Advertisment

ಕಾಲುವೆಯಲ್ಲಿ ತೇಲಿಬಂತು ಮಾಜಿ ಉಪಸಭಾಪತಿ ಮೃತದೇಹ! 9 ದಿನಗಳ ಬಳಿಕ ಪತ್ತೆ

author-image
AS Harshith
Updated On
ಕಾಲುವೆಯಲ್ಲಿ ತೇಲಿಬಂತು ಮಾಜಿ ಉಪಸಭಾಪತಿ ಮೃತದೇಹ! 9 ದಿನಗಳ ಬಳಿಕ ಪತ್ತೆ

ಪ್ರಾತಿನಿಧಿಕ ಚಿತ್ರ

Advertisment
  • ಕಾಲುವೆಯಲ್ಲಿ ಸಿಕ್ತು ಮಾಜಿ ಉಪಸಭಾಪತಿ ಮೃತದೇಹ
  • ನಾಪತ್ತೆಯಾದ 9 ದಿನಗಳ ಬಳಿಕ ನೀರಿನಲ್ಲಿ ತೇಲಿಬಂದ ಮೃತದೇಹ
  • ಮಾಜಿ ಅರಣ್ಯ ಸಚಿವನ ಸಾವಿನ ಕುರಿತು ಪೊಲೀಸರಿಂದ ತನಿಖೆ

ಇತ್ತೀಚೆಗೆ ಸಿಕ್ಕಿಂನ ಮಾಜಿ ಸಚಿವ ರಾಮ ಚಂದ್ರ ಪೌಡ್ಯಾಲ್​​ ನಾಪತ್ತೆಯಾಗಿದ್ದರು. ಆದರೀಗ 9 ದಿನಗಳ ಬಳಿಕ ಅವರ ಮೃತದೇಹ ಪಶ್ಚಿಮ ಬಂಗಾಳದ ಸಿಲಿಗುರಿಯ ಬಳಿ ಇರುವ ಕಾಲುವೆಯಲ್ಲಿ ಪತ್ತೆಯಾಗಿದೆ.

Advertisment

80 ವರ್ಷದ ರಾಮ ಚಂದ್ರ ಪೌಡ್ಯಾಲ್ ಮೃತದೇಹವು ಸಿಲಿಗುರಿಯ ಫುಲ್ಬರಿ ತೀಸ್ತಾ ಕಾಲುವೆಯಲ್ಲಿ ತೇಲಿ ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ತೀಸ್ತಾ ನದಿಯ ಮೇಲ್ದಂಡೆಯಿಂದ ತೇಲಿ ಬಂದಿರಬಹುದು ಎಂದು ಅಂದಾಜಿಸಿದ್ದಾರೆ. ಅವರು ಕೈಗೆ ಕಟ್ಟಿದ್ದ ವಾಚ್​ ಮತ್ತು ಧರಿಸಿದ್ದ ಬಟ್ಟೆಯಿಂದ ಮೃತದೇಹ ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಯ್ಯೋ.. ಮಾಲೀಕನಿಗಾಗಿ ರೋಧಿಸುತ್ತಿದೆ ಮೂಕ ಶ್ವಾನ.. ಕಣ್ಣೀರು ತರಿಸುತ್ತೆ ಅಂಕೋಲಾ ಗುಡ್ಡ ಕುಸಿತ ಪ್ರಕರಣ

publive-image

ಜುಲೈ 7ರಂದು ಪಾಕ್ಯೋಂಗ್​ ಜಿಲ್ಲೆಯ ಚೋಟಾ ಸಿಂಗ್ಟಾಮ್​ನಿಂದ ಆರ್​ಸಿ ಪೌಡ್ಯಾಲ್ ನಾಪತ್ತೆಯಾಗಿದ್ದರು. ಈ ವಿಚಾರ ತಿಳಿದಂತೆ ವಿಶೇಷ ತಂಡ ರಚಿಸಿದ ಪೊಲೀಸರು ಹುಡುಕಲು ಶುರು ಮಾಡಿದರು. ಆದರೀಗ ಕಾಲುವೆಯಲ್ಲಿ ಮಾಜಿ ಸಚಿವನ ಮೃತದೇಹ ಸಿಕ್ಕಿದೆ. ಸದ್ಯ ಆರ್​ಸಿ ಪೌಡ್ಯಾಲ್ ಅವರ ನಾಪತ್ತೆ ಮತ್ತು ಸಾವಿನ ಕುರಿತು ತನಿಖೆ ನಡೆಯುತ್ತಿದೆ.

Advertisment

ಇದನ್ನೂ ಓದಿ: ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ 30kg! ಘಟಪ್ರಭಾ ನದಿಯಲ್ಲಿ ಬಲೆಗೆ ಬಿತ್ತು ಬೃಹತ್​ ಗಾತ್ರದ ಮೀನು!

ಆರ್​ಸಿ ಪೌಡ್ಯಾಲ್ ಮೊದಲ ಸಿಕ್ಕಿಂ ವಿಧಾನಸಭೆಯ ಉಪಸಭಾಪತಿಯಾಗಿದ್ದರು. ನಂತರ ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಆದರೀಗ ಅವರ ಸಾವಿನ ಕುರಿತು ಸಾಕಷ್ಟು ಚರ್ಚೆ ಹುಟ್ಟಿಕೊಂಡಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment