newsfirstkannada.com

‘ಜೈ ಶ್ರೀರಾಮ್​’ ಎಂದ ಪಾಕ್​ ಮಾಜಿ ಕ್ರಿಕೆಟಿಗ.. ಅಯೋಧ್ಯೆಯ ವಿಡಿಯೋ ಹಂಚಿಕೊಂಡ ಅಪ್ಪಟ ರಾಮಭಕ್ತ

Share :

Published January 22, 2024 at 10:46am

Update January 22, 2024 at 10:50am

    ಇಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ

    ಪಾಕ್​ ಈ ಮಾಜಿ ಕ್ರಿಕೆಟಿಗ ಅಪ್ಪಟ ರಾಮಭಕ್ತ ಅಂದ್ರೆ ನಂಬ್ತೀರಾ

    ರಾಮ ಮಂದಿರದ ಬಗ್ಗೆ ಆಗಾಗ ಪೋಸ್ಟ್​ ಹಂಚುತ್ತಿದ್ದ ಪಾಕ್ ಮಾಜಿ ಕ್ರಿಕೆಟಿಗ

ವಿಶ್ವದೆಲ್ಲೆಡೆ ಜನರು ಇಂದು ಭಾರತದತ್ತ ಕಣ್ಣು ಹಾಯಿಸಿದ್ದಾರೆ. ಅಯೋಧ್ಯೆ ಶ್ರೀರಾಮ ಚಂದ್ರನ ಪ್ರಾಣಪ್ರತಿಷ್ಠೆಗಾಗಿ ಎದುರು ನೊಡುತ್ತಿದ್ದಾರೆ. ಅಷ್ಟೇ ಏಕೆ ವಿದೇಶಿಗರು ಕೂಡ ಶ್ರೀರಾಮನನ್ನು ಕೊಂಡಾಡುತ್ತಿದ್ದಾರೆ. ಅದಕ್ಕೆ ಬೆಸ್ಟ್​ ಉದಾಹರಣೆ ಎಂದರೆ ಪಾಕ್​ ಮಾಜಿ ಕ್ರಿಕೆಟಿಗರೊಬ್ಬರು ತಮ್ಮ ಬಾಯಾರೆ ‘ಜೈ ಶ್ರೀರಾಮ್​’ ಎಂಬ ಮೂಲಕ ತಾನು ರಾಮಭಕ್ತ ಎಂದು ಹೇಳಿಕೊಂಡೇ ಬಂದಿದ್ದಾರೆ.

ಡ್ಯಾನಿಶ್​​ ಕನೇರಿಯಾ. ಪಾಕ್​ ಮಾಜಿ ಹಿಂದೂ ಕ್ರಿಕೆಟಿಗ. ಇವರು ಸೋಮವಾರದಂದು ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯೆ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ವಿಡಿಯೋಗೆ ‘ಜೈ ಶ್ರೀರಾಮ್​​’ ಎಂದು ಬರೆದುಕೊಂಡಿದ್ದಾರೆ.

ಇವಿಷ್ಟು ಮಾತ್ರವಲ್ಲ, ಡ್ಯಾನಿಶ್​ ಅಯೋಧ್ಯೆ ಬಗ್ಗೆ ಅನೇಕ ಪೋಸ್ಟ್​ ಹಂಚಿಕೊಂಡೇ ಬಂದಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯದಿಂದ ಹಿಡಿದು, ರಾಮಲಲ್ಲಾ ಮೂರ್ತಿಯ ತನಕ ಪೋಸ್ಟ್​ ಹಂಚುತ್ತಾ ಬಂದಿದ್ದಾರೆ.

ಪಾಕ್​ ಮಾಜಿ ಆಟಗಾರ ಮಾತ್ರವಲ್ಲ, ಅನೇಕ ವಿದೇಶಿ ಕ್ರಿಕೆಟಿಗರು ಸಹ ಸಂದೇಶ ಕಳುಹಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್​ ಮಹಾರಾಜ್​ ಕೂಡ ಪೋಸ್ಟ್​ ಮಾಡಿದ್ದು, ಇಂದು ಜನವರಿ 22, 2024. ಮರ್ಯಾದಾ ಪುರುಷೋತ್ತಮ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಇತಿಹಾಸ ಸೃಷ್ಟಿಸಲಿದೆ ಎಂದು ಬರೆದುಕೊಂಡಿದ್ದಾರೆ.

ಇದಲ್ಲದೆ ಇಂದು ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕಣ್ತುಂಬಿಕೊಳ್ಳಲು ಅನೇಕ ಭಾರತೀಯ ಕ್ರಿಕೆಟಿಗರಿಗೆ ಆಹ್ವಾನ ನೀಡಲಾಗಿದೆ. ಇದರಲ್ಲಿ ಸಚಿನ್​ ತೆಂಡೂಲ್ಕರ್​, ವಿರಾಟ್ ಕೊಹ್ಲಿ, ಅನಿಲ್​​ ಕುಂಬ್ಳೆ ಅಯೋಧ್ಯೆಗೆ ಆಗಮಿಸಿದ್ದಾರೆ. ಹರ್ಭಜನ್ ಸಿಂಗ್ ಖಂಡಿತಾ ಅಯೋಧ್ಯೆಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಜೈ ಶ್ರೀರಾಮ್​’ ಎಂದ ಪಾಕ್​ ಮಾಜಿ ಕ್ರಿಕೆಟಿಗ.. ಅಯೋಧ್ಯೆಯ ವಿಡಿಯೋ ಹಂಚಿಕೊಂಡ ಅಪ್ಪಟ ರಾಮಭಕ್ತ

https://newsfirstlive.com/wp-content/uploads/2024/01/danish-Kaneria.jpg

Load More