/newsfirstlive-kannada/media/post_attachments/wp-content/uploads/2024/08/VINESH-PHOGAT-4-1.jpg)
2024ರ ಪ್ಯಾರಿಸ್ ಒಲಿಂಪಿಕ್ಸ್​ನಿಂದ ಅನರ್ಹಗೊಂಡ ನಂತರ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಭಾರೀ ನಿರಾಸೆಗೆ ಒಳಗಾಗಿದ್ದಾರೆ. ಸೆಮಿಫೈನಲ್​​​ನಲ್ಲಿ ಅದ್ಭುತ ಪ್ರದರ್ಶನ ನೀಡಿ ವಿನೇಶ್ ಫೋಗಟ್ ಫೈನಲ್​ಗೆ ಎಂಟ್ರಿ ಕೊಟ್ಟಿದ್ದರು. ಆದರೆ ತೂಕ ಹೆಚ್ಚಿದ್ದ ಕಾರಣ ಅನರ್ಹಗೊಂಡಿದ್ದರು. ಸದ್ಯ ಇದರ ಬೆನ್ನಲ್ಲೇ ವಿನೇಶ್ ಫೋಗಟ್ ಪರ 4 ರಾಷ್ಟ್ರಗಳು ಧ್ವನಿ ಎತ್ತಿವೆ.
ಸದ್ಯ ವಿನೇಶ್ ಫೋಗಟ್ ಪರ ಅಮೆರಿಕದ ಮಾಜಿ ಒಲಿಂಪಿಕ್ಸ್​ ಆಟಗಾರ್ತಿ ಜೋರ್ಡಾನ್ ಬುರೌಗ್ಸ್​, ನೈಜೀರಿಯಾದ ಮಹಿಳಾ ಕುಸ್ತಿ ಕೋಚ್ ಪುರಿಟಿ ಅಕುವಾ ಮಾತನಾಡಿದ್ದಾರೆ. ಇವರಲ್ಲದೇ ಗ್ರೀಸ್​ ಹಾಗೂ ಟರ್ಕಿ ಕೂಡ ವಿನೇಶ್ ಫೋಗಟ್​ ಪರವೇ ಹೇಳಿಕೆ ನೀಡಿವೆ. ಅವರು ಪದಕಕ್ಕೆ ಅರ್ಹರು. ಪದಕ ನೀಡುವ ಪೋಡಿಯಂನಲ್ಲಿ ಅವರನ್ನು ನಾವು ಮತ್ತೆ ನೋಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಒಲಿಂಪಿಕ್ಸ್​​​ನಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಪೋಗಟ್​ ಚಿನ್ನದ ಭರವಸೆಯಲ್ಲಿ,​​​​​​​​​​ ತೂಕ ಇಳಿಸಿಕೊಳ್ಳಲು ರಾತ್ರಿಯೆಲ್ಲ ಭಾರೀ ಕಸರತ್ತು ಮಾಡಿದ್ದರು. ಕಡೇ ಘಳಿಗೆಯಲ್ಲಿ ತೂಕ ಇಳಿಸಲು ಹಾಕಿರೋ ಶ್ರಮ ಅಷ್ಟಿಷ್ಟಲ್ಲ. ಸದ್ಯ ವಿನೇಶ್ ಫೋಗಟ್ ಅನರ್ಹ ಕುರಿತಂತೆ ಬೆಳ್ಳಿ ಪದಕ ನೀಡಬೇಕು ಎಂದು ಸಿಎಎಸ್​ (Court of Arbitration for Sport)ಗೆ ಮನವಿ ಮಾಡಲಾಗಿದೆ. ಈ ಬಗ್ಗೆ ತೀರ್ಪು ಬರಬೇಕಿದ್ದು ಅಲ್ಲಿವರೆಗೆ ಕಾದು ನೋಡಬೇಕಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ