newsfirstkannada.com

ರಾಮ ಮಂದಿರ ಅಪೂರ್ಣವೇ ಮುಳುವಾಯ್ತಾ? ಅಯೋಧ್ಯೆಯಲ್ಲಿ BJP ಸೋಲಲು ಪ್ರಮುಖ 5 ಕಾರಣಗಳಿವು

Share :

Published June 4, 2024 at 6:39pm

Update June 4, 2024 at 6:57pm

    ಅಯೋಧ್ಯೆಯಲ್ಲಿ ಬಿಜೆಪಿ ಸೋಲಲು ಪ್ರಮುಖ ಕಾರಣಗಳಿವು

    ರಾಮಪಥದ ನಿರ್ಮಾಣದಲ್ಲಿ ಎಡವಿತೇ ಬಿಜೆಪಿ? ಅಷ್ಟಕ್ಕೂ ಆಗಿದ್ದೇನು?

    ಸಮಾಜವಾದಿ ಪಾರ್ಟಿ ಪ್ರಯೋಗಿಸಿದ ಪ್ರಮುಖ ಜಯದ ಅಸ್ತಗಳು ಹೀಗಿವೆ

ರಾಮನೂರು ಅಯೋಧ್ಯೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಸಮಾಜವಾದಿ ಪಾರ್ಟಿಯ ಭರ್ಜರಿ ಗೆಲುವಿನಿಂದ ಬಿಜೆಪಿಗೆ ಅರಗಿಸಿಕೊಳ್ಳಲಾಗದ ಸೋಲಾಗಿದೆ. ಕಾರಣ 1990ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ಬಿಜೆಪಿಗೆ ಈ ಸೋಲು ನುಂಗಲಾರದ ತುತ್ತಂತಾಗಿದೆ.

ಅಯೋಧ್ಯೆಯ ಫೈಜಾಬಾದ್​ನಲ್ಲಿ ಈ ಬಾರಿ ಬಿಜೆಪಿ ಸುಲಭ ಗೆಲುವು ಸಾಧಿಸಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿದ್ದ ಅವದೇಶ್​ ಪ್ರಸಾದ್​ 56768 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಲುಲ್ಲುಸಿಂಗ್​ 490405 ಪಡೆಯುವ ಮೂಲಕ ಸೋಲುಂಡಿದ್ದಾರೆ.

2019ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಬಾರಿ ರಾಮಮಂದಿರ ನಿರ್ಮಾಣ ಮತ್ತು ಉದ್ಘಾಟನೆಯೇ ದೊಡ್ಡ ಅಸ್ತ್ರವಾಗಿತ್ತು. ಹೀಗಾಗಿ ಸುಲಭ ಗೆಲುವಿನ ಕನಸು ಕಂಡಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಅಂದಹಾಗೆಯೇ ಬಿಜೆಪಿ ಅಯೋದ್ಯೆಯಲ್ಲಿ ಸೋಲಲು ಸಾಲು ಸಾಲು ಕಾರಣಗಳಿವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿವೆ.

ಲುಲ್ಲು ಸಿಂಗ್​

ಬಿಜೆಪಿಯ ಗಮನ ಎಲ್ಲಿತ್ತು ಗೊತ್ತಾ?

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಯೋಧ್ಯೆಯ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಿರುವುದೇ ಈ ಸೋಲಿಗೆ ಕಾರಣವಾಗಿದೆ. ಏಕೆಂದರೆ ಬಿಜೆಪಿ ಸಾಮಾಜಿಕ ಜಾಲತಾಣದಿಂದ ಹಿಡಿದು ಅಯೋಧ್ಯೆಯ ಅಭಿವೃದ್ಧಿಯತ್ತ ಹೆಚ್ಚು ಕೆಲಸ ಮಾಡಿತ್ತು. ಆದರೆ ಅಲ್ಲಿನ ಗ್ರಾಮಾಂತರ ಪ್ರದೇಶದತ್ತ ಬೆಳಕು ಚೆಲ್ಲಿರಲಿಲ್ಲ. ಮತ್ತೊಂದೆಡೆ ಗ್ರಾಮಾಂತರ ಪ್ರದೇಶದ ಚಿತ್ರಣ ಸಂಪೂರ್ಣವಾಗಿ ಭಿನ್ನವಾಗಿತ್ತು. ಇದರಿಂದಾಗಿ ಗ್ರಾಮಾಂತರ ಪ್ರದೇಶದ ಜನರ ಮತ ಸಮಾಜವಾದಿ ಪಾರ್ಟಿಯತ್ತ ತಿರುಗಿದೆ.

ಇದನ್ನೂ ಓದಿ: ಬರೋಬ್ಬರಿ 5 ಸಾವಿರ ಕೋಟಿ ಒಡೆಯ.. ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಗೆದ್ರಾ.. ಸೋತ್ರಾ?

ರಾಮಪಥದಲ್ಲಿ ಎಡವಿದ ಬಿಜೆಪಿ

ಬಿಜೆಪಿ ಅಯೋಧ್ಯೆಯ ಅಭಿವೃದ್ಧಿಗಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿತ್ತು. ಅನೇಕರು ಇದರಲ್ಲಿ ಮನೆ, ಅಂಗಡಿ ಕಳೆದುಕೊಂಡಿದ್ದರು. ಮಾತ್ರವಲ್ಲದೆ ಪರಿಹಾರದಿಂದ ವಂಚಿತರಾಗಿದ್ದರು. ಈ ಅಸಮಾಧಾನವೇ ಬಿಜೆಪಿ ಹಿನ್ನಲೆಗೆ ಕಾರಣವಾಗಿದೆ.

ಬಿಜೆಪಿ ಅಭ್ಯರ್ಥಿ ವಿರುದ್ಧ ಭಾರೀ ಅಸಮಾಧಾನ!

ಬಿಜೆಪಿ 3ನೇ ಬಾರಿಗೆ ಲುಲ್ಲು ಸಿಂಗ್​ ಅವರನ್ನು ಕಣಕ್ಕಿಳಿಸಿದ್ದರು. ಮಾತ್ರವಲ್ಲದೆ ಭಾರತೀಯ ಜನತಾ ಪಾರ್ಟಿಗೆ ಈ ಬಾರಿಯೂ ಅಯೋಧ್ಯೆಯಲ್ಲಿ ಜಯ ಸಾಧಿಸುತ್ತೆ ಎಂಬ ನಂಬಿಕೆಯಿತ್ತು. ಹಾಗಾಗಿ ಲುಲ್ಲು ಸಿಂಗ್​ ಅವರನ್ನೇ ಮತ್ತೆ ಸ್ಪರ್ಧೆಗೆ ನಿಲ್ಲಿಸಿದ್ದರು. ಆದರೆ ಅವರ ಕಾರ್ಯವನ್ನು ಗಮನಿಸಿದ ಜನರು ಈ ಬಾರಿಯ ಮತವನ್ನು ಸಮಾಜವಾದಿ ಪಾರ್ಟಿಗೆ ಹಾಕಿದ್ದಾರೆ.

ಇದನ್ನೂ ಓದಿ: 26ನೇ ವಯಸ್ಸಿಗೆ ಸಂಸತ್​ ಪ್ರವೇಶಿಸುತ್ತಿರುವ ದೇಶದ ಕಿರಿಯ ಸಂಸದ! ಯಾರು ಈತ?

ಅಖಿಲೇಶ್​ ಯಾದವ್​ ಮತ್ತು ಅವದೇಶ್​ ಪ್ರಸಾದ್

ಅಯೋಧ್ಯೆಯಲ್ಲಿ ಬೀದಿ ಪ್ರಾಣಿಗಳ ಸಮಸ್ಯೆ

ಅಯೋಧ್ಯೆಯ ಗ್ರಾಮೀಣ ಪ್ರದೇಶದಲ್ಲಿ ಅನೇಕ ಸಮಸ್ಯೆಗಳು ತಾಂಡವವಾಡುತ್ತಿದೆ. ಅದರ ಜೊತೆಗೆ ಬೀದಿ ಪ್ರಾಣಿಗಳಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಪ್ರಮುಖವಾಗಿ ಗೋಶಾಲೆಗಳನ್ನು ನಿರ್ಮಿಸಿದರೂ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಸಮಾಜವಾದಿ ಪಾರ್ಟಿ ಪ್ರಚಾರದ ವೇಳೆ ಬೀದಿ ಪ್ರಾಣಿಗಳ ಸಮಸ್ಯೆಯನ್ನು ಎತ್ತಿಹಿಡಿದರು. ಹಾಗಾಗಿ ಇದು ಬಿಜೆಪಿಗೆ ಕಬ್ಬಿಣದ ಕಡಲೆಯಾಯಿತು. ಪರಿಣಾಮ ರಾಮನೂರಿನಲ್ಲಿ ಸೋಲುಂಡಿತು.

ರಾಮ ಮಂದಿರದ ಅಪೂರ್ಣ ಅಪಶಕುನವಾಯ್ತಾ?

ರಾಮ ಮಂದಿರ ಉದ್ಘಾಟನೆಯಾದರೂ ಇನ್ನೂ ಪೂರ್ತಿಯಾಗಿಲ್ಲ. ಇದರ ಕೆಲಸಗಳು ನಡೆಯುತ್ತಲೇ ಇವೆ. ಹೀಗಾಗಿ ಜನರು ಅಪೂರ್ಣವಾದ ರಾಮಮಂದಿರದ ಬಗ್ಗೆ ಕಿಡಿಕಾರುತ್ತಿದ್ದಾರೆ. ಲೋಕಸಭಾ ಚುನಾವಣೆ ಮೇಲೆ ಅಪೂರ್ಣವಾದ ರಾಮಮಂದಿರ ವಿಚಾರವಾಗಿ ಉಳಿದ ಪ್ರಕ್ಷಗಳು ಪ್ರಚಾರ ಕೈಗೊಂಡವು. ಇದು ಕೂಡ ಬಿಜೆಪಿ ಸೋಲಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ ಮಂದಿರ ಅಪೂರ್ಣವೇ ಮುಳುವಾಯ್ತಾ? ಅಯೋಧ್ಯೆಯಲ್ಲಿ BJP ಸೋಲಲು ಪ್ರಮುಖ 5 ಕಾರಣಗಳಿವು

https://newsfirstlive.com/wp-content/uploads/2024/06/Ayodhya.jpg

Load More