newsfirstkannada.com

ಕನ್ನಡಿ ಮುಂದೆ ನಿಂತ ಸಾನಿಯಾ ಮಿರ್ಜಾ! ವಿಚ್ಛೇದನದ ಬಳಿಕ ಮೊದಲ ಪೋಸ್ಟ್ ಹಂಚಿಕೊಂಡ ಮಾಜಿ ಟೆನ್ನಿಸ್​ ತಾರೆ

Share :

Published January 26, 2024 at 12:41pm

Update January 26, 2024 at 12:42pm

  14 ವರ್ಷದ ದಾಂಪತ್ಯ ಜೀವನಕ್ಕೆ ಫುಲ್​ ಸ್ಟಾಪ್​

  ದೂರವಾದ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲ್ಲಿಕ್​

  ಮಾಜಿ ಟೆನ್ನಿಸ್​ ತಾರೆ ಹಾಕಿರುವ ಈ ಪೋಸ್ಟ್​ ಅರ್ಥವೇನು?

ಮಾಜಿ ಕ್ರಿಕೆಟಿಗ ಶೋಯೆಬ್​ ಮಲ್ಲಿಕ್​​ಗೆ ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ವೊಂದನ್ನ ಹಂಚಿಕೊಂಡಿದ್ದಾರೆ.

ಸಾನಿಯಾ ಮಿರ್ಜಾ ತಮ್ಮ 14 ವರ್ಷದ ದಾಂಪತ್ಯ ಜೀವನಕ್ಕೆ ಫುಲ್​ ಸ್ಟಾಪ್​ ನೀಡಿದ್ದಾರೆ. ಶೋಯೆಬ್​ ಮಲ್ಲಿಕ್​ರಿಂದ ದೂರವಾದ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದ ಈ ತಾರೆ ಇದೀಗ ಇನ್​​ಸ್ಟಾದಲ್ಲಿ ತಮ್ಮ ಫೋಟೋ ಹಂಚಿಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಕನ್ನಡಿ ಮುಂದೆ ನಿಂತಿರುವ ಫೋಟೋವನ್ನ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಆ ಫೋಟೋಗೆ ‘ಪ್ರತಿಬಿಂಬ’ ಎಂಬ ಅಡಿಬರಹ ಕೊಟ್ಟಿದ್ದಾರೆ. ಸದ್ಯ ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ಸಾನಿಯಾ ಹಂಚಿಕೊಂಡ ಫೋಟೋಗೆ ಕಾಮೆಂಟ್​ ಮಾಡಿದ್ದಾರೆ.

View this post on Instagram

A post shared by Sania Mirza (@mirzasaniar)

ಅತ್ತ ಶೋಯೆಬ್​ ಪಾಕ್​ ತಾರೆಯಾದ ಸನಾ ಜಾವೇಧ್​ ಎಂಬಾಕೆಯನ್ನು ವಿವಾಹವಾಗಿದ್ದಾರೆ. ಸಾನಿಯಾ ಮತ್ತು ಮಲ್ಲಿಕ್​ಗೆ 2016ರಲ್ಲಿ ಮುದ್ದಾದ ಮಗ ಜನಿಸಿದ್ದು, ವಿಚ್ಛೇದನದ ಬಳಿಕ 6 ವರ್ಷದ ಮಗ ತಾಯಿ ಜೊತೆಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿ ಮುಂದೆ ನಿಂತ ಸಾನಿಯಾ ಮಿರ್ಜಾ! ವಿಚ್ಛೇದನದ ಬಳಿಕ ಮೊದಲ ಪೋಸ್ಟ್ ಹಂಚಿಕೊಂಡ ಮಾಜಿ ಟೆನ್ನಿಸ್​ ತಾರೆ

https://newsfirstlive.com/wp-content/uploads/2024/01/Sania-mirza-1-1.jpg

Load More