Advertisment

Breaking: ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಮೇಲೆ ಗುಂಡಿನ ದಾಳಿ

author-image
Ganesh
Updated On
Breaking: ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಮೇಲೆ ಗುಂಡಿನ ದಾಳಿ
Advertisment
  • ಗುಂಡಿನ ದಾಳಿ ವೇಳೆ ಇಬ್ಬರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ
  • ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಾರ ಮಾಡ್ತಿದ್ದ ಟ್ರಂಪ್
  • ಗುಂಡಿನ ದಾಳಿ ಬಳಿಕ ನೂಕು-ನುಗ್ಗಲು ಉಂಟಾಗಿದೆ

ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಮಾಜಿ ಅಧ್ಯಕ್ಷ ಡೋನಾಲ್ಟ್​ ಟ್ರಂಪ್ ವೇದಿಕೆಯ ಮೇಲೆ ಱಲಿಯನ್ನುದ್ದೇಶಿಸಿ ಮಾತನಾಡ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ಟ್ರಂಪ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ರಿಪಬ್ಲಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಟ್ರಂಪ್, ಚುನಾವಣೆ ಪ್ರಚಾರ ಮಾಡುತ್ತಿದ್ದಾಗ ಗುಂಡಿನ ದಾಳಿಯಾಗಿದೆ.

Advertisment

ಪರಿಣಾಮ ಟ್ರಂಪ್​ ಅವರ ಬಲ ಕಿವಿ, ಕೆನ್ನೆ ಮತ್ತು ಬಾಯಿಯಲ್ಲಿ ರಕ್ತಸ್ರಾವ ಉಂಟಾಗಿದ್ದು, ವೇದಿಕೆಯ ಮೇಲೆ ಓಡಿ ಬಂದ ಅಂಗ ರಕ್ಷಕರು ಟ್ರಂಪನ್ನು ಸುತ್ತುವರೆದು ರಕ್ಷಣೆ ಮಾಡಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವ ವರದಿಯಾಗಿದೆ. ಗುಂಡಿನ ದಾಳಿಯ ನಂತರ ವೀಡಿಯೋ ಕೂಡ ಹೊರಬಿದ್ದಿದೆ.

ಇದನ್ನೂ ಓದಿ:ಮುಂದಿನ ನಿಲ್ದಾಣ.. ಅಪರ್ಣಾ ಬಳಿಕ ಮೆಟ್ರೋದ ಹೊಸ ಮಾರ್ಗಗಳಿಗೆ ಧ್ವನಿ ಯಾರದ್ದು?

ವಿಡಿಯೋದಲ್ಲಿ ಟ್ರಂಪ್ ಕಿವಿಯ ಬಳಿ ರಕ್ತ ಸೋರುತ್ತಿರೋದನ್ನು ಕಾಣಬಹುದು. ನಂತರ ಭದ್ರತಾ ಸಿಬ್ಬಂದಿ ಟ್ರಂಪ್ ಅವರನ್ನು ವೇದಿಕೆಯಿಂದ ಸುರಕ್ಷಿತವಾಗಿ ಕೆಳಕ್ಕೆ ಇಳಿಸುತ್ತಾರೆ. ಈ ಘೋರ ದಾಳಿಯ ಸಂದರ್ಭದಲ್ಲಿ ತಕ್ಷಣದ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಜಾರಿ ಮತ್ತು ಮೊದಲ ಪ್ರತಿಸ್ಪಂದಕರಿಗೆ ಡೊನಾಲ್ಡ್ ಟ್ರಂಪ್ ಧನ್ಯವಾದ ತಿಳಿಸಿದ್ದಾರೆ ಎಂದು ಮಾಜಿ ಅಧ್ಯಕ್ಷರ ವಕ್ತಾರರು ತಿಳಿಸಿದ್ದಾರೆ. ಟ್ರಂಪ್ ಅವರನ್ನು ಹತ್ಯೆ ಮಾಡುವ ಪ್ರಯತ್ನ ಇದಾಗಿದೆ. ಈ ಸಂಬಂಧ ತನಿಖೆ ಶುರುವಾಗಿದೆ.

Advertisment

ಸದ್ಯ ಟ್ರಂಪ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಭಾರೀ ಭದ್ರತೆ ನೀಡಲಾಗಿದೆ. ಜ್ಯೂನಿಯರ್ ಟ್ರಂಪ್ ತಮ್ಮ ತಂದೆಯ ಆರೋಗ್ಯವನ್ನು ವಿಚಾರಿಸಿಕೊಳ್ತಿದ್ದಾರೆ. ಟ್ರಂಪ್ ಱಲಿ ವೇಳೆ ಸುಮಾರು 7 ರಿಂದ 8 ಸುತ್ತು ಗುಂಡಿನ ದಾಳಿಯಾಗಿದೆ. ನಂತರ ನೂಕು-ನುಗ್ಗಲು ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿ ಒಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್​​ನ ಸಹೋದರಿ ಜೊತೆ ರಿಂಕು ಸಿಂಗ್.. ಯಾರು ಈ ಮಿಸ್ಟರಿ ಗರ್ಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment