newsfirstkannada.com

ದೇವೇಗೌಡರಿಗೆ ಉಸಿರಾಟದ ಸಮಸ್ಯೆ; ಮಣಿಪಾಲ್ ಆಸ್ಪತ್ರೆ ವೈದ್ಯರು ಹೇಳಿದ್ದೇನು..?

Share :

Published February 16, 2024 at 6:49am

    ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರಿಗೆ ಅನಾರೋಗ್ಯ!

    ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೆಚ್​​ಡಿಡಿ ದಾಖಲು

    ರೆಗ್ಯುಲರ್ ಚೆಕಪ್​​ಗೆ ಆಸ್ಪತ್ರೆಗೆ ಬಂದಿದ್ದೀನಿ ಎಂದ ಗೌಡರು

ಮಾಜಿ ಪ್ರಧಾನಿ ದೇವೇಗೌಡರು ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.. ಸಂಸತ್ ಅಧಿವೇಶನಕ್ಕೆ ಹೋಗಿ ಬಂದ ಬಳಿಕ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿರೋ ಗೌಡರಿಗೆ ಮಣಿಪಾಲ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಗೌಡರ ಆರೋಗ್ಯ ಸ್ಥಿರವಾಗಿದೆ ಅಂತ ಅಭಯ ನೀಡಿದ್ದಾರೆ.

ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರಿಗೆ ಅನಾರೋಗ್ಯ
ಮಾಜಿ ಪ್ರಧಾನಿ ಹೆಚ್​​.ಡಿ.ದೇವೇಗೌಡರು ಅನಾರೋಗ್ಯದ ಕಾರಣ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ್ವರ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದು ಹಿರಿಯ ವೈದ್ಯ ಡಾ. ಸತ್ಯನಾರಾಯಣ ಮೈಸೂರು ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿಗೆ ಪ್ರಯಾಣಿಸಿದ ಬಳಿಕ ವಿಪರೀತ ಚಳಿಯ ಕಾರಣ ದೇವೇಗೌಡರ ಆರೋಗ್ಯದಲ್ಲಿ ಏರುಪೇರಾಗಿದ್ದು ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದಿದ್ದರು. ಕಳೆದ 3 ದಿನಗಳಿಂದ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಗೌಡರಿಗೆ ಅತಿಯಾದ ಕೆಮ್ಮಿನಿಂದ ಶ್ವಾಸಕೋಶದಲ್ಲಿ ಇನ್ಫೆಂಕ್ಷನ್ ಆಗಿದ್ದು ಉಸಿರಾಟದ ಸಮಸ್ಯೆ ಇರುವ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಗೌಡರ ಆರೋಗ್ಯ ಸ್ಥಿರವಾಗಿರೋದಾಗಿ ಮಣಿಪಾಲ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಉಸಿರಾಟದ ತೊಂದರೆಯಿಂದ ನಿನ್ನೆ ಬೆಳಗ್ಗೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಎಲ್ಲಾ ರೀತಿಯ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಅಲ್ಲದೇ ದೇವೇಗೌಡರ ಆರೋಗ್ಯದ ಇನ್ವೆಸ್ಟಿಗೇಷನ್ ಕೂಡ ನಡೆಯುತ್ತಿದೆ. ಅವರ ಹೆಲ್ತ್​ ಸ್ಟೇಬಲ್ ಆಗೋದಕ್ಕೆ ಮೆಡಿಕಲ್ ತಂಡವನ್ನು ರಚಿಸಿದ್ದೇವೆ ಎಂದು ಮಣಿಪಾಲ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಸತ್ಯನಾರಾಯಣ ಮಾಹಿತಿ ನೀಡಿದ್ದಾರೆ.

ವಾಡಿಕೆಯ ತಪಾಸಣೆಗೆ ಆಸ್ಪತ್ರೆಗೆ ಆಗಮಿಸಿದ್ದೇನೆ ಅಂತ ಸ್ವತಃ ದೇವೇಗೌಡರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ನನ್ನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಉತ್ಪ್ರೇಕ್ಷಿತ ವರದಿಗಳು ಕಾಣಿಸಿಕೊಳ್ತಿವೆ.. ಆದ್ರೆ ನನ್ನ ಆರೋಗ್ಯದ ಬಗ್ಗೆ ಯಾವುದೇ ಆತಂಕದ ಅಗತ್ಯವಿಲ್ಲ.. ಶೀಘ್ರದಲ್ಲೇ ಚೇತರಿಸಿಕೊಂಡು ಮನೆಗೆ ಹಿಂತಿರುಗುತ್ತೇನೆ ಅಂತ ಧೈರ್ಯದ ಮಾತುಗಳನ್ನಾಡಿದ್ದಾರೆ.

ಗೌಡರ ಆರೋಗ್ಯದ ಬಗ್ಗೆ ಭಯಪಡಬೇಕಿಲ್ಲ ಎಂದ ಹೆಚ್​​ಡಿಕೆ
ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ತಂದೆಯವರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಹೆಚ್​​ಡಿಕೆ, ಗೌಡರ ಅಭಿಮಾನಿಗಳು ಭಯ ಪಡಬೇಕಿಲ್ಲ. ಗಟ್ಟಿ ಜೀವಕ್ಕೆ ದೇವರ ಆಶೀರ್ವಾದವಿದೆ ಎಂದಿದ್ದಾರೆ. ಹೆಚ್​​ಡಿಕೆ ಜೊತೆ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡ ಸೇರಿ ಹಲವರು ಆಸ್ಪತ್ರೆಗೆ ಭೇಟಿ ಗೌಡರ ಆರೋಗ್ಯ ವಿಚಾರಿಸಿದ್ದಾರೆ.. ತಾತನ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ ಅಂತ ನಿಖಿಲ್ ಹೇಳಿದ್ದಾರೆ.

ಗೌಡರ ಆರೋಗ್ಯ ಚೇತರಿಕೆಗೆ ಸಂಸದೆ ಸುಮಲತಾ ಪ್ರಾರ್ಥನೆ!
ಮಾಜಿ ಪ್ರಧಾನಿ ದೇವೇಗೌಡರು ಶೀಘ್ರ ಗುಣಮುಖವಾಗಲಿ ಅಂತ ಮಂಡ್ಯ ಸಂಸದೆ ಸುಮಲತಾ ಪ್ರಾರ್ಥಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುಮಲತಾ ಮಾಜಿ ಪ್ರಧಾನಿ ದೇವೇಗೌಡರು ಹಿರಿಯರು ಅತಿ‌ ಶೀಘ್ರವಾಗಿ ಗುಣಮುಖರಾಗಲಿ. ದೇವರು ಅವರಿಗೆ ಮತ್ತಷ್ಟು ಆಯುಷ್ಯ, ಆರೋಗ್ಯ ದಯಪಾಲಿಸಲಿ. ಜನರ ಸೇವೆ ಮಾಡುವ ಶಕ್ತಿ ನೀಡಲಿ ಅಂತ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಒಟ್ಟಾರೆ ದೇವೇಗೌಡರು ಗಟ್ಟಿಜೀವ.. ಇಳಿ ವಯಸ್ಸಲ್ಲೂ ನಿಗದಿತ ವ್ಯಾಯಾಮ, ನಿಯಮಿತ ಆಹಾರ ಪದ್ಧತಿಯನ್ನು ರೂಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.. ವೆದರ್ ಇನ್ಫೆಕ್ಷನ್​ನಿಂದ ಸ್ವಲ್ಪ ಶೀತ, ಜ್ವರದಿಂದ ಬಳಲುತ್ತಿದ್ದು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆ.. ಆದ್ರೆ.. 60 ವರ್ಷಗಳಿಂದ ರಾಜಕೀಯ ಜೀವನದಲ್ಲಿರುವ ಗೌಡರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿರುವುದು ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದ್ರೂ ಯಾವುದೇ ಭಯಪಡಬೇಕಿಲ್ಲ ಅಂತ ವೈದ್ಯರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವೇಗೌಡರಿಗೆ ಉಸಿರಾಟದ ಸಮಸ್ಯೆ; ಮಣಿಪಾಲ್ ಆಸ್ಪತ್ರೆ ವೈದ್ಯರು ಹೇಳಿದ್ದೇನು..?

https://newsfirstlive.com/wp-content/uploads/2024/02/HD-DEVEGOWDA-2.jpg

Load More