/newsfirstlive-kannada/media/post_attachments/wp-content/uploads/2025/06/RISHI-SUNAK.jpg)
ಗುಜರಾತ್ನ ಅಹ್ಮದಾಬಾದ್ನಲ್ಲಿ ಐಪಿಎಲ್ ಫೈನಲ್ (IPL Final) ಮ್ಯಾಚ್ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿ ಆಗಿವೆ. ಈ ಹೈ-ವೋಲ್ಟೇಜ್ ಪಂದ್ಯ ವೀಕ್ಷಿಸಲು ಇಂಗ್ಲೆಂಡ್ನ ಮಾಜಿ ಪ್ರಧಾನಿ ರಿಷಿ ಸುನಕ್ (Rishi Sunak) ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ (Akshata murty) ಅವರು ಸ್ಟೇಡಿಯಂಗೆ ಬಂದಿದ್ದಾರೆ.
ಆರ್ಸಿಬಿ ಬ್ಯಾಟಿಂಗ್ ಇನ್ನಿಂಗ್ಸ್ ಮುಗಿಯುತ್ತಿದ್ದಂತೆಯೇ ರಿಷಿ ಸುನಕ್ ಮೈದಾನಕ್ಕೆ ಆಗಮಿಸಿದ್ದರು. ಈ ವೇಳೆ ನಿರೂಪಕಿ ಮಯಾಂತಿ ಲ್ಯಾಂಗರ್ (Mayanti Langer), ಇಂಗ್ಲೆಂಡ್ ಮಾಜಿ ಪ್ರಧಾನಿಯನ್ನು ಮಾತನ್ನಾಡಿಸಿದರು. ಈ ವೇಳೆ ಸುನಕ್ ತಮ್ಮ ಅನಿಸಿಕೆಗಳನ್ನು ಅದ್ಭುತವಾಗಿ ಹಂಚಿಕೊಂಡರು.
ಇದನ್ನೂ ಓದಿ:ಕೊಹ್ಲಿ ಒಬ್ಬರಿಂದಲೇ ಹೃದಯಗೆದ್ದ ಇನ್ನಿಂಗ್ಸ್.. ಪಂಜಾಬ್ ಕಿಂಗ್ಸ್ಗೆ 191 ರನ್ಗಳ ಟಾರ್ಗೆಟ್..!
ಏನಂದ್ರು ರಿಷಿ ಸುನಕ್..?
ನನಗೆ ಅದ್ಭುತ ಅನುಭವವಾಗ್ತಿದೆ. ನನ್ನ ಜೀವನದಲ್ಲಿ ನಾನು ಕ್ರಿಕೆಟ್‌ನ ಇಷ್ಟೊಂದು ಅದ್ಭುತವಾಗಿ ಆನಂದಿಸಿಯೇ ಇಲ್ಲ. ನಾನು ಮ್ಯಾಚ್ ನೋಡಲು ನನ್ನ ಪತ್ನಿ ಅಕ್ಷತಾ ಜೊತೆಗೆ ಬಂದಿದ್ದೇನೆ. ನಾನು ಮದುವೆಯಾಗಿರೋದು ಬೆಂಗಳೂರು ಕುಟುಂಬದ ಹುಡುಗಿಯನ್ನೇ. ಹಾಗಾಗಿ, ಮೊದಲಿನಿಂದಲೂ ನನ್ನ ಟೀಮ್ ಆರ್ಸಿಬಿನೇ. ನಾನು ಮದುವೆಯಾದಾಗ ನನ್ನ ಅತ್ತೆ-ಮಾವ ನನಗೆ ಮೊದಲ ಸೀಸನ್ನ ಶರ್ಟ್ ಕೊಟ್ಟಿದ್ರು. ಇವತ್ತು ರನ್ ಸ್ವಲ್ಪ ಕಡಿಮೆ ಇದೆ. ನೋಡೋಣ. ನಮ್ ಕಡೆ ಕೂಡ ಒಳ್ಳೆ ಬೌಲಿಂಗ್ ಅಟ್ಯಾಕ್ ಇದೆ. ನಾನು ಹುಬ್ಬಳ್ಳಿ ಹಾಗೂ ಬೆಂಗಳೂರು ಜನರಿಗಾಗಿ ಇಲ್ಲಿಗೆ ಬಂದಿದ್ದೇನೆ. ನಾನು ಆಸ್ಟ್ರೇಲಿಯಾದ ಪ್ರಧಾನಿ ಜೊತೆ ಮಾತನಾಡುವಾಗ ಆಗಲಿ, ಭಾರತದ ಪ್ರಧಾನಿ ನರೇಂದ್ರ ಮೋದಿಯವ್ರ ಜೊತೆಗಾಗಲಿ ಮಾತು ಶುರುಮಾಡುವ ಮುಂದೆ ಸ್ವಲ್ಪ ಕ್ರಿಕೆಟ್ ಬಗ್ಗೆ ಮಾತನಾಡಿನೇ ಮುಂದುವರಿಯುವುದು.
ರಾಜತಾಂತ್ರಿಕ ಚರ್ಚೆ ಶುರುಮಾಡುವ ಮುಂದೆ ಆ ರೀತಿ ನಮ್ಮ ಪ್ಯಾಷನ್ ಬಗ್ಗೆ ಸ್ವಲ್ಪ ಹೊತ್ತು ಮಾತಾಡಿ ಚರ್ಚೆ ಶುರುಮಾಡೋದ್ರಿಂದ ನಮ್ಮ ಸಂಬಂಧಗಳಿಗೂ ಒಳ್ಳೆಯದು. ನಾನು ಈಗಷ್ಟೇ ಐಸಿಸಿ ಚೇರ್ಮನ್ ಜಯ್ ಶಾ ಜೊತೆ ಮಾತನಾಡ್ತಿದ್ದೆ. ಜಾಗತಿಕ ಕ್ರಿಕೆಟ್ನಲ್ಲಿ ಐಪಿಎಲ್ನಿಂದ ಅದೆಷ್ಟು ಬದಲಾವಣೆಯಾಗಿದೆ ಅನ್ನೋದರ ಬಗ್ಗೆ ಮಾತನಾಡ್ತಿದ್ವಿ. ಇವತ್ತು ಜಗತ್ತಿನ ಪ್ರತಿಯೊಬ್ಬ ಕ್ರಿಕೆಟ್ ಆಟಗಾರನೂ ಒಮ್ಮೆ ಐಪಿಎಲ್ನಲ್ಲಿ ಆಡಬೇಕಂತಾ ಬಯಸ್ತಾನೆ. ಜೇಕಬ್ ಬೆಥೆಲ್ ಅತ್ಯುತ್ತಮ ಆಟಗಾರ. ಆತ ಇಲ್ಲಿ ಐಪಿಎಲ್ ಆಡಿ ಈಗಷ್ಟೇ ಇಂಗ್ಲೆಂಡಿಗೆ ಮರಳಿದ್ದಾನೆ.ಇದರಿಂದಲೇ ಗೊತ್ತಾಗುತ್ತೆ, ಜಾಗತಿಕವಾಗಿ ಭಾರತ ಅದೆಷ್ಟು ಪ್ರಭಾವ ಬೀರಿದೆ ಅಂತಾ. ನಾನು ಹಿಂದೊಮ್ಮೆ ಹೇಳಿದ್ದೆ.
ಒಲಿಂಪಿಕ್ಸ್ನಂತಹ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಕ್ರಿಕೆಟ್ಗೆ ಸ್ಥಾನ ಯಾಕ್ ಸಿಕ್ತು ಅಂದ್ರೆ? ಅದಕ್ಕೆ ಕಾರಣ ಭಾರತ. ಭಾರತದ ಅಭಿರುಚಿ, ಭಾರತದ ಪ್ಯಾಷನ್ ಎಲ್ಲವೂ ಜಾಗತಿಕ ಮಟ್ಟದಲ್ಲಿ ಯಾವ್ ರೀತಿ ಪ್ರಭಾವ ಬೀರಿದೆ ಅನ್ನೋದಕ್ಕೆ ಇವತ್ತಿನ ಈ ರಾತ್ರಿಯೇ ಸಾಕ್ಷಿ..ಎಲ್ಲಾ ಕ್ರಿಕೆಟ್ ಪ್ರಿಯರಿಗೆ ಇದೊಂಥರಾ ಅತ್ಯುತ್ತಮ ಅನುಭವ -ರಿಷಿ ಸುನಕ್, ಇಂಗ್ಲೆಂಡ್ನ ಮಾಜಿ ಪ್ರಧಾನಿ
ಇದನ್ನೂ ಓದಿ:RCB vs PBKS: ಕಾರಿನಲ್ಲೇ ಫೈನಲ್ ಮ್ಯಾಚ್ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ