಲ್ಲಿ ಬಿಜೆಪಿ 2 ಬಣಗಳ ನಡುವೆ ಕಿತ್ತಾಟ ನಡೆದಿದೆ. ಇತ್ತ ಬಿಎಸ್​ವೈ ವಿರುದ್ಧ ಈಶ್ವರಪ್ಪ ನಿಗಿ ನಿಗಿ ಕೆಂಡ ಕಾರುತ್ತಿದ್ದು ಅವರ ಮಗನ ವಿರುದ್ಧ ಸ್ಪರ್ಧೆಗೆ ರಣಕಹಳೆ ಮೊಳಗಿಸಿದ್ದಾರೆ.

ಇಂದು ಲೋಕಸಮರಕ್ಕೆ ಮುಹೂರ್ತ ಫಿಕ್ಸ್​ ಆಗಲಿದೆ. ಈ ನಡುವೆ ಯುದ್ಧಕ್ಕೆ ಶಸ್ತ್ರಾಭ್ಯಾಸ ಮಾಡಬೇಕಿದ್ದ ಕೇಸರಿ ಸೇನೆಯಲ್ಲಿ ಭಿನ್ನಮತದ ಬೆಂಕಿ ಭುಗಿಲೆದ್ದಿದೆ. ಕೇಸರಿ ಪತಾಕೆ ಹಿಡಿದುಕೊಂಡು ಸೇನೆ ಮುನ್ನಡೆಸಬೇಕಿದ್ದ ಕಟ್ಟಾಳುಗಳೇ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಅದರಲ್ಲೂ ಪಕ್ಷವೇ ಮೊದಲು ಎನ್ನುತ್ತಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಒಂದು ಸ್ಟೆಪ್ ಮುಂದೆ ಹೋಗಿ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧವೇ ತೊಡೆ ತಟ್ಟಿದ್ದಾರೆ.

ರಾಘವೇಂದ್ರ ವಿರುದ್ಧ ಪಕ್ಷೇತರವಾಗಿ ಸ್ಪರ್ಧೆ ಘೋಷಣೆ

ಹಾವೇರಿಯಿಂದ ಪುತ್ರ ಕಾಂತೇಶ್​​ಗೆ ಟಿಕೆಟ್​​​ ಕೈ ತಪ್ಪಿದ ಬೆನ್ನಲ್ಲೇ ಈಶ್ವರಪ್ಪ ಶಿವಮೊಗ್ಗದಲ್ಲಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಅಂತ ಘೋಷಿಸಿದ್ದಾರೆ. ಕಾರ್ಯಕರ್ತರ ಸಭೆ ನಡೆಸಿ ಬೆಂಬಲಿಗರ ಅಭಿಪ್ರಾಯ ಪಡೆದು ಶಿವಮೊಗ್ಗ ಕ್ಷೇತ್ರದಿಂದ ಬಿ.ವೈ ರಾಘವೇಂದ್ರ ವಿರುದ್ಧ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ.

ಇಡೀ ರಾಜ್ಯದಲ್ಲೇ ನೊಂದ ಕಾರ್ಯಕರ್ತರು ಹಿಂದುತ್ವದ ಪ್ರತಿಪ್ರಾದಕರು ರಾಜ್ಯದಲ್ಲಿ ಒಂದೇ ಕುಟುಂಬದ ವ್ಯವಸ್ಥೆಯಲ್ಲಿ ಇರಬೇಕು ಎನ್ನುವುದನ್ನ ತಪ್ಪಿಸಬೇಕು. ಈ ಉದ್ದೇಶದಿಂದ ಎಲ್ಲರೂ ಕುಳಿತು ಒಂದೇ ತೀರ್ಮಾನವನ್ನು ಮಾಡಬೇಕು ಎನ್ನುವ ಲೆಕ್ಕದಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರ ಗಮನಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರವಾಗಿ, ನಿಮ್ಮ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೇ ಮಾಡುತ್ತೇನೆ.

ಕೆ.ಎಸ್​​​​.ಈಶ್ವರಪ್ಪ, ಮಾಜಿ ಸಚಿವ

ಹಾವೇರಿಯಲ್ಲಿ ಬಿಜೆಪಿಯ 2 ಬಣಗಳ ನಡುವೆ ನೂಕಾಟ-ತಳ್ಳಾಟ

ಇನ್ನು ಹಾವೇರಿಯಲ್ಲಿ ಬಿಜೆಪಿ ಬಣಗಳ ಕಿತ್ತಾಟ ಮುಂದುವರೆದಿದ್ದು ಜಿಲ್ಲಾ ಬಿಜೆಪಿ ಕಚೇರಿ ರಣರಂಗವಾಗಿದೆ. ಕಾಗಿನಲ್ಲೆ ಕ್ರಾಸ್​ನಲ್ಲಿರುವ ಕಚೇರಿಗೆ ಅಭ್ಯರ್ಥಿ ಬೊಮ್ಮಾಯಿ ಕಾಲಿಡುತ್ತಿದ್ದಂತೆ 2 ಬಣದ ಕಾರ್ಯಕರ್ತರು ನಾನಾ, ನೀನಾ ಅಂತ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಜಿಲ್ಲಾದ್ಯಕ್ಷ ಅರುಣಕುಮಾರ್ ಪೂಜಾರ್ ವಿರುದ್ಧ ರೊಚ್ಚಿಗೆದ್ದ ಒಂದು ತಂಡ ಪದಾಧಿಕಾರಿಗಳನ್ನು ಬದಲಿಸಲು ಬೇಡಿಕೆ ಇಟ್ಟಿದೆ. ಈ ವೇಳೆ ಪ್ರತಿಭಟನಾಕಾರರ ಮಾತನ್ನು ಕೇಳದ ಜಿಲ್ಲಾಧ್ಯಕ್ಷರಿಗೆ ಹಾಗೂ ಬೆಂಬಲಿಗರಿಗೆ ಧಿಕ್ಕಾರ ಕೂಗಿದಾಗ ಪರಸ್ಪರ ನೂಕಾಟ, ತಳ್ಳಾಟ‌ ನಡೆದಿದೆ. ಮೈಕ್ ಹಿಡಿದು ಸಮಾಧಾನಕ್ಕೆ ಮುಂದಾದ ಬೊಮ್ಮಾಯಿ ಮಾತಿಗೂ ಕಿವಿಗೊಡದಿದ್ದರಿಂದ ಕಾರ್ಯಕ್ರಮದಿಂದ ಬೊಮ್ಮಾಯಿ ಅರ್ಧಕ್ಕೆ ತೆರಳಿದ್ದಾರೆ.

ಇನ್ನು ಕಚೇರಿಯಲ್ಲಿ ಮಾತ್ರವಲ್ಲದೆ ಐಬಿಗೂ ಈ ಕಿತ್ತಾಟ ಶಿಫ್ಟ್​ ಆಗಿದೆ. ಅರುಣ್​ಕುಮಾರ್ ಬೆಂಬಲಿಗರು ಬಿಜೆಪಿ ಕಚೇರಿಯಲ್ಲಿ ಗದ್ದಲ ಮಾಡಿದ ಬಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಾಕತ್ ಇದ್ರೆ, ಬರ್ರೊ ಅಂತ ಅವಾಜ್ ಹಾಕಿದ್ದಾರೆ. ಈ ವೇಳೆ ರಾಣೇಬೆನ್ನೂರು ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರಿಂದ ಗಲಾಟೆ ಮತ್ತಷ್ಟು ತಾರಕಕ್ಕೇರಿದೆ. ಸದ್ಯ ಬಿಜೆಪಿಯಲ್ಲಿ ಬಣಗಳ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಕೊಪ್ಪಳ ಟಿಕೆಟ್ ಕೈ ತಪ್ಪಿದಕ್ಕೆ ಕಣ್ಣೀರಾಕಿದ ಸಂಗಣ್ಣ ಕರಡಿ

ಇನ್ನು ಕೊಪ್ಪಳ ಟಿಕೆಟ್ ಕೈತಪ್ಪಿದ ಹಿನ್ನೆಲೆ ವೇದಿಕೆಯಲ್ಲೇ ಸಂಸದ ಸಂಗಣ್ಣ ಕರಡಿ ಕಣ್ಣೀರಾಕಿದ್ದಾರೆ. ರಾಯಚೂರಿನ ಸಿಂಧನೂರಿನಲ್ಲಿ ನೂತನ ರೈಲು ಆರಂಭ ಕಾರ್ಯಕ್ರಮದಲ್ಲಿ ಭಾವುಕರಾಗಿದ್ದಾರೆ. ಸಿಂಧನೂರಿಗೆ ರೈಲು ಬಂದಿರುವುದು ಎಲ್ಲರಿಗೂ ಖುಷಿಯಾಗಿದೆ. ನಾನು ಕಾರ್ಯಕರ್ತರನ್ನ ನೋಡಿ ಭಾವುಕನಾಗಿದ್ದೇನೆ, ಅಧಿಕಾರ ಹೋಗುತ್ತೆ ಅಂತಲ್ಲ ಎಂದಿದ್ದಾರೆ.

ಇಂದು ಲೋಕಸಮರಕ್ಕೆ ಮುಹೂರ್ತ ಫಿಕ್ಸ್ ಆಗಲಿದೆ. ಹೀಗಾಗಿ ಎಲ್ಲರೂ ಒಟ್ಟಾಗಿ ಯುದ್ಧಕ್ಕೆ ಸಿದ್ಧತೆ ನಡೆಸಬೇಕಿದ್ದ ಕೇಸರಿ ಸೇನಾನಿಗಳ ಬಂಡಾಯ, ಬೇಸರದಿಂದ ವಿರೋಧಿಗಳಿಗೆ ಲಾಭ ಆದ್ರೂ ಅಚ್ಚರಿ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಯಲ್ಲಿ ಭಿನ್ನಮತದ ಬೆಂಕಿ; BSY ಪುತ್ರನ ವಿರುದ್ಧ ಈಶ್ವರಪ್ಪ ಅಖಾಡಕ್ಕೆ.. ಎರಡು ಬಣಗಳ ನಡುವೆ ಕಿತ್ತಾಟ

https://newsfirstlive.com/wp-content/uploads/2024/03/BSY_Eshwarappa.jpg

Load More