/newsfirstlive-kannada/media/post_attachments/wp-content/uploads/2024/07/Modi-Devegowda.jpg)
ಚನ್ನಪಟ್ಟಣದ ಉಪಚುನಾವಣಾ ಕಾವು ಜೋರಾಗಿದೆ. ಅಖಾಡದಲ್ಲಿ ಘಟಾನುಘಟಿಗಳ ಪ್ರಚಾರ ಜೋರಾಗಿದೆ. ಒಕ್ಕಲಿಗರ ಬಾಹುಳ್ಯ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಮತ ಸೆಳೆಯಲು ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ ಅವರು ಕೂಡ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಶತಾಯಗತಾಯ ಮೊಮ್ಮಗನನ್ನು ಗೆಲ್ಲಿಸಿಕೊಂಡೇ ಬರಬೇಕು ಎಂದು ಪ್ರತಿಜ್ಞೆ ಮಾಡಿದವರ ರೀತಿಯಲ್ಲಿ 92ನೇ ವಯಸ್ಸಿನಲ್ಲಿಯೂ ದೇವೇಗೌಡರು ಪ್ರಚಾರದ ಕಣದಲ್ಲಿ ಓಡಾಡುತ್ತಿದ್ದಾರೆ.ಕ್ಷೇತ್ರದ ಉಪ ಚುನಾವಣೆಯ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಸತತ ಮೂರನೇ ದಿನವೂ ಪ್ರಚಾರ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಡಿಕೆಶಿ ಸಹೋದರರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
/newsfirstlive-kannada/media/post_attachments/wp-content/uploads/2024/11/Hd-Devegowda-on-nikhil-kumaraswamy-2-1.jpg)
ಪ್ರಚಾರದ ಕಣದಲ್ಲಿ ದೇವೇಗೌಡರ ಭೀಷ್ಮ ಪ್ರತಿಜ್ಞೆ
ಇದೇ ಸಮಯದಲ್ಲಿ ಮೇಕೆದಾಟು ವಿಚಾರ ಪ್ರಸ್ತಾಪಿಸಿದ ಮಾಜಿ ಪ್ರಧಾನಿ ದೇವೇಗೌಡರು ಮೇಕೆದಾಟು ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾತ್ರ ಪೂರ್ಣಗೊಳಿಸಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ದೇವೇಗೌಡರು. ತಮಿಳರು ನಮ್ಮ ಕುತ್ತಿಗೆಯನ್ನು ಹಿಡಿದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು ಅದರ ಜೊತೆಗೆ ನರೇಂದ್ರ ಮೋದಿಯವರ ಕೈಯಿಂದ ಮೇಕೆದಾಟು ಯೋಜನೆ ಪೂರ್ಣಗೊಳಿಸಿಯೇ ನಾನು ಕೊನೆಯುಸಿರೆಳೆಯುತ್ತೇನೆ ಎಂದು ಇದೇ ವೇದಿಕೆಯಲ್ಲಿ ಶಪಥ ಮಾಡಿದ್ದಾರೆ. ಮುಂದುವರಿದು ಮಾತನಾಡಿದ ಅವರು ಕನಕಪುರವನ್ನು ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಜನರ ರಕ್ತ ಹಿರಲಾಗುತ್ತಿದೆ ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕನಕಪುರಕ್ಕೆ ಹೋಗಿ ನೋಡಿಕೊಂಡು ಬನ್ನಿ. ಬೇರೆಯವರ ಜಮೀನನ್ನು ಹೇಗೆ ಲೂಟಿ ಮಾಡಿದ್ದಾರೆ ಅಂತ ನೋಡಿಕೊಂಡು ಬನ್ನಿ ಎಂದು ಆರೋಪ ಮಾಡಿದ ಮಾಜಿ ಪ್ರಧಾನಿಗಳು, ನಾನು ಇನ್ನೊಂದು ಚುನಾವಣೆಗೆ ರಾಮಪುರಕ್ಕೆ ಬರುತ್ತೇನೆ. ಅವರು ನಿಮ್ಮ ರಕ್ತ ಹೀರುತ್ತಿದ್ದಾರೆ. ಇಂತಹ ಸರ್ಕಾರವನ್ನು ಕಿತ್ತು ಒಗೆಯಬೇಕು ಎಂದು ದೇವೆಗೌಡರು ಗುಡುಗಿದರು.ನಾನು ಸಾಮಾನ್ಯ ರೈತನ ಮಗ. ರೈತರ ಕಷ್ಟ ನನಗೆ ಗೊತ್ತು.ನಾನು ನನ್ನ ಮೊಮ್ಮಗನ ಗೆಲ್ಲಿಸಲು ಬಂದಿದ್ದೇನೆ ಎನ್ನುತ್ತಾರೆ ಕಾಂಗ್ರೆಸ್ ನವರು. ನಾನು ನಿಮ್ಮ ಆಶೀರ್ವಾದದ ಬಲದಿಂದ ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ. ಹೋರಾಟ ಮಾಡ್ತೇನೆ. ಈ ಸರ್ಕಾರ ಲೂಟಿ ಮಾಡುತ್ತಿದೆ. ಇಂತಹ ಸರ್ಕಾರವನ್ನು ತೆಗೆಯುವ ತನಕ ರಾಜ್ಯಕ್ಕೆ ನೆಮ್ಮದಿ ಇಲ್ಲ. ಬಡವರು ಬದುಕಲ್ಲ, ರೈತರಿಗೆ ನೆಮ್ಮದಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:CM ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ.. ತೆರೆದ ಪುಸ್ತಕದಲ್ಲಿ ಬರೀ ಕಪ್ಪು ಚುಕ್ಕೆ ಎಂದ R ಅಶೋಕ್
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಾಜಿ ಪ್ರಧಾನಿ
ನಾನು ಚನ್ನಪಟ್ಟಣ ಕ್ಷೇತ್ರಕ್ಕೆ ಏನು ಮಾಡಿದೆ ಅಂತ ಹೇಳಲ್ಲ. ಆದರೆ ಕೆಲಸದ ಪಟ್ಟಿ ಮಾಡಿ. ನಿಖಿಲ್ ಕುಮಾರಸ್ವಾಮಿ ಪರವಾಗಿ ಕೈಚಾಚಲು ಬಂದಿದ್ದೇನೆ. ಹೈನುಗಾರಿಕೆಗೆ ಈ ಕ್ಷೇತ್ರದಲ್ಲಿ ಶಕ್ತಿ ಕೊಟ್ಟವರು ದೇವೇಗೌಡರು. ನಾನು ಅಮುಲ್ ಸಂಸ್ಥೆ ಕಾರ್ಯಕ್ರಮದಲ್ಲಿ, ಕುರಿಯನ್ ಅವರಿಗೆ ಒಂದು ಮಿಲ್ಕ್ ಫೆಡರೇಷನ್ ರಾಜ್ಯದಲ್ಲಿ ಸ್ಥಾಪನೆ ಮಾಡಿ ಅಂತ ಕೇಳಿದೆ. ಆದರೆ ಅವರು ಆಗಲ್ಲ ಎಂದರು. ದೇಶಕ್ಕೊಂದೇ ತಾಜ್ ಮಹಲ್ ಇದೆ. ಹಾಗೆಯೇ ಒಂದು ಸಂಸ್ಥೆ ಮಾತ್ರ ಕಟ್ಟಲು ಸಾಧ್ಯ ಎಂದಿದ್ದರು. ಆದರೆ ಸವಾಲಾಗಿ ರಾಜ್ಯದಲ್ಲಿ ಮಿಲ್ಕ್ ಫೆಡರೇಶನ್ ಆಗಿದೆ. ಇದರ ಹಿಂದೆ ನನ್ನ ಪರಿಶ್ರಮ ಎಷ್ಟಿದೆ ಎಂದು ಹೇಳೋದಿಲ್ಲ ಎಂದರು ಅವರು.
ಇದನ್ನೂ ಓದಿ:ಚನ್ನಪಟ್ಟಣದಲ್ಲಿ ಯಾರ್ ಗೆಲ್ತಾರೆ? ಡಿ.ಕೆ ಬ್ರದರ್ಸ್ ಮೇಲೆ ಗುಡುಗಿದ H.D ದೇವೇಗೌಡರು; ಹೇಳಿದ್ದೇನು?
ನಾನು ಇಗ್ಗಲೂರು ಡ್ಯಾಮ್ ನಾನು ಕಟ್ಟಿದೆ. ಆದರೆ ಅವರಾರೋ ಭಗಿರಥ, ನಾನು ನೀರು ತಂದೆ ಎನ್ನುತ್ತಾರೆ. ಇದು ಈ ರೈತನ ಮಗನ ಕೆಲಸ. ನಿಮ್ಮ ಮಣ್ಣಿನ ಮಗ ಮಾಡಿದ ಕೆಲಸ. ನಾನು ಇಂದು ಮುಖ್ಯಮಂತ್ರಿ, ನಾಳೆಯೂ ಮುಖ್ಯಮಂತ್ರಿ ಎಂದು ಅವರು ಹೇಳಿದ್ದಾರೆ. ಅಯ್ಯೋ ರಾಮ.. ಅಂತ ವ್ಯಂಗ್ಯವಾಗಿ ನಕ್ಕರು ದೇವೇಗೌಡರು.
ಈ ಹಿಂದೆ ಇದೇ ಮೇಕೆದಾಟು ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಈ ಹಿಂದೆ ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷಣೆಯಡಿ ಪಾದಯಾತ್ರೆ ನಡೆಸಿ ಜನರ ಗಮನ ಸೆಳೆದಿದ್ದರು. ಈಗ ದೇವೇಗೌಡರು ಕೂಡ ಮೇಕೇದಾಟು ಯೋಜನೆ ಪ್ರಸ್ತಾಪಿಸಿ ಡಿ.ಕೆ.ಶಿವಕುಮಾರ್​ಗೆ ಚೆಕ್​ಮೇಟ್ ಇಟ್ಟಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us