newsfirstkannada.com

ರಮ್ಯಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌.. ಮಂಡ್ಯದಲ್ಲಿ ಶುರುವಾದ ರಾಜಕೀಯ ಅಲ್ಲೇ ಮುಗಿಯುತ್ತಾ?

Share :

Published February 22, 2024 at 12:22pm

    2013ರ ಉಪ-ಚುನಾವಣೆಗೂ ಮುನ್ನ ಮಂಡ್ಯದಲ್ಲಿ ಮನೆ ಮಾಡಿದ್ದ ರಮ್ಯಾ

    ರಾಜಕೀಯ ಗುರು ಎಸ್.ಎಂ.ಕೃಷ್ಣ ಅವರ ಗರಡಿಯಲ್ಲಿ ರಮ್ಯಾ ಪಾಲಿಟಿಕ್ಸ್ ಶುರು

    2014ರ ಚುನಾವಣೆಯಲ್ಲಿ 5,500 ಮತಗಳಿಂದ ಮಾಜಿ ಸಂಸದೆಗೆ ಸೋಲು

ಬೆಂಗಳೂರು: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಮಂಡ್ಯ ರಾಜಕೀಯದ ಅಖಾಡ ರಂಗೇರಿದೆ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿರುವಾಗ ಕಾಂಗ್ರೆಸ್​ ಅಭ್ಯರ್ಥಿ ಯಾರೆಂಬ ಕುತೂಹಲಕ್ಕೆ ಬಹುತೇಕ ಬ್ರೇಕ್ ಬಿದ್ದಿದೆ.

ಮಂಡ್ಯ ಲೋಕಸಭಾ ಚುನಾವಣೆಗೆ ಮಾಜಿ ಸಂಸದೆ, ಸ್ಯಾಂಡಲ್‌ವುಡ್‌ ನಟಿ ರಮ್ಯಾ ಅವರ ಹೆಸರು ಹರಿದಾಡುತ್ತಲೇ ಇತ್ತು. ಆದರೆ ಕಾಂಗ್ರೆಸ್ ನಾಯಕರು ಸ್ಟಾರ್ ಚಂದ್ರು ಅಲಿಯಾಸ್‌ ವೆಂಕಟರಮಣೇಗೌಡ ಅವರಿಗೆ ಟಿಕೆಟ್‌ ಬಹುತೇಕ ಫೈನಲ್ ಮಾಡುವ ಸಾಧ್ಯತೆ ಇದೆ. ಸ್ಟಾರ್ ಚಂದ್ರುಗೆ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ರಮ್ಯಾ ಬೇರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಅಥವಾ ಅವರ ರಾಜಕೀಯ ಕಥೆ ಏನು ಎಂಬ ಚರ್ಚೆ ಆಗುತ್ತಿದೆ.

ಕಾಂಗ್ರೆಸ್‌ ಟಿಕೆಟ್‌ಗಾಗಿ ಸ್ಟಾರ್ ವಾರ್!
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸ್ಟಾರ್ ಚಂದ್ರು ಅವರಿಗೆ ಒಲಿದು ಬರುವ ಸಾಧ್ಯತೆ ಬಹುತೇಕ ಫೈನಲ್ ಆಗಿದೆ. ಸ್ಟಾರ್ ಚಂದ್ರು ಅಲಿಯಾಸ್‌ ವೆಂಕಟರಮಣೇಗೌಡರು ಯಶಸ್ವಿ ಉದ್ಯಮಿ. ಇದರ ಜೊತೆಗೆ ಗೌರಿಬಿದನೂರು ಪಕ್ಷೇತರ ಶಾಸಕ ಪುಟ್ಟಸ್ವಾಮಿಯವರ ಸೋದರರು ಆಗಿದ್ದಾರೆ. ಅವರನ್ನೇ ಮಂಡ್ಯ ಅಭ್ಯರ್ಥಿಯಾಗಿಸಲು ಕಾಂಗ್ರೆಸ್​ನಲ್ಲಿ ಅಂತಿಮ ಚರ್ಚೆ ನಡೆದಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಅಮಿತ್ ಶಾ ಜೊತೆ HDK, ನಿಖಿಲ್‌ ಬ್ರೇಕ್ ಫಾಸ್ಟ್ ಮೀಟಿಂಗ್‌; ಚರ್ಚೆ ಆಗಿದ್ದೇನು?

ನಟಿ ರಮ್ಯಾ ಮಂಡ್ಯದಲ್ಲಿ ಹೆಚ್ಚು ಜನಪ್ರಿಯ ಹೊಂದಿದ್ದರು. ಜೊತೆಗೆ ಮಂಡ್ಯದ ಸಂಸದೆಯಾಗಿ ಅನುಭವವನ್ನೂ ಹೊಂದಿದ್ದಾರೆ. ಆದರೂ ಲೋಕಸಭೆಗೆ ಸ್ಟಾರ್ ಚಂದ್ರುಗೆ ಕಾಂಗ್ರೆಸ್ ಒಲವು ತೋರಿದೆ. ಇತ್ತೀಚೆಗೆ ರಮ್ಯಾ ಅವರು ಸಿನಿಮಾದಲ್ಲೂ ಹೆಚ್ಚು ಸಕ್ರಿಯವಾಗಿಲ್ಲ, ರಾಜಕೀಯದಲ್ಲೂ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ಮೂಲಗಳು ಮೋಹಕ ತಾರೆ ರಮ್ಯಾ ಸೈಡ್​ಲೈನ್ ಆಗಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನಲ್ಲಿ ‘ರಮ್ಯಾ’ಯಣ ಹೇಗಿತ್ತು?

ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ರಮ್ಯಾ
2012ರಲ್ಲಿ ಅಧಿಕೃತವಾಗಿ ಯೂತ್ ಕಾಂಗ್ರೆಸ್‌ಗೆ ರಮ್ಯಾ ಎಂಟ್ರಿ
ರಾಜಕೀಯ ಗುರು ಎಸ್.ಎಂ.ಕೃಷ್ಣ ಗರಡಿಯಲ್ಲಿ ಪಾಲಿಟಿಕ್ಸ್ ಶುರು
ತಮ್ಮ ವರ್ಚಸ್ಸಿನಿಂದ ಹೈಕಮಾಂಡ್ ನಾಯಕರ ಜೊತೆಗೆ ಸಂಪರ್ಕ
2013ರಲ್ಲಿ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ
ಮಂಡ್ಯ ಉಪಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ ರಮ್ಯಾ
2014ರಲ್ಲಿ ಮತ್ತೊಮ್ಮೆ ಮಂಡ್ಯದಿಂದಲೇ ಸ್ಪರ್ಧೆ ಮಾಡಿದ್ದ ರಮ್ಯಾ
2014ರ ಚುನಾವಣೆಯಲ್ಲಿ 5,500 ಮತಗಳಿಂದ ರಮ್ಯಾಗೆ ಸೋಲು
ಈ ಸೋಲಿನ ಬಳಿಕ ರಾಜಕಾರಣದಿಂದ ದೂರವಾಗಿದ್ದ ರಮ್ಯಾ
2013-18ರವರೆಗೂ ರಾಜ್ಯದಲ್ಲಿ ‘ಕೈ’ ಸರ್ಕಾರವಿದ್ರೂ ರಮ್ಯಾ ನಾಪತ್ತೆ

ಮಂಡ್ಯದಲ್ಲಿ ‘ರಮ್ಯಾ’ ಚೈತ್ರ ಕಾಲ

ಉಪಚುನಾವಣೆಯಲ್ಲಿ ಆಯ್ಕೆಯಾಗಿ ಕೇವಲ 6 ತಿಂಗಳು ಮಾತ್ರ ಸಂಸದೆ
2014ರ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಮಂಡ್ಯದಿಂದ ದೂರ
ಯಾರಿಗೂ ಹೇಳದೇ ಕೇಳದೆ ಮಂಡ್ಯದ ಮನೆಯನ್ನ ಖಾಲಿ ಮಾಡಿದ್ದ ರಮ್ಯಾ
2014ರ ಚುನಾವಣೆಯಲ್ಲಿ ಅಂಬರೀಶ್ ಅವರ ತಂಡ ಮತ್ತು ರಮ್ಯಾ ಮುನಿಸು
ಜಿ. ಮಾದೇಗೌಡ, ಆತ್ಮಾನಂದರನ್ನ ಕಡೆಗಣನೆ ಮಾಡಿ ಪೇಚಿಗೆ ಸಿಲುಕಿದ್ದ ರಮ್ಯಾ
2014ರ ‘ಲೋಕ’ ಚುನಾವಣೆಯಲ್ಲಿನ ಸೋಲಿನ ಬಳಿಕ ಅಜ್ಞಾತ ಸ್ಥಳಕ್ಕೆ ರಮ್ಯಾ
ತಮ್ಮ ರಾಜಕೀಯ ಗುರು ಎಸ್.ಎಂ. ಕೃಷ್ಣರಿಂದಲೂ ದೂರ ಉಳಿದಿದ್ದ ರಮ್ಯಾ
ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ರಮ್ಯಾ ನೇಮಿಸಿದ್ದ ಕಾಂಗ್ರೆಸ್‌ ‘ಹೈ’
ಅಲ್ಲಿಯೂ ಸಹ ಸರಿಯಾದ ಹೆಸರು ಮಾಡಲಾಗದೇ, ಕೈ ಚೆಲ್ಲಿ ಕುಳಿತಿದ್ದ ರಮ್ಯಾ
ಅತ್ತ ರಾಜಕೀಯದಲ್ಲೂ ಇರದೇ ಇತ್ತ ಸಿನಿಮಾವೂ ಮಾಡದೇ ರಮ್ಯಾ ಸೈಲೆಂಟ್
ತಮ್ಮದೇ ಸಾಲು ಸಾಲು ತಪ್ಪಿನಿಂದ ರಾಜಕೀಯ ಜೀವನದಿಂದ ರಮ್ಯಾ ದೂರ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಮ್ಯಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌.. ಮಂಡ್ಯದಲ್ಲಿ ಶುರುವಾದ ರಾಜಕೀಯ ಅಲ್ಲೇ ಮುಗಿಯುತ್ತಾ?

https://newsfirstlive.com/wp-content/uploads/2024/02/Ramya.jpg

Load More