KL ರಾಹುಲ್​​​ ಬಗ್ಗೆ ಬಿಗ್​ ಅಪ್ಡೇಟ್​​; ಕನ್ನಡಿಗನ ಖರೀದಿಗೆ RCB ಸೇರಿ ಈ ತಂಡಗಳ ಮಧ್ಯೆ ಪೈಪೋಟಿ

author-image
Ganesh Nachikethu
Updated On
KL ರಾಹುಲ್​​​ ಬಗ್ಗೆ ಬಿಗ್​ ಅಪ್ಡೇಟ್​​; ಕನ್ನಡಿಗನ ಖರೀದಿಗೆ RCB ಸೇರಿ ಈ ತಂಡಗಳ ಮಧ್ಯೆ ಪೈಪೋಟಿ
Advertisment
  • ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2025
  • ಕೆ.ಎಲ್​ ರಾಹುಲ್​ ಬಗ್ಗೆ ಹೊರಬಿತ್ತು ಸ್ಫೋಟಕ ಮಾಹಿತಿ!
  • ಕನ್ನಡಿಗನ ಖರೀದಿಗಾಗಿ ಮುಗಿಬಿದ್ದ ಐಪಿಎಲ್​ ತಂಡಗಳು

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಟೂರ್ನಿ ಹರಾಜಿಗೂ ಮುನ್ನವೇ ಎಲ್ಲಾ ಐಪಿಎಲ್​ ತಂಡಗಳು ಬಿಸಿಸಿಐಗೆ ರೀಟೈನ್​ ಲಿಸ್ಟ್​ ಸಲ್ಲಿಸಬೇಕಿದೆ. ನಾಳೆ ಸಂಜೆ ಒಳಗೆ ಯಾವ ತಂಡ ಯಾರನ್ನು ರೀಟೈನ್​ ಮಾಡಿಕೊಂಡಿದೆ ಅನ್ನೋ ಮಾಹಿತಿ ಹೊರಬೀಳಲಿದೆ. ಇದರ ಮಧ್ಯೆ ಲಕ್ನೋ ಸೂಪರ್​​ ಜೈಂಟ್ಸ್​ ತಂಡದಿಂದ ಬಿಗ್​ ಅಪ್ಡೇಟ್​ ಒಂದಿದೆ.

ಮೆಗಾ ಆಕ್ಷನ್​ಗೆ ಮುನ್ನವೇ ಕ್ಯಾಪ್ಟನ್​ ಕೆ.ಎಲ್​ ರಾಹುಲ್​​ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ದೂರ ಆಗಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೆ.ಎಲ್​ ರಾಹುಲ್​ ಅವರನ್ನು ಉಳಿಸಿಕೊಳ್ಳಲು ಲಕ್ನೋ ತಂಡ ಮುಂದಾಗಿತ್ತು. ಆದರೆ, ಇವರು ಪರ್ಸನಲ್​​ ಮತ್ತು ಪ್ರೊಫೆಷನಲ್​ ಕಾರಣಕ್ಕೆ ತಂಡ ತೊರೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೆ.ಎಲ್​​ ರಾಹುಲ್​ಗಾಗಿ 4 ತಂಡಗಳ ಮಧ್ಯೆ ಫೈಟ್​​

ಲಕ್ನೋ ತಂಡದಿಂದ ಹೊರ ಬರುತ್ತಿರೋ ಕನ್ನಡಿಗ ಕೆ.ಎಲ್​ ರಾಹುಲ್​ ಖರೀದಿಗೆ ಐಪಿಎಲ್​ ಫ್ರಾಂಚೈಸಿಗಳು ಮುಗಿ ಬೀಳುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕೆಎಲ್ ರಾಹುಲ್‌ ಖರೀದಿಗೆ ಆಸಕ್ತಿ ತೋರಿಸಿವೆ ಎನ್ನಲಾಗಿದೆ.

ರಾಹುಲ್​ ಖರೀದಿಗೆ ಬೇಕು 20 ಕೋಟಿ

ಮೆಗಾ ಹರಾಜಿಗೆ ಮುನ್ನ ಲಕ್ನೋ ತಂಡ ಕೆ.ಎಲ್​ ರಾಹುಲ್​ ಅವರನ್ನು 18 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಈಗ ಯಾವುದೇ ತಂಡ ಕೆ.ಎಲ್​ ರಾಹುಲ್​ ಅವರನ್ನು ಖರೀದಿ ಮಾಡಬೇಕು ಅನ್ನೋದಾದ್ರೆ ಕನಿಷ್ಠ 18 ಕೋಟಿಯಿಂದ ಗರಿಷ್ಠ 20 ಕೋಟಿ ಬೇಕು.

ಹರಾಜಿಗೆ ರಾಹುಲ್ ಬರೋದು ಪಕ್ಕಾ!

ಐಪಿಎಲ್ 2025ರ ಹರಾಜಿನಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ತಮ್ಮನ್ನು ಬಿಡ್​ ಮಾಡೋದಾಗಿ ಈಗಾಗಲೇ ಆರ್‌ಸಿಬಿ, ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸಿಎಸ್‌ಕೆ ರಾಹುಲ್​ ಅವರನ್ನು ಸಂಪರ್ಕ ಮಾಡಿವೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment