/newsfirstlive-kannada/media/post_attachments/wp-content/uploads/2025/03/BASAVARAJ_DADESUGUR.jpg)
ಒಂದೇ ಒಂದು ಆಡಿಯೋ, ಆವತ್ತು ಬಿರುಗಾಳಿ ಎಬ್ಬಿಸಿತ್ತು. ಕನಕಗಿರಿ ಕುರ್ಚಿಯನ್ನೇ ಪಲ್ಲಟಿಸಿತ್ತು. ಕನಕಗಿರಿಯ ಜನ ಎಂಎಲ್ಎ ಲವ್ ಸ್ಟೋರಿಗೆ ಬಾಯಿ ಮೇಲೆ ಬೆರಳಿಟ್ಕೊಂಡ್ ಕೇಳಿಸ್ಕೊಂಡಿದ್ದರು. ಈಗ ಇದಕ್ಕೆ ಸೆಕೆಂಡ್ ಪಾರ್ಟ್ ಬಂದಿದೆ.
ಹೊಸ ವಿಷ್ಯ ಏನಪ್ಪ ಅಂದ್ರೆ ಆ ಲೇಡಿ ಆಫೀಸರ್ ಮತ್ತೆ ಮಾತಾಡಿದ್ದು, ಆವತ್ತಿನ ಈ ಲವ್ ಲಫಡಾ, ಮ್ಯಾರೇಜ್ ಆಗಿ ಕನ್ವರ್ಟ್ ಆಗಿದೆ ಅಂತೆ. ಅದು ಉಪ ಲೋಕಾಯುಕ್ತರ ಎದುರೇ ಲವ್ ಕಂ ಆರೆಂಜ್ ಮ್ಯಾರೇಜ್ ಸ್ಟೋರಿ ಸದ್ಯಕ್ಕೆ ರಿವೀಲ್ ಆಗಿದೆ.
ಪೊಲಿಟಿಷಿಯನ್, ಮಾಜಿ ಎಂಎಲ್ಎ ಅವನೇ ನನ್ನ ಗಂಡ!
2022ರ ಜನವರಿಯಲ್ಲಿ ಬೀದಿ ಬೀದಿಯಲ್ಲಿ ಹರಿದಾಡಿದ ಆಡಿಯೋ, ಮಾನ್ಯ ದಡೇಸೂಗೂರ್ರ ಮಾನ ಕಳೆದಿತ್ತು. ಇಲ್ಲೇ ವಿಧಾನಸೌಧದಲ್ಲಿ ಸಿಕ್ಕಿದ್ದ ಮಾಜಿ ಶಾಸಕರು, ನಾನಲ್ಲ ನಾನಲ್ಲ, ಆ ಧ್ವನಿ ನಂದಲ್ಲ ಅಂದಿದ್ರು. ಆವಾಗ ಸಿಕ್ಕ ಕೆಲ ಮಾಹಿತಿ ಅಂತೆ ಮಹಿಳಾ ಅಧಿಕಾರಿ ಜೊತೆ ನಿಶ್ಚಿತಾರ್ಥ ಆಗಿತ್ತು. ಈಗ ಇಬ್ರೂ ಮದುವೆ ಆಗಿದ್ದು, ಗುಟ್ಟಿನ ಸಂಸಾರ ಆರಂಭ ಆಗಿದೆ ಅನ್ನೋದಕ್ಕೆ ಈ ವಿಡಿಯೋ ಪುಷ್ಟಿ ನೀಡಿದೆ.
ಇದನ್ನೂ ಓದಿ:ಹೋಳಿ ಆಡ್ತಿದ್ದ ಮಹಿಳೆಗೆ ಕಾರಿನಿಂದ ಗುದ್ದಿ, ಜೀವ ತೆಗೆದ.. ಪಶ್ಚಾತಾಪ ಇಲ್ಲದೆ ಓಂ ನಮಃ ಶಿವಾಯ ಎಂದ ಆರೋಪಿ
ಉಪ ಲೋಕಾಯುಕ್ತ ವೀರಪ್ಪ ಮಾಡಿದ ಪ್ರಶ್ನೆ ಏನು?
ಬಸವರಾಜ ದಡೇಸೂಗೂರ್, ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಮಾಜಿ ಶಾಸಕ. ಆವತ್ತು ರಂಪ-ರಾದ್ಧಾಂತದ ಬಳಿಕ ಇಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆ ಅನ್ನೋದು ಪ್ರೂವ್ ಆಗಿದೆ. ಅವರು ನನ್ನ ಪತಿ ಅಂತ ವಿಜಯನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಶ್ವೇತಾ ಬಹಿರಂಗವಾಗಿ ಒಪ್ಕೊಂಡಿದ್ದಾರೆ. ಉಪ ಲೋಕಾಯುಕ್ತ ವೀರಪ್ಪ ಮಾಡಿದ ಪ್ರಶ್ನೆಗೆ ಕನಕಗಿರಿಯ ಮಾಜಿ ಶಾಸಕರು ಅಂತ ಉತ್ತರ ನೀಡಿದ್ದಾರೆ. ಆಗ್ಲೇ ಆಡಿಯೋ ಕೇಳಿದ್ರೀ, ಈಗ ವಿಡಿಯೋ ಕೂಡ ಬಂದಿದೆ ಅಂತೆ.
ಆವತ್ತು ಇದೇ ಡಿಡಿ ಶ್ವೇತಾ ಮತ್ತು ಮಾಜಿ ಶಾಸಕರ ಸಂಭಾಷಣೆ ಆಡಿಯೋ ಹಲ್‌ಚಲ್ ಎಬ್ಬಿಸಿತ್ತು. ಈಗ ಬಸವರಾಜ ದಡೇಸೂಗೂರ ನನ್ನ ಪತಿ ಅಂತ ಮಹಿಳಾ ಅಧಿಕಾರಿ, ಉಪಲೋಕಾಯುಕ್ತರ ಮುಂದೆ ಒಪ್ಕೊಂಡಿದ್ದಾರೆ. ಆದ್ರೆ, ಈ ಬಗ್ಗೆ ದಡೇಸೂಗೂರ್ ಮಾತ್ರ ಎಲ್ಲೂ ಬಾಯ್ಬಿಟ್ಟಿಲ್ಲ. ಗುಪ್ತವಾಗಿ 2ನೇ ಮದುವೆಯಾದ್ರಾ?, ಮದುವೆ ಆದ್ರೂ ಸಹ ವಿಷಯವನ್ನ ಮುಚ್ಚಿಟ್ಟಿದ್ದೇಕೆ ಅನ್ನೋ ಪ್ರಶ್ನೆ ಅಂತು ಕಾಡ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ