newsfirstkannada.com

‘ಪಾಕ್​- ಬಾಂಗ್ಲಾ ಬಿಟ್ಟುಕೊಟ್ಟ ನೆಹರು ವಂಶಸ್ಥರಿವರು’ -ಸಂಸದ DK ಸುರೇಶ್ ವಿರುದ್ಧ ರೇಣುಕಾಚಾರ್ಯ ಗರಂ

Share :

Published February 2, 2024 at 8:49am

    ಕಾಂಗ್ರೆಸ್​ ಸಂಸದರ ಹೇಳಿಕೆಗೆ ಬಿಜೆಪಿ ನಾಯಕರಿಂದ ಆಕ್ರೋಶ

    ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದಿದ್ದ DK ಸುರೇಶ್

    DK ಸುರೇಶ್ ವಿರುದ್ಧ ಸಿಡಿಮಿಡಿಗೊಂಡ ಎಂಪಿ ರೇಣುಕಾಚಾರ್ಯ

ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ವಿಧಾನಸೌಧ ಮುಂಭಾಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಕಾಂಗ್ರೆಸ್​ನವರು ಭಾರತ ಮಾತೆಗೆ ಅವಮಾನ ಮಾಡುತ್ತಿದ್ದಾರೆ. ವಂಶ ವೃಕ್ಷ ತೆಗೆದು ನೋಡಿದರೆ ಇವರು ಬ್ರಿಟಿಷ್ ತಳಿ ಇರಬಹುದು. ಈ ಹಿಂದೆ ನಮ್ಮ ದೇಶವನ್ನು ಆಳಿದ ಕಾಂಗ್ರೆಸ್​ನವರು ಇಂತವರನ್ನ ಬಿಟ್ಟು ಹೋಗಿದ್ದಾರೆ. ಭಾರತವನ್ನು ವಿಭಜನೆ ಮಾಡುವ ಶಕ್ತಿ ಯಾವುದೇ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಸಿಡಿಮಿಡಿಗೊಂಡರು.

ಈ ಹಿಂದೆ ಪಾಕ್​ ಮತ್ತು ಬಾಂಗ್ಲಾದೇಶದ ಬಿಟ್ಟು ಕೊಟ್ಟ ನೆಹರು ವಂಶಸ್ಥರು ಇವರು. ಡಿ.ಕೆ ಸುರೇಶ್ ದಕ್ಷಿಣ ಭಾರತ ಪ್ರತ್ಯೇಕ ಆಗಬೇಕು ಎಂದು ಹೇಳಿದ್ದನ್ನು ತೀವ್ರವಾಗಿ ಖಂಡಿಸುತ್ತೇನೆ. ಕಾಂಗ್ರೆಸ್​ನವರು ವಿಕೃತ ಮನಸ್ಸಿನವರು. ಸದಾ ಒಂದೆಲ್ಲ ಒಂದು ವಿವಾದದಲ್ಲಿ ಇರುತ್ತಾರೆ. ಇತ್ತೀಚೆಗೆ ಮಾಗಡಿ ಬಾಲಕೃಷ್ಣ ಅವರು ಗ್ಯಾರಂಟಿಗಳನ್ನ ನಿಲ್ಲಿಸುವ ಮಾತನಾಡಿದ್ದರು. ತಾಕತ್ತಿದ್ದರೆ ಗ್ಯಾರಂಟಿಗಳನ್ನು ನಿಲ್ಲಿಸಲಿ ಎಂದು ಕಾಂಗ್ರೆಸ್ ವಿರುದ್ಧ​ ಎಂಪಿ ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪಾಕ್​- ಬಾಂಗ್ಲಾ ಬಿಟ್ಟುಕೊಟ್ಟ ನೆಹರು ವಂಶಸ್ಥರಿವರು’ -ಸಂಸದ DK ಸುರೇಶ್ ವಿರುದ್ಧ ರೇಣುಕಾಚಾರ್ಯ ಗರಂ

https://newsfirstlive.com/wp-content/uploads/2024/02/MP_RENUKACHARYA.jpg

Load More