ಭೀಕರ ಅಪಘಾತ.. ಅಮೆರಿಕಾದಲ್ಲಿ ನಾಲ್ವರು ಭಾರತೀಯರ ದಾರುಣ ಅಂತ್ಯ; ಆಗಿದ್ದೇನು?

author-image
Bheemappa
Updated On
ಭೀಕರ ಅಪಘಾತ.. ಅಮೆರಿಕಾದಲ್ಲಿ ನಾಲ್ವರು ಭಾರತೀಯರ ದಾರುಣ ಅಂತ್ಯ; ಆಗಿದ್ದೇನು?
Advertisment
  • ಕಾರಿಗೆ ಟ್ರಕ್ ಡಿಕ್ಕಿಯಾದ ರಭಸಕ್ಕೆ ಹೊತ್ತಿ ಉರಿದ ದೇಹಗಳು
  • ತಮ್ಮ ಸಂಬಂಧಿಗಳನ್ನ ಮೀಟ್ ಆಗಲು ತೆರಳುವಾಗ ಘಟನೆ
  • ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ

ಅಮೆರಿಕದ ಟೆಕ್ಸಾಸ್​ನ ಅಣ್ಣಾ ಪ್ರದೇಶದಲ್ಲಿ ಭಯಾನಕ ಸರಣಿ ಅಪಘಾತ ಸಂಭವಿಸಿದೆ. ದುರಂತದಲ್ಲಿ ತೆಲಂಗಾಣದ ಮೂವರು ಸೇರಿದಂತೆ ನಾಲ್ವರು ಭಾರತೀಯರು ಸಜೀವವಾಗಿ ದಹನಗೊಂಡಿದ್ದಾರೆ. ಒಟ್ಟು ಐದು ವಾಹನಗಳು ಅಪಘಾತಕ್ಕಿಡಾಗಿದ್ದು ಬೆಂಕಿಯಿಂದ ಧಗ ಧಗಿಸಿದ್ದರಿಂದ ಐವರು ಉಸಿರು ಚೆಲ್ಲಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರನ್ನು ತೆಲಂಗಾಣದ ಆರ್ಯನ್ ರಘುನಾಥ್, ಫಾರೂಕ್ ಶೇಕ್, ಆಂಧ್ರದ ಲೋಕೇಶ್ ಪಾಲಾಚಾರ್ಲ, ತಮಿಳುನಾಡಿನ ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ. ಬೆಂಕಿಯಿಂದ ಮೃತದೇಹಗಳೆಲ್ಲ ಸುಟ್ಟು ಹೋಗಿದ್ದರಿಂದ ಅಧಿಕಾರಿಗಳು ಡಿಎನ್ಎ ಪರೀಕ್ಷೆ ಮಾಡಿ ಗುರುತು ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ.. ಚೇತನ್ ಜೊತೆ ಕೈ ಜೋಡಿಸಿದ ಸುದೀಪ್, ರಮ್ಯಾ!

ಅಮೆರಿಕದ ಬೆಂಟೊನ್‌ವಿಲ್ಲೆಗೆ ಪ್ರಯಾಣಿಸಲು ನಾಲ್ವರು ಭಾರತೀಯರು ಕಾರ್‌ಪೂಲಿಂಗ್ ಅಪ್ಲಿಕೇಶನ್​ನಲ್ಲಿ ಸಂಪರ್ಕ ಹೊಂದಿದ್ದರು. ಶೇಕ್ ಡಲ್ಲಾಸ್‌ನಲ್ಲಿನ ತನ್ನ ಸೋದರನನ್ನ ಭೇಟಿಯಾಗಲು ರಘುನಾಥ್ ಹಾಗೂ ಸ್ನೇಹಿತ ಫಾರೂಕ್ ಇಬ್ಬರು ತೆರಳುತ್ತಿದ್ದರು. ಲೋಕೇಶ್ ತನ್ನ ಪತ್ನಿಯನ್ನು ಮೀಟ್ ಮಾಡಲು ಬೆಂಟನ್‌ವಿಲ್ಲೆಗೆ ಹೋಗುತ್ತಿದ್ದರು. ದರ್ಶಿನಿ ವಾಸುದೇವನ್, ಬೆಂಟನ್‌ವಿಲ್ಲೆಯಲ್ಲಿನ ತನ್ನ ಚಿಕ್ಕಪ್ಪನನ್ನು ಭೇಟಿ ಮಾಡಲು ಹೋಗುತ್ತಿದ್ದರು. ಈ ವೇಳೆ ಟೆಕ್ಸಾಸ್​ನ ಅಣ್ಣಾ ಪ್ರದೇಶದ ರಸ್ತೆಯಲ್ಲಿ ವೇಗವಾಗಿ ಬಂದ ಟ್ರಕ್​ವೊಂದು ಇವರ ವಾಹನಗಳಿಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದು ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಬೆಂಕಿಯಲ್ಲೇ ಎಲ್ಲರೂ ಸಜೀವವಾಗಿ ದಹನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಾಶ್ ಮಾಡಿದ್ದ ದರ್ಶನ್‌ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ; ಏನಿದು ಲುಮಿನಲ್ ಟೆಸ್ಟ್‌?

publive-image

ಅಮೆರಿಕದಲ್ಲೇ ಉನ್ನತ ಶಿಕ್ಷಣ ಪಡೆದಿದ್ದ ನಾಲ್ವರು ಬೇರೆ ಬೇರೆ ಉದ್ಯೋಗದಲ್ಲಿ ಇದ್ದರು. ಹೀಗಾಗಿ ರಜೆಯ ಕಾರಣ ತಮ್ಮ ಸಂಬಂಧಿಗಳನ್ನ ಭೇಟಿಯಾಗಲು ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯ ವಿಷಯ ತಿಳಿದು ಸದ್ಯ ಭಾರತದಲ್ಲಿರುವ ಅವರ ಸಂಬಂಧಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಭಾರತಕ್ಕೆ ಮೃತದೇಹಗಳನ್ನು ತರಲು ಕೇಂದ್ರ ಸರ್ಕಾರದ ಸಹಾಯವನ್ನು ಸಂತ್ರಸ್ತರ ಕುಟುಂಬಗಳು ಕೋರಿವೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment