/newsfirstlive-kannada/media/post_attachments/wp-content/uploads/2024/06/Madhu-bangarappa.webp)
ಅಭಿಮಾನಿ ದೇವರುಗಳು ಎಂದ ಕನ್ನಡ ಚಿತ್ರರಂಗಕ್ಕೆ ದರ್ಶನ್ ಪ್ರಕರಣ ಕಪ್ಪು ಚುಕ್ಕೆ ತರಹ. ಇದೊಂದು ಹೀನ ಕೃತ್ಯ ಎಂದು ಶಿವಮೊಗ್ಗದಲ್ಲಿ ಮಾಜಿ ಶಾಸಕ ಕುಮಾರ ಬಂಗಾರಪ್ಪ ರಿಯ್ಯಾಕ್ಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗವನ್ನು ಉಳಿಸಿಕೊಂಡು ಹೋಗುವುದೇ ಕಷ್ಟಕರವಾದ ಪರಿಸ್ಥಿತಿಯಲ್ಲಿ ಇಂತಹ ಘಟನೆಗಳು ನಡೆಯಬಾರದು. ರಾಜಕುಮಾರ್ ನೋಡಿ ಕನ್ನಡ ಚಿತ್ರರಂಗ ,ದಕ್ಷಿಣ ಭಾರತದ ಚಿತ್ರರಂಗ ಬೆಳೆದಿದೆ. ಕನ್ನಡಕ್ಕಾಗಿ ಕಾವೇರಿಗಾಗಿ ನೆಲ,ಜಲ, ಭಾಷೆಗಾಗಿ ಅಭಿಮಾನಿಗಳನ್ನ ಹೋರಾಟಕ್ಕೆ ಇಳಿಸಿದ್ದ ಸಂದರ್ಭ ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬಳಿಕ, ಅಭಿಮಾನಿಗಳ ಮೇಲೆ ಈ ರೀತಿಯ ಅಕ್ರಮ ಮತ್ತು ಅಕ್ರಮಣಗಳನ್ನು ಮಾಡಬಾರದು. ಇದೊಂದು ಅಕ್ಷಮ್ಯ ಅಪರಾಧ.. ದರ್ಶನ್ ಈ ಪ್ರಕರಣದಲ್ಲಿ ಪೋಲಿಸ್ ಇಲಾಖೆ, ಚಿತ್ರರಂಗ, ಅದಕ್ಕೊಂದು ವ್ಯವಸ್ಥೆ ಇದೆ ಇದನ್ನೆಲ್ಲವನ್ನು ಬಳಕೆ ಮಾಡಬೇಕಿತ್ತು. ಚಿತ್ರರಂಗದವರು ಜನರಿಂದನೇ ಕೂಗಿಸಿಕೊಳ್ಳುವ ಕೆಳಮಟ್ಟಕ್ಕೆ ಹೋದರೆ ಹೇಗೆ? ಎಂದು ಮಾಜಿ ಶಾಸಕ ಕುಮಾರ ಬಂಗಾರಪ್ಪ ಪ್ರಶ್ನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us