Advertisment

‘ಇದಕ್ಕಿಂತ ಹೆಚ್ಚೇನು ಬೇಡಲಾರೆ‘; ಪ್ರಧಾನ ಮಂತ್ರಿಯಾಗಿ ತಮ್ಮ ಕೊನೆಯ ಭಾಷಣದಲ್ಲಿ ಏನು ಹೇಳಿದ್ದರು ಸಿಂಗ್?

author-image
Gopal Kulkarni
Updated On
‘ಇದಕ್ಕಿಂತ ಹೆಚ್ಚೇನು ಬೇಡಲಾರೆ‘; ಪ್ರಧಾನ ಮಂತ್ರಿಯಾಗಿ ತಮ್ಮ ಕೊನೆಯ ಭಾಷಣದಲ್ಲಿ ಏನು ಹೇಳಿದ್ದರು ಸಿಂಗ್?
Advertisment
  • ಪ್ರಧಾನಿಯಾಗಿ ತಮ್ಮ ಕೊನೆಯ ಭಾಷಣ ಮಾಡಿದ್ದ ಸಿಂಗ್ ಹೇಳಿದ್ದೇನು?
  • ಭಾರತದ ಆರ್ಥಿಕತೆ ಬಗ್ಗೆ ಏನು ಕನಸು ಕಂಡಿದ್ದರು ಮಾಜಿ ಪ್ರಧಾನಿ?
  • ಮನಮೋಹನ್ ಸಿಂಗ್ ಆಡಿದ ಮಾತುಗಳು ಇಂದು ನಿಜವಾಗುತ್ತಿವೆಯಾ?

2014ರ ಸಮಯ, ಯುಪಿಎ ಹೀನಾಯವಾಗಿ ಸೋತು, ಎನ್​ಡಿಎ ಬಹುಮತದಿಂದ ಗೆದ್ದು ಸರ್ಕಾರ ರಚನೆಗೆ ಸಜ್ಜಾಗಿತ್ತು. ಅಂದು ಪ್ರಧಾನಿಯಾಗಿ ತಮ್ಮ ಕಟ್ಟ ಕಡೆಯ ಭಾಷಣ ಮಾಡಿದ್ದರು ದಿವಂಗತ ಮನಮೋಹನ್ ಸಿಂಗ್. ನಿಮ್ಮ ಪ್ರೀತಿ ವಿಶ್ವಾಸ ನನ್ನ ಹೃದಯದಲ್ಲಿ ಹಚ್ಚ ಹಸುರಾಗಿ ಇರುತ್ತದೆ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಭಾರತಕ್ಕೆ ಆರ್ಥಿಕ ವ್ಯವಸ್ಥೆಯಲ್ಲಿ ಯಾವ ಬಗೆಯ ಭವಿಷ್ಯವಿದೆ ಎಂಬುದರ ಬಗ್ಗೆಯೂ ಕೂಡ ಮನಮೋಹನ್ ಸಿಂಗ್ ಹೇಳಿದ್ದರು.

Advertisment

ಪ್ರಧಾನ ಮಂತ್ರಿ ಹುದ್ದೆಯನ್ನು ತೊರೆಯುವ ಸಮಯದಲ್ಲಿಯೂ ನಿಮ್ಮ ಪ್ರೀತಿ ವಿಶ್ವಾಸ ಸದಾ ನನ್ನ ಮನಸ್ಸಿನಲ್ಲಿ ಇರುತ್ತದೆ. ನನಗೆ ಏನೇ ಸಿಕ್ಕಿದ್ದರು ಈ ದೇಶದಿಂದ ಸಿಕ್ಕಿದೆ, ಅದು ಎಂತಹ ದೇಶ, ವಿಭಜನೆಗೊಂಡು ಎರಡು ಭಾಗವಾದ ದೇಶದಲ್ಲಿ ಕಡು ಬಡತನದಲ್ಲಿ ಬೆಳೆದಿದ್ದ ಒಂದು ಮಗುವನ್ನು ಇಷ್ಟು ದೊಡ್ಡ ಸ್ಥಾನದಲ್ಲಿ ತಂದು ಕೂರಿಸಿದಂತ ದೇಶ. ಈ ಒಂದು ಋಣವನ್ನು ನಾನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ಮನಮೋಹನ್ ಸಿಂಗ್ ಹೇಳಿದ್ದರು.

ಇದನ್ನೂ ಓದಿ:ಒಬಾಮಗೆ ಆಪ್ತ ಮಿತ್ರ ಆಗಿದ್ದ ಸಿಂಗ್.. ಇವರಿಬ್ಬರ ಸ್ನೇಹ ತುಂಬಾನೇ ವಿಶೇಷ..

ಈ ದೇಶದ ಮೇಲೆ ಹೆಮ್ಮೆಯೊಂದು ಸದಾ ನನ್ನ ಮನಸ್ಸಿನಲ್ಲಿ ಇರುತ್ತದೆ. ನನಗೆ ಭಾತದ ಮುಂದಿನ ಭವಿಷ್ಯದ ಬಗ್ಗೆ ದೊಡ್ಡ ನಂಬಿಕೆಯಿದೆ. ನನಗೆ ಸಂಪೂರ್ಣ ವಿಶ್ವಾಸದವಿದೆ. ಭಾರತ ಬದಲಾಗುತ್ತಿರುವ ವಿಶ್ವದ ಅರ್ಥವ್ಯವಸ್ಥೆಯಲ್ಲಿ ಒಂದು ಮಹತ್ವಪೂರ್ಣ ಶಕ್ತಿಯ ರೂಪಾವಾಗಿ ಹೊರಹೊಮ್ಮುವುದು. ಪರಂಪರೆಯನ್ನು ಆಧುನಿಕತೆಯ ಜೊತೆಗೆ ಹಾಗೂ ವಿವಿಧತೆಯನ್ನು ಏಕತೆಯ ಜೊತೆಗೆ ಬೆರೆತುಕೊಂಡು ನಮ್ಮ ದೇಶ ಜಗತ್ತಿಗೆ ಮುಂದಿನ ದಾರಿ ತೋರಿಸಬಲ್ಲದು. ಈ ಮಹಾನ್ ದೇಶದ ಸೇವೆಯನ್ನು ಮಾಡಲು ಅವಕಾಶ ಸಿಕ್ಕಿರುವುದು ನಿಜಕ್ಕೂ ನನ್ನ ಸೌಭಾಗ್ಯ. ನಾನು ಇದಕ್ಕಿಂತ ಹೆಚ್ಚಿಗೆ ಏನೂ ಬೇಡಲಾರೆ ಎಂದಿದ್ದರು.

Advertisment

ಇದನ್ನೂ ಓದಿ:ಅಣು ಒಪ್ಪಂದ ವಿಚಾರದಲ್ಲಿ ಅಮೆರಿಕಗೆ ಬೆವರಿಳಿಸಿದ್ದ ಸಿಂಗ್.. ಪ್ರಧಾನಿ ಹುದ್ದೆಯನ್ನೇ ಬಿಡಲು ಮುಂದಾಗಿದ್ದ ನಾಯಕ..!

ಮುಂದೆ ಅಧಿಕಾರಕ್ಕೆ ಬರಲಿರುವ ಸರ್ಕಾರ ತಮ್ಮ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಕಾಣಲಿ ಎಂದು ಶುಭಕಾಮನೆಗಳನ್ನು ಕೋರುತ್ತೇನೆ. ನಾನು ನನ್ನ ದೇಶಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಧನ್ಯವಾದಗಳ, ಜೈಹಿಂದ್​ ಎಂದು ಮನಮೋಹನ್ ಸಿಂಗ್​ ಪ್ರಧಾನಿಯಾಗಿ ತಮ್ಮ ಕೊನೆಯ ಭಾಷಣದಲ್ಲಿ ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment