ಚಿನ್ನದ ಪದಕಕ್ಕೆ ಗುರಿಯಿಟ್ಟಿದ್ದ ಸ್ಪರ್ಧಿ ಅನುಭವಿಸಿದ ಕಷ್ಟಗಳೇನು?
ಕೊನೆ ಸಮಯದಲ್ಲಿ ತೂಕ ಇಳಿಸಲು ಹಾಕಿರೋ ಶ್ರಮ ಅಷ್ಟಿಷ್ಟಲ್ಲ
ವಿನೇಶ್ ಫೋಗಟ್ ಪರ ಬ್ಯಾಟ್ ಬೀಸಿದ ರಾಷ್ಟ್ರಗಳು ಯಾವುವು?
2024ರ ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡ ನಂತರ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಭಾರೀ ನಿರಾಸೆಗೆ ಒಳಗಾಗಿದ್ದಾರೆ. ಸೆಮಿಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ವಿನೇಶ್ ಫೋಗಟ್ ಫೈನಲ್ಗೆ ಎಂಟ್ರಿ ಕೊಟ್ಟಿದ್ದರು. ಆದರೆ ತೂಕ ಹೆಚ್ಚಿದ್ದ ಕಾರಣ ಅನರ್ಹಗೊಂಡಿದ್ದರು. ಸದ್ಯ ಇದರ ಬೆನ್ನಲ್ಲೇ ವಿನೇಶ್ ಫೋಗಟ್ ಪರ 4 ರಾಷ್ಟ್ರಗಳು ಧ್ವನಿ ಎತ್ತಿವೆ.
ಇದನ್ನೂ ಓದಿ: ವಿರಾಟ್ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣವೇನು.. ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟರ್ ಶಾಕಿಂಗ್ ಹೇಳಿಕೆ!
ಸದ್ಯ ವಿನೇಶ್ ಫೋಗಟ್ ಪರ ಅಮೆರಿಕದ ಮಾಜಿ ಒಲಿಂಪಿಕ್ಸ್ ಆಟಗಾರ್ತಿ ಜೋರ್ಡಾನ್ ಬುರೌಗ್ಸ್, ನೈಜೀರಿಯಾದ ಮಹಿಳಾ ಕುಸ್ತಿ ಕೋಚ್ ಪುರಿಟಿ ಅಕುವಾ ಮಾತನಾಡಿದ್ದಾರೆ. ಇವರಲ್ಲದೇ ಗ್ರೀಸ್ ಹಾಗೂ ಟರ್ಕಿ ಕೂಡ ವಿನೇಶ್ ಫೋಗಟ್ ಪರವೇ ಹೇಳಿಕೆ ನೀಡಿವೆ. ಅವರು ಪದಕಕ್ಕೆ ಅರ್ಹರು. ಪದಕ ನೀಡುವ ಪೋಡಿಯಂನಲ್ಲಿ ಅವರನ್ನು ನಾವು ಮತ್ತೆ ನೋಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಓದಲು ಕನಸು ಕಾಣುವ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್.. ಬೆಂಗಳೂರಲ್ಲೇ ಇದೆ ಅವಕಾಶ; ಹೇಗೆ?
ಒಲಿಂಪಿಕ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಪೋಗಟ್ ಚಿನ್ನದ ಭರವಸೆಯಲ್ಲಿ, ತೂಕ ಇಳಿಸಿಕೊಳ್ಳಲು ರಾತ್ರಿಯೆಲ್ಲ ಭಾರೀ ಕಸರತ್ತು ಮಾಡಿದ್ದರು. ಕಡೇ ಘಳಿಗೆಯಲ್ಲಿ ತೂಕ ಇಳಿಸಲು ಹಾಕಿರೋ ಶ್ರಮ ಅಷ್ಟಿಷ್ಟಲ್ಲ. ಸದ್ಯ ವಿನೇಶ್ ಫೋಗಟ್ ಅನರ್ಹ ಕುರಿತಂತೆ ಬೆಳ್ಳಿ ಪದಕ ನೀಡಬೇಕು ಎಂದು ಸಿಎಎಸ್ (Court of Arbitration for Sport)ಗೆ ಮನವಿ ಮಾಡಲಾಗಿದೆ. ಈ ಬಗ್ಗೆ ತೀರ್ಪು ಬರಬೇಕಿದ್ದು ಅಲ್ಲಿವರೆಗೆ ಕಾದು ನೋಡಬೇಕಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ