/newsfirstlive-kannada/media/post_attachments/wp-content/uploads/2024/12/Varthur-Prakash-Aide-1.jpg)
ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಅಂತ ಹೇಳಿಕೊಂಡು ಓಡಾಡ್ತಾ ಕೋಟಿ, ಕೋಟಿ ವಂಚಿಸಿರೋ ಈ ಲೇಡಿ ಪೊಲೀಸರ ಅತಿಥಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ ಈ ಲೇಡಿಯ ಇಂಟ್ರೆಸ್ಟಿಂಗ್ ಹಿಸ್ಟರಿ ಬಯಲಾಗಿದೆ. ಸಚಿವರ ಹೆಸರು ಮಾತ್ರವಲ್ಲದೇ ಸ್ಟಾರ್ ನಟ ನಟಿಯರ ಹೆಸರು ಬಳಸಿರೋದು ವಿಚಾರಣೆಯಲ್ಲಿ ಗೊತ್ತಾಗಿದೆ.
2.945 KG ಚಿನ್ನ ಖರೀದಿಸಿ ₹2.42 ಕೋಟಿ ಪಂಗನಾಮ
ವರ್ತೂರು ಪ್ರಕಾಶ್ ಆಪ್ತೆ ಅಂತ ಹೇಳಿಕೊಂಡು ವಂಚನೆ
ನಾನು ಶ್ವೇತಾಗೌಡ, ಸಮಾಜ ಸೇವಕಿ, ನಾನು ವರ್ತೂರ್ ಪ್ರಕಾಶ್ ಆಪ್ತೆ. ಸಮಾಜ ಸೇವಕಿ ಅಂತ ಹೇಳ್ಕೊಳ್ತಿದ್ದ ಬಾಗಲಗುಂಟೆ ನಿವಾಸಿ ಶ್ವೇತಾಗೆ ಆಸೆ ಇದ್ದಿದ್ದೆಲ್ಲಾ ಚಿನ್ನದ ಮೇಲಷ್ಟೇ. ವರ್ತೂರು ಪ್ರಕಾಶ್ ಆಪ್ತೆ ಅಂತ ಹೇಳಿಕ್ಕೊಂಡು ಕೆಲ ದಿನಗಳ ಹಿಂದೆಯಷ್ಟೇ ಅವೆನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್ ಮಳಿಗೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಸುಮಾರು 2.42 ಕೋಟಿ ರೂ ಮೌಲ್ಯದ ಆಭರಣವನ್ನು ಖರೀದಿಸಿದ್ದರು. ಹಣ ಕೇಳಿದ್ದಕ್ಕೆ ಚಿನ್ನದ ವ್ಯಾಪಾರಿಗೆ ಧಮ್ಕಿ ಹಾಕಿದ್ದರಂತೆ. ಬಳಿಕ ನಗರದ ಡಾಲರ್ಸ್ ಕಾಲೋನಿಯಲ್ಲಿರೋ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಮನೆ ಅಡ್ರೆಸ್ ಕೊಟ್ಟಿದ್ದರು.
ಚಿನ್ನದ ಬಿಲ್ ಹಣ ಸಿಗದಿದ್ದಾಗ ಅಂಗಡಿ ಮಾಲೀಕ ಸಂಜಯ್ ಭಾಷ್ನ, ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಎಸಿಪಿ ಗೀತಾ ಆರೋಪಿ ಹಿಂದೆ ಬೀಳ್ತಿದ್ದಂತೆ, ಟೆಂಟ್ ಎತ್ತಿದ ಶ್ವೇತಾಗೌಡ ಮೈಸೂರಿಗೆ ಎಸ್ಕೇಪ್ ಆಗಿದ್ದಾರೆ. ಆದ್ರೂ ಬೆನ್ನು ಬಿದ್ದ ಪೊಲೀಸರು, ಬಂಗಾರದ ಅಂಗಡಿಯವರಿಗೆ ಟೋಪಿ ಹಾಕಿದ್ದ ಶ್ವೇತಾ ಕೈಗೆ, ಸ್ಟೀಲ್ ಕೋಳ ತೊಡಿಸಿದ್ದಾರೆ. ಚಿನ್ನ, ಕಾರು ಸೇರಿದಂತೆ ಆಕೆಗೆ ಸಂಬಂಧಿಸಿದ ವಸ್ತುಗಳು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಇದು ವಿಶ್ವದ ಅತ್ಯಂತ ದುಬಾರಿ ಸೀರೆ; ಯಾವೆಲ್ಲಾ ಸೆಲೆಬ್ರೆಟಿಸ್ ಬಳಿ ಈ ಸಾರಿ ಇವೆ ಅಂತ ಗೊತ್ತಾ?
‘ಸ್ವರ್ಣ’ ವಂಚಕಿ ಶ್ವೇತಾ
ಆರೋಪಿ ಶ್ವೇತಾ ಈ ಹಿಂದೆಯೂ ಇದೇ ರೀತಿ ವ್ಯಾಪಾರಿಗಳಿಂದ ಸಗಟು ದರದಲ್ಲಿ ಆಭರಣ ಖರೀದಿಸಿ ಮೋಸ ಮಾಡಿ ಸಿಕ್ಕಿಬಿದ್ದಿದ್ದರು. ಆ ಪ್ರಕರಣದಲ್ಲಿ ಶ್ವೇತಾಗೌಡರನ್ನ ಯಲಹಂಕ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆದ್ರೆ, ಜಾಮಾನು ಪಡೆದು ಹೊರ ಬಂದ್ರೂ ತನ್ನ ಹಳೇ ಚಾಳಿ ಮುಂದುವರೆಸಿದ್ದಾರೆ. ಇಷ್ಟೇ ಅಲ್ಲ ರಾಜಕಾರಣಿ, ನಟ-ನಟಿಯರ ಜತೆ ಪೋಟೋ ಕ್ಲಿಕಿಸಿಕೊಳ್ಳುತ್ತಿದ್ದ ಫೋಟೋ ಬಳಸಿ ತನಗೆ ಗಣ್ಯರ ಸ್ನೇಹವಿದೆ ಅಂತ ಪರಿಚಿತರಲ್ಲಿ ಹೇಳಿಕೊಂಡಿದ್ದಾರೆ.
ಹೋದಲ್ಲಿ ಬಂದಲ್ಲಿ ನಾನು ವರ್ತೂರು ಪ್ರಕಾಶ್ ಆಪ್ತೆ ಅಂತ ಹೇಳಿಕೊಳ್ತಿದ್ದ ಶ್ವೇತ ಯಾರನ್ನೋದು ಅಸಲಿಗೆ ವರ್ತೂರ್ ಪ್ರಕಾಶ್ಗೆ ಗೊತ್ತೇ ಇಲ್ಲವಂತೆ. ಈ ಬಗ್ಗೆ ಖುದ್ದು ಮಾಜಿ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಆಕೆ ಯಾರಂತ ನನಗೆ ಗೊತ್ತಿಲ್ಲ ಅಂತ ಮಾಜಿ ಸಚಿವರೂ ಹೇಳಿದ್ರೂ, ಅವ್ರ ಹೆಸರು ಥಳಕು ಹಾಕಿಕೊಂಡಿರೋದ್ರಿಂದ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಆದ್ರೆ, ಶ್ವೇತಾ ಮಾತ್ರ ಅದಿನ್ನೂ ಯಾಱರಿಗೆ ಯಾಱರ ಹೆಸರು ಹೇಳಿ ವಂಚಿಸಿದ್ದಾರೋ ಅವ್ರವರೇ ಹೊರ ಬಂದು ಕಂಪ್ಲೆಂಟ್ ಕೊಟ್ರೆ ಎಲ್ಲಾ ಬಂಡವಾಳ ಬಯಲಾಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ