ಬನ್ನೇರುಘಟ್ಟದಿಂದ ಜಪಾನ್​ಗೆ ವಿಮಾನದಲ್ಲಿ ಹೊರಟ 4 ಆನೆಗಳು.. ಗಜ ಪಡೆ ಭಾರೀ ಬೇಸರ

author-image
Bheemappa
Updated On
ಬನ್ನೇರುಘಟ್ಟದಿಂದ ಜಪಾನ್​ಗೆ ವಿಮಾನದಲ್ಲಿ ಹೊರಟ 4 ಆನೆಗಳು.. ಗಜ ಪಡೆ ಭಾರೀ ಬೇಸರ
Advertisment
  • ಬಾಲ್ಯದ ಗೆಳೆಯ ಬಸವನನ್ನು ಬಿಟ್ಟು ಹೋಗಲು ಸುರೇಶ್​ನು ಹಠ
  • ದೇಶದಲ್ಲೇ ಮೊದಲ ಬಾರಿಗೆ ಜಪಾನಿನತ್ತ ಬನ್ನೇರುಘಟ್ಟ ಗಜಪಡೆ
  • ಇಬ್ಬರು ವೈದ್ಯಾಧಿಕಾರಿಗಳು, 4 ಮಾವುತರು ಜಪಾನ್​ಗೆ ಪ್ರವಾಸ

ಆನೇಕಲ್: ದೇಶದಲ್ಲೇ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯ ಯೋಜನೆ ಅಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ 4 ಸಾಕಾನೆಗಳನ್ನ ಜಪಾನ್​ಗೆ ರವಾನೆ ಮಾಡಲಾಗುತ್ತಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ 4 ಆನೆಗಳನ್ನು ಬೃಹತ್ ಸರಕು ಸಾಗಾಣೆ ವಿಮಾನದಲ್ಲಿ ಸಾಗಾಣೆ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಪ್ರಾಣಿಗಳ ವಿನಿಮಯ ಯೋಜನೆ ಅಡಿಯಲ್ಲಿ ಸಾಕಾನೆಗಳಾದ ಸುರೇಶ್, ತುಳಸಿ, ಗೌರಿ ಹಾಗೂ ಶ್ರುತಿಯನ್ನು ಇಂದು ಜಪಾನಿಗೆ ರವಾನೆ ಮಾಡಲಾಗುತ್ತಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಸಾಕಾನೆ ಸುರೇಶ್, ತನ್ನ ಬಾಲ್ಯದ ಗೆಳೆಯ ಬಸವನನ್ನು ಬಿಟ್ಟು ಬರಲು ಒಪ್ಪಲಿಲ್ಲ. ಮಾವುತರು ಒತ್ತಾಯ ಮಾಡಿದರೂ ಕೆಲ ಕಾಲ ಸ್ನೇಹಿತ ಬಸವನನ್ನು ಅಪ್ಪಿಕೊಂಡ ಸುರೇಶ್ ವಲ್ಲದ ಮನಸ್ಸಿನಿಂದ ಕೇಜಿನತ್ತ ಹೆಜ್ಜೆ ಹಾಕಿದ್ದಾನೆ. ಗೌರಿ ಮತ್ತು ಶ್ರುತಿ ಸಹ ಹಠ ಮಾಡಿದ್ದು, ಕೊನೆಗೆ ತುಳಸಿ ಜೊತೆ ಸಾಕಾನೆ ಸುರೇಶ್ ಹಿಂಬಾಲಿಸಿದೆ.

publive-image

ಇನ್ನೂ 2023ರಿಂದಲೂ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯಕ್ಕೆ ಪ್ರಯತ್ನ ನಡೆಯುತ್ತಿದ್ದು, ಕೇಂದ್ರೀಯ ಮೃಗಾಲಯ ಪ್ರಾಧಿಕಾರ. ಜಪಾನ್ ಮತ್ತು ಭಾರತದ ರಾಯಭಾರಿ ಕಛೇರಿಗಳು ಸೇರಿದಂತೆ ಪ್ರಮುಖ ಇಲಾಖೆಗಳ ಸಹಕಾರದಿಂದ ಇಂದು ಸಾಧ್ಯವಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ 4 ಆನೆಗಳು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್​ನ ಒಸಾಕಾ ಕಾನ್ಲೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾತಾರ್ ಏರ್ ವೇಸ್ B777-200F ಸರಕು ಸಾಗಣೆ ವಿಮಾನ (Cargo Plane) ದಲ್ಲಿ ಕರೆದೊಯ್ಯಲಾಗುತ್ತಿದೆ.

publive-image

ಸುಮಾರು 8 ತಾಸು ವಿಮಾನ ಪ್ರಯಾಣ ಇರಲಿದ್ದು, ಈಗಾಗಲೇ ಕಳೆದ ಮೂರು ತಿಂಗಳಿಂದ ಆನೆಗಳಿಗೆ ತರಬೇತಿ ನೀಡಲಾಗಿತ್ತು. ಜಪಾನ್​ನಿಂದ ಆಗಮಿಸಿದ್ದ ಮಾವುತರಿಗೆ ತರಬೇತಿ ಕೂಡ ನೀಡಲಾಗಿತ್ತು. ಜೊತೆಗೆ ಸಾಕಾನೆಗಳು ಅಲ್ಲಿನ ವಾತವರಣಕ್ಕೆ ಒಗ್ಗಿಕೊಳ್ಳುವ ಸಲುವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ವೈದ್ಯಾಧಿಕಾರಿಗಳು, ನಾಲ್ವರು ಮಾವುತರು, ಓರ್ವ ಮೇಲ್ವಿಚಾರಕ ಮತ್ತು ಜೀವಶಾಸ್ತ್ರಜ್ಞೆ 15 ದಿನಗಳ ಮಟ್ಟಿಗೆ ತೆರಳಲಿದ್ದು, ಮಾವುತರು ಭಾರದ ಮನಸ್ಸಿನಲ್ಲಿ ಸಾಕಾನೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ.

ಇದನ್ನೂ ಓದಿ:BREAKING: 10ನೇ ತರಗತಿ ಪರೀಕ್ಷೆಯಲ್ಲಿ 35 ಅಲ್ಲ, ಇನ್ಮುಂದೆ 33 ಅಂಕ ಪಡೆದರೆ ಪಾಸ್

publive-image

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಕಾನೆಗಳ ಬದಲಿಗೆ ಕೆಲವೇ ದಿನಗಳಲ್ಲಿ ಅಪರೂಪದ ಚೀತಾ, ಜಾಗ್ವಾರ್, ಪೂಮಾ ಸೇರಿದಂತೆ ಚಿಂಪಾಂಜಿ ಕ್ಯಾಪುಚಿನ್ ಕೋತಿಗಳ ಆಗಮನವಾಗುತ್ತಿದ್ದು, ಪ್ರಾಣಿ ಪ್ರಿಯರು ಅಪರೂಪದ ಪ್ರಾಣಿಗಳನ್ನು ಕಣ್ತುಂಬಿಕೊಳ್ಳುವ ಕೆಲವೇ ದಿನಗಳಲ್ಲಿ ಅವಕಾಶ ಸಿಗಲಿದೆ. ನಮ್ಮಲ್ಲಿನ ಆನೆಗಳನ್ನು ಜಪಾನ್​ಗೆ ರವಾನೆ ಮಾಡಿ, ಜಪಾನ್​ನಲ್ಲಿರುವ ಕೆಲ ಪ್ರಾಣಿಗಳನ್ನ ಇಲ್ಲಿಗೆ ರವಾನೆ ಆಗುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment