/newsfirstlive-kannada/media/post_attachments/wp-content/uploads/2024/06/DARSHAN_GANG-1.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್ 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ಶನಿವಾರ ಆರೋಪಿಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ ದರ್ಶನ್ ಅವರನ್ನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿತ್ತು. ಇದೇ ವೇಳೆ ಆರೋಪಿಗಳಲ್ಲಿ ಕೆಲವರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಮನವಿ ಮಾಡಲಾಗಿತ್ತು.
ಇಂದು ದರ್ಶನ್ ಗ್ಯಾಂಗ್ ಬಗ್ಗೆ ವಿಚಾರಣೆ ನಡೆಸಿದ 24ನೇ ಎಸಿಎಂಎಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ: ‘ರೇಣುಕಾಸ್ವಾಮಿ ನಂಗೂ ಕೆಟ್ಟದಾಗಿ ಮೆಸೇಜ್ ಮಾಡಿದ್ದ’- ಚಿತ್ರಾಲ್ ಬಳಿಕ ಸೋನು ಗೌಡ ಕೊಟ್ರು ಹೊಸ ಟ್ವಿಸ್ಟ್; ಏನಂದ್ರು?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳಾದ ರವಿಶಂಕರ್, ಕಾರ್ತಿಕ್, ಕೇಶವ್ ಮತ್ತು ನಿಖಿಲ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್ ಆದೇಶ ನೀಡಿದೆ.
ಬೇರೆ ಜೈಲಿಗೆ ಶಿಫ್ಟ್ ಯಾಕೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ಮುಂದೆ ಶರಣಾಗಿದ್ದು ಆರೋಪಿಗಳಾದ ಕಾರ್ತಿಕ್, ಕೇಶವ್ & ನಿಖಿಲ್. ಈ ಮೂವರು ಕೊಲೆ ಬಗ್ಗೆ ಪೊಲೀಸರ ಮುಂದೆ ಸಂಪೂರ್ಣ ಮಾಹಿತಿಯನ್ನು ಬಾಯ್ಬಿಟ್ಟಿದ್ದರು. ಈ ಮೂವರು ನೀಡಿದ ಮಾಹಿತಿಯಿಂದಲೇ ಕೊಲೆ ಕೇಸ್‌ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್ ಆಗಿತ್ತು.
ಕೋರ್ಟ್‌ನಲ್ಲಿ ಆರೋಪಿಗಳ ಪರ ವಕೀಲರು ತುಮಕೂರು ಜೈಲಿಗೆ ವರ್ಗಾವಣೆ ಮಾಡಲು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವುದು ಅಗತ್ಯ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ‘ದರ್ಶನ್ ಗ್ಯಾಂಗ್ ಮಧ್ಯೆಯೇ ಪರಸ್ಪರ ದ್ವೇಷ.. ಅವರವರೇ ಹೊಡೆದಾಡಿಕೊಳ್ಳಬಹುದು’- ಸ್ಫೋಟಕ ಮಾಹಿತಿ ಬಹಿರಂಗ
ಶಿಫ್ಟ್ ಮಾಡಲು ಕಾರಣವೇನು?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದ ಆರೋಪಿಗಳು ಬರೀ ಕುತಂತ್ರವಷ್ಟೇ ಅಲ್ಲ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ. ಒಂದೇ ಜೈಲಿನಲ್ಲಿದ್ರೆ ಕೊಲೆ ಆರೋಪಿಗಳು ಅವರವರೇ ಹೊಡೆದಾಡಿಕೊಳ್ಳಬಹುದು ಅಂತಲೂ ಪೊಲೀಸರಿಗೆ ಡೌಟ್ ಇತ್ತು. ಆರೋಪಿಗಳ ಮಧ್ಯೆಯೇ ಪರಸ್ಪರ ದ್ವೇಷ ಹುಟ್ಟಿಕೊಂಡಿರುವ ಸುಳಿವು ಸಿಕ್ಕಿದೆ. ದರ್ಶನ್ ಕಡೆಯವರು ಸಹ ಆರೋಪಿಗಳ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಇದೆ ಅಂತ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದ ರಿಮ್ಯಾಂಡ್ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ