/newsfirstlive-kannada/media/post_attachments/wp-content/uploads/2024/05/Akka.jpg)
ಬೀದರ್: ಬಸವ ಸೇವಾ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಪೂಜ್ಯ ಅನ್ನಪೂರ್ಣ ಲಿಂಗೈಕ್ಯರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಸಿರು ನಿಲ್ಲಿಸಿದ್ದಾರೆ.
ಅನ್ನಪೂರ್ಣ ಅವರಿಗೆ 61 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣದಿಂದ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಅಲ್ಲೇ ಕೊನೆಯುಸಿರೆಳೆದರು.
ಅನ್ನಪೂರ್ಣ ಬೀದರ್‌ನ ಲಿಂಗಾಯುತ ಮಹಾಮಠದ ಪೀಠಾಧ್ಯಕ್ಷರಾಗಿದ್ದರು. 2002ರಲ್ಲಿ ಬೀದರ್‌ನ ಪಾಪನಾಶ ಬಳಿ ಬಸವಗಿರಿ ಸ್ಥಾಪಿಸಿದರು. ಇವರು ಅಪಾರ ಭಕ್ತ ಸಮೂಹವನ್ನು ಹೊಂದಿದ್ದು, ಅನ್ನಪೂರ್ಣ ಅವರು ಲಿಂಗೈಕ್ಯ ಸುದ್ದಿಯಿಂದ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದು ಕಳ್ಳಾಟವಾಡಿದ್ದ ನಟಿ ಹೇಮಾಳ ಬ್ಲಡ್​ ಟೆಸ್ಟ್ ಪಾಸಿಟಿವ್..!
ಇಂದು ಸಂಜೆ 5 ಗಂಟೆಗೆ ಬಸವಗಿರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೀದರ್ ನಗರದ ಹೊರವಲಯದಲ್ಲಿರುವ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ಇವರು ಉತ್ತಮ ಬರಹಗಾರರು, ವಾಗ್ಮಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us