/newsfirstlive-kannada/media/post_attachments/wp-content/uploads/2025/04/meghna-alam-1.jpg)
ಬಾಂಗ್ಲಾದೇಶದ ಖ್ಯಾತ ಮಾಡೆಲ್ ಹಾಗೂ ನಟಿ ಮೇಘನಾ ಆಲಮ್ಳನ್ನ ಢಾಕಾ ಪೊಲೀಸರು ಬಂಧಿಸಿದ್ದಾರೆ. ಸ್ಪೆಷಲ್ ಪವರ್ಸ್ ಆ್ಯಕ್ಟರ್ ಪ್ರಕಾರ ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿದೇಶಿ ರಾಜತಾಂತ್ರಿಕರೊಬ್ಬರೊಂದಿಗೆ ಆಕೆ ಸಂಬಂಧ ಹೊಂದಿದ್ದಳು ಅನ್ನೋ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವಿದೇಶಿಗನ ಜೊತೆ ಸಂಬಂಧ ಇತ್ತು ಅಂತ ಪೋಸ್ಟ್!
ಬಾಂಗ್ಲಾದೇಶದಲ್ಲಿ ನಟಿ ಮೇಘನಾ ಆಲಮ್ಗೆ ಒಳ್ಳೆಯ ಹೆಸರಿದೆ. 2020ರಲ್ಲಿ ಮಿಸ್ ಅರ್ತ್ ಬಾಂಗ್ಲಾದೇಶ ಸ್ಪರ್ಧೆಯಲ್ಲಿ ವಿಜಯಿ ಕೂಡ ಆಗಿದ್ದಳು. ಮಿಸ್ ಬಾಂಗ್ಲಾದೇಶ ಫೌಂಡೇಷನ್ಗೆ ಆಕೆ ಚೇರ್ಮನ್ ಸಹ ಆಗಿದ್ದಾಳೆ. ಮೇಘನಾ ಅರೆಸ್ಟ್ ಇದೀಗ ಬಾಂಗ್ಲಾದೇಶದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಏಪ್ರಿಲ್ 9ನೇ ತಾರೀಖು ಮೇಘನಾಳನ್ನ ಪೊಲೀಸರು ಬಂಧಿಸಿದ್ದಾರೆ. ಸೌದಿ ಅರೇಬಿಯಾದ ರಾಜತಾಂತ್ರಿಕನೊಂದಿಗೆ ಮೇಘನಾಗೆ ಸಂಬಂಧವಿತ್ತು. ಮದುವೆ ಆಗಿದ್ದ ರಾಜತಾಂತ್ರಿಕನೊಂದಿಗೆ ಪ್ರೀತಿ ಸಲುಗೆ ಇದೆ ಅನ್ನೋದನ್ನ ಖುದ್ದು ಮೇಘನಾ ಫೇಸ್ಬುಕ್ ಪೋಸ್ಟ್ ಮೂಲಕ ಹೇಳಿಕೊಂಡಿದ್ದಳು. ಆದರೇ, ಆತನ ತನಗೆ ಮೋಸ ಮಾಡಲು ಪ್ರಯತ್ನಿಸಿದ್ದ ಎಂದು ಆರೋಪಿಸಿದ್ದಳು.
ಮೇಘನಾ ಅಪ್ಪ ಮಗಳ ಬಗ್ಗೆ ಹೇಳೋದೇನು?
ಅಧಿಕಾರ ದುರುಪಯೋಗ ಆಗುತ್ತಿದೆ ಅನ್ನೋ ಆರೋಪಗಳೂ ಕೇಳಿ ಬರುತ್ತಿವೆ. ರಾಜತಾಂತ್ರಿಕನೊಂದಿಗೆ ತನಗೆ ಪ್ರೇಮ ಇತ್ತು ಅನ್ನೋ ಪೋಸ್ಟ್ ಅನ್ನ ಮೇಘನಾ ಫೇಸ್ಬುಕ್ನಿಂದ ಡಿಲಿಟ್ ಮಾಡಿದ್ದಳು. ಮಗಳು ಮಾತುಗಳನ್ನು ಸಮರ್ಥಿಸುತ್ತಿರುವ ಮೇಘನಾ ಅಪ್ಪ ಬ್ರದುಲ್ ಅಲಮ್, ಸೌದಿ ಅಂಬಾಸಿಡರ್ ಜೊತೆ ತನ್ನ ಮಗಳ ರಿಲೇಷನ್ ಇತ್ತು ಅಂತ ಹೇಳಿಕೊಂಡಿದ್ದಾರೆ. ಆಕೆಯನ್ನು ಸೈಲೆಂಟ್ ಆಗಿ ಇರಿಸೋದಕ್ಕೆ ಸೌದಿ ರಾಜತಾಂತ್ರಿಕ ಕಾನೂನು ಬಳಸಿಕೊಂಡಿರಬಹುದು ಎನ್ನಲಾಗುತ್ತಿದೆ. ದೇಶಗಳ ನಡುವಿನ ಉತ್ತಮ ಸಂಬಂಧಗಳನ್ನು ಹಾಳು ಮಾಡುವ ಉದ್ಧೇಶದಿಂದ ಪ್ರಮುಖ ವ್ಯಕ್ತಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾಳೆ ಅನ್ನೋ ಕಾರಣಕ್ಕೆ ಮೇಘನಾಳನ್ನ ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ತಿಮ್ಮಪ್ಪಗೆ ಹರಕೆ ತೀರಿಸಿದ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ.. ಮಗನ ಹೆಸರಲ್ಲಿ ಭಾರೀ ಮೊತ್ತದ ಅನ್ನ ಪ್ರಸಾದ ಸೇವೆ!
ಪೋಸ್ಟ್ ಡಿಲಿಟ್.. 12 ನಿಮಿಷಗಳ ವಿಡಿಯೋ ಸಾಕ್ಷಿ
ಆರಂಭದಲ್ಲಿ ಮೇಘನಾಳನ್ನ ಕಿಡ್ನಾಪ್ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಮೇಘನಾಳನ್ನ ಆಕೆಯ ಮನೆಯಲ್ಲೇ ಪೊಲೀಸರು ಬಂಧಿಸಿರೋ 12 ನಿಮಿಷಗಳ ವಿಡಿಯೋ ಕೂಡ ಲೈವ್ ಆಗಿತ್ತು. ಹಾಗಾಗಿಯೇ ಪೊಲೀಸರು ಅಧಿಕೃತವಾಗಿ ಅರೆಸ್ಟ್ ಮಾಹಿತಿಯನ್ನು ನೀಡಿದ್ದಾರೆ. ಕಾನೂನಿನ ಪ್ರಕಾರವೇ ಮೇಘನಾಳನ್ನ ಬಂಧಿಸಲಾಗಿದೆ. ಆಕೆಯನ್ನ ಖಾಸಿಂಪುರ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ ಎಂದಿದ್ದಾರೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಇಂಥಾ ಸಾಕಷ್ಟು ಅರೆಸ್ಟ್ ಪ್ರಕರಣಗಳು ಬೇರೆಯದ್ದೇ ಸಂದೇಶ ನೀಡುತ್ತಿವೆ. 12ನೇ ವಯಸ್ಸಿನಿಂದ್ಲೂ ಹೋರಾಡುತ್ತಲೇ ಬಂದಿದ್ದ ಹುಡುಗಿ ಇದೀಗ ಜೈಲು ಸೇರಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ